ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್ಸ್‌: ದಕ್ಷಿಣ ಕನ್ನಡ ತಂಡ ಚಾಂಪಿಯನ್

Last Updated 22 ಫೆಬ್ರುವರಿ 2023, 22:30 IST
ಅಕ್ಷರ ಗಾತ್ರ

ಮೈಸೂರು: ದಕ್ಷಿಣ ಕನ್ನಡ ಜಿಲ್ಲೆ ತಂಡದವರು ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್‌ನ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡರು.

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬುಧವಾರ ಮುಕ್ತಾಯವಾದ ಕೂಟದಲ್ಲಿ ದಕ್ಷಿಣ ಕನ್ನಡ ತಂಡದವರು 17ವರ್ಷದೊಳಗಿನ ವಿಭಾಗದಲ್ಲಿ 63 ಅಂಕ ಗಳಿಸಿ (8 ಚಿನ್ನ, 5 ಬೆಳ್ಳಿ, 3 ಕಂಚು) ಟ್ರೋಫಿ ತಮ್ಮದಾಗಿಸಿಕೊಂಡರು. 14 ವರ್ಷದೊಳಗಿನವರ ವಿಭಾಗದಲ್ಲೂ 60 ಅಂಕ (7 ಚಿನ್ನ, 5 ಬೆಳ್ಳಿ, 5 ಕಂಚು) ಗಳಿಸಿ ಚಾಂಪಿಯನ್‌ ಆದರು.

100 ಮೀ ಹಾಗೂ 200 ಮೀ ಓಟದಲ್ಲಿ ಚಿನ್ನ ಗೆದ್ದ ದಕ್ಷಿಣ ಕನ್ನಡ ಜಿಲ್ಲೆಯ ಸೇಂಟ್‌ ಅಲೋಶಿಯಸ್‌ ಶಾಲೆಯ ಹಸ್ಮಿತ್‌ ಎ. ಸಾಲಿಯಾನ 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ವೈಯಕ್ತಿಕ ಬಹುಮಾನ ಗೆದ್ದರೆ, ಬಾಲಕಿಯರ ವಿಭಾಗದಲ್ಲಿ ತಲಾ 2 ಚಿನ್ನ ಗೆದ್ದ ಬೆಂಗಳೂರಿನ ವಿದ್ಯಾನಗರ ಸರ್ಕಾರಿ ಕ್ರೀಡಾ ಶಾಲೆಯ ಪ್ರಣತಿ ಹಾಗೂ ಧಾರವಾಡದ ಆರ್‌ಎನ್‌ಎಸ್‌ ಸರ್ಕಾರಿ ಪ್ರೌಢಶಾಲೆಯ ಶಿಲ್ಪಾ ಹೊಸಮನಿ ವೈಯಕ್ತಿಕ ಚಾಂಪಿಯನ್‌ ಆದರು.

14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ಮಲ್ಲೇಶ್ವರದ ನಿರ್ಮಲಾ ರಾಣಿ ಶಾಲೆಯ ಚೇತನಾ ಭಾಸ್ಕರ, ಬಾಲಕರ ವಿಭಾಗದಲ್ಲಿ ಕೋಲಾರದ ಬಂಗಾರಪೇಟೆ ಕಳವಂಚಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಣ್ಣೆಪ್ಪ ವೈಯಕ್ತಿಕ ಚಾಂಪಿಯನ್‌
ಆದರು.

ಫಲಿತಾಂಶ: 17 ವರ್ಷದೊಳಗಿನ ಬಾಲಕಿಯರ ವಿಭಾಗ: ಹ್ಯಾಮರ್‌ ಥ್ರೋ: ಧನ್ಯಾ ನಾಯಕ (ಶಿರಸಿ, ದೂರ: 38.90 ಮೀ)–1, ತ್ರಿಷಿಕಾ (ಬಳ್ಳಾರಿ)–2, ಎನ್.ದಿವ್ಯಾ (ಶಿವಮೊಗ್ಗ)–3. 800 ಮೀ ಓಟ: ಶಿಲ್ಪಾ ಹೊಸಮನಿ (ಧಾರವಾಡ, ಸಮಯ: 2 ನಿ 22.6 ಸೆ)–1, ಎಂ.ಎಂ.ಸ್ನೇಹಾ (ಕೊಡಗು)–2, ಕಾವ್ಯಾ ಅಬ್ಬಿಗೇರಿ (ಗದಗ)–3. ಪೋಲ್‌ವಾಲ್ಟ್: ಧನ್ಯಾ (ದಕ್ಷಿಣ ಕನ್ನಡ, ಎತ್ತರ: 2.30 ಮೀ)–1, ಚಿತ್ರಾಕ್ಷಿ (ಉತ್ತರ ಕನ್ನಡ)–2, ನಾಗವೇಣಿ (ಶಿವಮೊಗ್ಗ)–3. ಜಾವೆಲಿನ್‌ ಥ್ರೋ: ದಿಶಾ ನೆಲವಾಡೆ (ಬೀದರ್‌, ದೂರ: 40.55 ಮೀ)–1, ಸಿ.ಜೆ.ಭವ್ಯಾ (ಹಾಸನ)–2, ಸರೋನಿ ರೋಜಾ (ಚಾಮರಾಜನಗರ)–3. 3,000 ಮೀ ಓಟ: ಪ್ರಣತಿ (ಬೆಂಗಳೂರು ಉತ್ತರ, ಸಮಯ: 10 ನಿ. 48 ಸೆ)–1, ಎಂ.ಎನ್.ಸುಷ್ಮಾ (ಹಾಸನ)–2, ಎಚ್‌.ಎಂ.ಪ್ರಿಯಾ (ಮೈಸೂರು)–3. 100 ಮೀ ಹರ್ಡಲ್ಸ್: ಗೌರಂಗಿ ಗೌಡ (ಶಿವಮೊಗ್ಗ, ಸಮಯ: 16.03 ಸೆಕೆಂಡ್‌)–1, ಮಾನ್ಯ (ದಕ್ಷಿಣ ಕನ್ನಡ)–2, ಕೆ.ಬಿ.ಅನನ್ಯಾ (ದಕ್ಷಿಣ ಕನ್ನಡ)–3. 4x100 ರಿಲೇ: ಧಾರವಾಡ (ಸಮಯ: 54.1 ಸೆಕೆಂಡ್‌)–1, ಕೊಡಗು–2, ಬಾಗಲಕೋಟೆ–3.

ಬಾಲಕರ ವಿಭಾಗ: 4x100 ಮೀ ರಿಲೇ: ಆಳ್ವಾಸ್‌ ಪ್ರೌಢಶಾಲೆ (ದಕ್ಷಿಣ ಕನ್ನಡ, ಸಮಯ: 44.4 ಸೆಕೆಂಡ್)–1, ವಿದ್ಯಾನಗರ ಕ್ರೀಡಾ ಶಾಲೆ (ಬೆಂಗಳೂರು ಉತ್ತರ)–2, ಜಿಎಚ್‌ಎಸ್‌ ಮುಂಡಗೋಡು (ಶಿರಸಿ)–3. ಪೋಲ್‌ವಾಲ್ಟ್: ಶ್ರವಣ್‌ ಹೆಗಡೆ (ಶಿರಸಿ, ಎತ್ತರ: 2.90 ಮೀ)–1, ಮೊಹಮ್ಮದ್‌ ತಾಹ (ಉತ್ತರ ಕನ್ನಡ)–2, ಅಭಿಜಿತ್ (ಉತ್ತರ ಕನ್ನಡ)–3. 800 ಮೀ ಓಟ: ಸೈಯದ್‌ ಶಬ್ಬೀರ್ (ಬೆಂಗಳೂರು ಉತ್ತರ, ಸಮಯ: 2 ನಿ 03.3 ಸೆ)–1, ನಿತಿನ್‌ ಗೌಡ (ಬೆಂಗಳೂರು ಗ್ರಾಮಾಂತರ)–2, ದಯಾನಂದ (ದಕ್ಷಿಣ ಕನ್ನಡ)–3. 3000 ಮೀ ಓಟ: ಪ್ರಶಾಂತ್ (ಬಾಗಲಕೋಟೆ, ಸಮಯ: 9 ನಿ 21 ಸೆ)–1, ದೀಕ್ಷಿತ್‌ (ಕೊಡಗು)–2, ದರ್ಶನ್‌ (ತುಮಕೂರು)–3. 110 ಮೀ ಹರ್ಡಲ್ಸ್: ತೇಜಲ್‌ (ದ.ಕ, ಸಮಯ: 16.1 ಸೆ)–1, ಪುನೀತ್‌ ನಾಯಕ್ (ರಾಮನಗರ)-2, ಮೊಹಮ್ಮದ್‌ ತೌಫಿಲ್ (ದ.ಕ)–3

14 ವರ್ಷದೊಳಗಿನ ಬಾಲಕರ ವಿಭಾಗ: 4x100 ಮೀ ರಿಲೇ: ಸೇಂಟ್‌ ಸಿಸಿಲಿ ಶಾಲೆ (ಉಡುಪಿ, ಸಮಯ: 50.25 ಸೆಕೆಂಡ್)–1, ವಿದ್ಯಾನಗರ ಕ್ರೀಡಾ ಶಾಲೆ (ಬೆಂಗಳೂರು ಉತ್ತರ)–2, ಸಾಮ್ನಾಮತಿ ಶಾಲೆ (ಚಿಕ್ಕೋಡಿ)–3. 200 ಮೀ ಓಟ: ಶ್ರೀಧರ ದೇಸಾಯಿ (ಬೆಂಗಳೂರು ಉತ್ತರ, ಸಮಯ: 24.18 ಸೆಕೆಂಡ್)–1, ಮಂಜುನಾಥ (ಉಡುಪಿ)–2, ಕೆವಿನ್ ಸಿದ್ಧಿ (ಶಿರಸಿ)–3. ಹೈ ಜಂಪ್‌: ಎಂ.ಎಸ್‌.ಸಂದೀಪ್ (ಚಿಕ್ಕಬಳ್ಳಾಪುರ, ಎತ್ತರ: 1.60 ಮೀ)–1, ಮೊಹಮ್ಮದ್‌ ಹಫೀಜ್‌ (ದ.ಕ)–2, ರಾಹುಲ್ (ಮೈಸೂರು)–3. ಶಾಟ್‌ಪಟ್‌: ಆಶಿಷ್‌ ಕುಲ್ಲು (ದ.ಕ, ದೂರ: 12.62 ಮೀ)–1, ಅಣ್ಣೆಪ್ಪ (ಕೋಲಾರ)–2, ಸಂತೋಷ (ಹಾಸನ)–3.

ಬಾಲಕಿಯರ ವಿಭಾಗ: 4x100 ಮೀ. ರಿಲೇ: ಸೇಂಟ್‌ ಆ್ಯನ್ಸ್‌ ಶಾಲೆ (ದ.ಕ, ಸಮಯ: 55.37 ಸೆ)–1, ಸೆಕ್ರೆಡ್‌ ಹಾರ್ಟ್ ಶಾಲೆ (ಶಿವಮೊಗ್ಗ)–2, ಕೂಡಿಗೆ ಕ್ರೀಡಾ ಶಾಲೆ (ಕೊಡಗು)–3. 200 ಮೀ ಓಟ: ಚೇತನಾ ಭಾಸ್ಕರ್‌ (ಬೆಂಗಳೂರು, ಸಮಯ: 26.79 ಸೆಕೆಂಡ್‌)–1, ಇರಾಮ್‌ಷೇಕ್ (ಶಿವಮೊಗ್ಗ)–2, ಸುಪ್ರಿಯಾ (ಉತ್ತರ ಕನ್ನಡ)–3. ಡಿಸ್ಕಸ್‌ ಥ್ರೋ: ಮಾನ್ಯ (ಉಡುಪಿ, ದೂರ: 26.15 ಮೀ)–1, ಕಾಸ್ವಿ ಸುನಿಲ್ (ಮಂಡ್ಯ)–2, ‍ಪೂರ್ಣಿಮಾ (ಬೆಳಗಾವಿ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT