ದಕ್ಷಿಣ ಕನ್ನಡ ಚಾಂಪಿಯನ್‌

7
ರಾಜ್ಯಮಟ್ಟದ 14 ವರ್ಷದೊಳಗಿನ ಬಾಲಕ, ಬಾಲಕಿಯರ ಅಥ್ಲೆಟಿಕ್ಸ್ ಕೂಟ

ದಕ್ಷಿಣ ಕನ್ನಡ ಚಾಂಪಿಯನ್‌

Published:
Updated:
Deccan Herald

ತುಮಕೂರು: ದಕ್ಷಿಣ ಕನ್ನಡ ಜಿಲ್ಲಾ ತಂಡದವರು ಇಲ್ಲಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 14 ವರ್ಷದೊಳಗಿನ ಬಾಲಕ, ಬಾಲಕಿಯರ ರಾಜ್ಯ ಅಥ್ಲೆಟಿಕ್ಸ್ ಕ್ರೀಡಾಕೂಟದ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದರು.

ಬಾಲಕರ ವಿಭಾಗದಲ್ಲಿ ಸಿ.ಎಚ್. ರಿಹಾನ್ ಮತ್ತು ಬಾಲಕಿಯರ ವಿಭಾಗದಲ್ಲಿ ಕೆ.ಇ ರೂಪ ವೈಯಕ್ತಿಕ ಚಾಂಪಿಯನ್‌ ಆಗಿ ಹೊರಹೊಮ್ಮಿದರು. ದಕ್ಷಿಣ ಕನ್ನಡದ ಬಾಲಕರು ಮತ್ತು ಬಾಲಕಿಯರು ತಂಡ ವಿಭಾಗದಲ್ಲೂ ಚಾಂಪಿಯನ್ ಆದರು.

400 ಮೀಟರ್ಸ್‌ ಓಟದಲ್ಲಿ ಅಮೋಘ ಸಾಮರ್ಥ್ಯ ಮೆರೆದ ದಕ್ಷಿಣ ಕನ್ನಡ ಜಿಲ್ಲೆಯ ಸಿ.ಎಚ್.ರೆಹಾನ್ ಅವರು ಕೂಟ ದಾಖಲೆ ಬರೆದರು. ಅವರು 53.16 ಸೆಂಕೆಡುಗಳಲ್ಲಿ ಗುರಿ ಮುಟ್ಟಿದರು. 2011ರಲ್ಲಿ ವಿದ್ಯಾನಗರ ಕ್ರೀಡಾ ಶಾಲೆಯ ಆರ್. ಹನುಮಂತ 55.00 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು.

ಬಾಲಕಿಯರ ವಿಭಾಗದಲ್ಲಿ ಉಡುಪಿಯ ತೃಷಾ ಹೊಸ ಕೂಟ ದಾಖಲೆ ಮಾಡಿದರು. 1 ನಿಮಿಷ 2.77 ಸೆಕೆಂಡುಗಳಲ್ಲಿ ಅವರು ಗುರಿ ಮುಟ್ಟಿದರು. ದಕ್ಷಿಣ ಕನ್ನಡದ ವೆನಿಸ್ ಕ್ವಾಡ್ರೆಸ್ ಅವರು 1 ನಿಮಿಷ 3 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದ್ದು, ಈ ಹಿಂದಿನ ದಾಖಲೆ‌ಯಾಗಿತ್ತು.

ಬಾಲಕಿಯರ 200 ಮೀಟರ್ಸ್ ಓಟದಲ್ಲಿ ಉಡುಪಿಯ ಅಂಕಿತ (27.1 ಸೆಕೆಂಡು) ಕೂಟ ದಾಖಲೆ ಮಾಡಿದರು. ದಕ್ಷಿಣ ಕನ್ನಡದ ಆರ್.ವರ್ಷ(27.50 ಸೆಕೆಂಡು) ಅವರ ದಾಖಲೆಯನ್ನು ಅಂಕಿತ ಮುರಿದರು.

ಕೊನೆಯ ದಿನದ ಫಲಿತಾಂಶಗಳು
ಬಾಲಕರ ವಿಭಾಗ: 200 ಮೀಟರ್ಸ್ ಓಟ: ಯು.ಎಸ್.ಕಿರಣ್ (ದಕ್ಷಿಣ ಕನ್ನಡ) –1 ಕಾಲ:24.30 ಸೆಕೆಂಡು, ಬಸವರಾಜ್ (ಉಡು‍ಪಿ)–2, ಯು.ಭೀಮೇಶ್(ಬಳ್ಳಾರಿ)–3; ಲಾಂಗ್‌ ಜಂಪ್‌: ದೀಪೇಶ್ (ಬೆಂಗಳೂರು ದಕ್ಷಿಣ)–1. ದೂರ:5.91 ಮೀಟರ್ಸ್‌, ರಮೇಶ್ (ಬೆಂಗಳೂರು ಉತ್ತರ)–2, ದುರ್ಗಪ್ಪ (ಬೆಂಗಳೂರು ಉತ್ತರ)–3; ಶಾಟ್‌ಪಟ್‌: ಗಣೇಶ್ ಎಚ್.ಒಡೆಯರ್ (ದಕ್ಷಿಣ ಕನ್ನಡ)–1 ದೂರ: 13.59 ಮೀಟರ್ಸ್‌, ಆಯಾನ್‌ಖಾನ್ಹುಲಕೊಪ್ಪ (ಧಾರವಾಡ)–2, ಎಸ್.ಆರ್ಯ (ಉಡುಪಿ)–3; ಡಿಸ್ಕಸ್‌ ಥ್ರೋ: ಎಂ.ಎಸ್.ಶ್ರೀಕಾಂತ್ (ಬಳ್ಳಾರಿ)–1. ದೂರ: 44.15 ಮೀಟರ್ಸ್‌, ಕುಲದೀಪ್‌ಕುಮಾರ್ (ಉತ್ತರ ಕನ್ನಡ)–2, ಗಣೇಶ್ ಎಚ್.ಒಡೆಯರ್ (ದಕ್ಷಿಣ ಕನ್ನಡ)–3; 80 ಮೀಟರ್ ಹರ್ಡಲ್ಸ್: ಈಶ್ವರ ಎನ್.ಗೌಡ (ಉತ್ತರ ಕನ್ನಡ)–1. ಕಾಲ:12.40 ಸೆಕೆಂಡು, ಎಂ.ಎನ್.ಸತ್ಯನಾರಾಯಣ (ದಕ್ಷಿಣ ಕನ್ನಡ)–2, ಸಿ.ಹನುಮಂತ (ಬೆಂಗಳೂರು ಉತ್ತರ)–3; 400 ಮೀಟರ್ಸ್: ಸಿ.ಎಚ್. ರಿಹಾನ್ (ದಕ್ಷಿಣ ಕನ್ನಡ)–1. ಕಾಲ: 53.16 ಸೆಕೆಂಡು, ರಮೇಶ್ (ವಿದ್ಯಾನಗರ ಕ್ರೀಡಾ ಶಾಲೆ)–2, ಮುತ್ತಪ್ಪ ಶಂಕರಕಟ್ಟೆ (ಚಿಕ್ಕೋಡಿ)–3; 100 ಮೀಟರ್ಸ್ ಓಟ: ಸಿ.ಎಚ್.ರಿಹಾನ್ (ದಕ್ಷಿಣ ಕನ್ನಡ)–1. ಕಾಲ: 11.92 ಸೆಕೆಂಡು. ಬಸವರಾಜು (ಉಡುಪಿ)–2, ಭೀಮೇಶ್ (ಬಳ್ಳಾರಿ)–3.

ಬಾಲಕಿಯರ ವಿಭಾಗ: 200 ಮೀಟರ್ಸ್ ಓಟ: ಅಂಕಿತ (ಉಡುಪಿ)–1. ಕಾಲ: 27.10 ಸೆಕೆಂಡು, ಕೆ.ಇ.ರೂಪ (ದಕ್ಷಿಣ ಕನ್ನಡ)–2, ತೃಷಾ (ಉಡುಪಿ)–3; ಶಾಟ್‌ಪಟ್‌: ಶಿಫಾ ಸಂಶೀಲ್ ತಹಶೀಲ್ದಾರ್ (ಬೆಳಗಾವಿ)–1. ದೂರ: 10.02 ಮೀಟರ್ಸ್‌, ಹರ್ಷಿತಾ ವಿ.ಸಾಲಿಯಾನ್ (ದಕ್ಷಿಣ ಕನ್ನಡ)–2, ಎಸ್.ಕೆ.ರಿಯಾ (ಮೈಸೂರು)–3; ಡಿಸ್ಕಸ್‌ ಥ್ರೋ: ಕೆ.ವಿದ್ಯಾ (ದಾವಣಗೆರೆ)–1. ದೂರ: 27.03 ಮೀಟರ್ಸ್‌, ಮಾಧುರ್ಯ (ಉಡುಪಿ)–2, ಆರ್.ಅನ್ನಪೂರ್ಣ (ಮೈಸೂರು)–3; 80 ಮೀಟರ್ಸ್‌ ಹರ್ಡಲ್ಸ್: ಬಿ.ಐ.ಅಂಕಿತ (ದಕ್ಷಿಣ ಕನ್ನಡ)–1. ಕಾಲ: 13.80 ಸೆಕೆಂಡು. ಪ್ರಿನ್ಸಿಟಾ ಎಂ.ಸಿದ್ದಿ (ಉತ್ತರ ಕನ್ನಡ)–2, ಕೆ.ಎ.ಅನಘ ( ದಕ್ಷಿಣ ಕನ್ನಡ)–3; 400 ಮೀಟರ್ಸ್ ಓಟ: ತೃಷಾ (ಉಡುಪಿ)–1. ಕಾಲ: 1ನಿಮಿಷ 2.77 ಸೆಕೆಂಡು (ಕೂಟ ದಾಖಲೆ). ಕೆ.ಇ.ರೂಪ (ದಕ್ಷಿಣ ಕನ್ನಡ)–2, ಜಿ.ಮನುಶ್ರೀ(ಬೆಂಗಳೂರು ಉತ್ತರ)–3; ಹೈಜಂಪ್‌: ಗೌತಮಿ(ಶಿವಮೊಗ್ಗ)–1. ಎತ್ತರ: 1.36. ಮೀಟರ್, ಯು.ನಿಸರ್ಗ(ಚಿಕ್ಕಮಗಳೂರು)–2, ಎಂ.ಚೈತ್ರಿಕ(ದಕ್ಷಿಣ ಕನ್ನಡ)–3;  100 ಮೀಟರ್ಸ್ ಓಟ: ಬಿ.ಐ.ಅಂಕಿತ (ಉಡುಪಿ)–1. ಕಾಲ: 13 ಸೆಕೆಂಡು, ಡಿಂಪಲ್ ಎಸ್.ಬಂಗೇರಾ(ದಕ್ಷಿಣ ಕನ್ನಡ)–2, ದಿವ್ಯ(ಬೆಂಗಳೂರು ದಕ್ಷಿಣ)–3.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !