ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕ್ಲಿಂಗ್‌: ಬಾಗಲಕೋಟೆ ಚಾಂಪಿಯನ್‌

Last Updated 23 ಅಕ್ಟೋಬರ್ 2022, 20:45 IST
ಅಕ್ಷರ ಗಾತ್ರ

ಮೈಸೂರು: ಬಾಗಲಕೋಟೆ ಜಿಲ್ಲೆಯ ಸೈಕ್ಲಿಸ್ಟ್‌ಗಳು 35 ಅಂಕಗಳನ್ನು ಪಡೆದು ಜಿಲ್ಲಾ ಅಮೇಚೂರ್‌ ಸೈಕ್ಲಿಂಗ್ ಸಂಸ್ಥೆ ಆಶ್ರಯದಲ್ಲಿ ಭಾನುವಾರ ಮುಕ್ತಾಯವಾದ 13ನೇ ರಾಜ್ಯ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು. ವಿಜಯಪುರ ಜಿಲ್ಲೆ (33 ಅಂಕ) ರನ್ನರ್‌ಅಪ್‌ ಸ್ಥಾನ ಪಡೆಯಿತು.

ಭಾನುವಾರ ನಡೆದ 16 ವರ್ಷದೊಳಗಿನವರ ಬಾಲಕರ 20 ಕಿ.ಮೀ. ವಿಭಾಗದಲ್ಲಿ ವಿಜಯಪುರ ಜಿಲ್ಲೆಯ ಸುಜಲ್‌ ಜಾಧವ್‌ ಪ್ರಥಮ ಸ್ಥಾನ ಗಳಿಸಿದರು. ಮೈಸೂರಿನ ಧನಂಜಯ ತಿಪ್ಪಣ್ಣವರ ದ್ವಿತೀಯ, ವಿಜಯಪುರ ಭೀರಪ್ಪ ನವಲಿ 3ನೇ ಸ್ಥಾನ ಪಡೆದರು.

ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ಪ್ರೇರಣಾ ಶ್ರವಣಕುಮಾರ ಮೊದಲ ಸ್ಥಾನ ಪಡೆದರೆ, ಮೈಸೂರಿನ ಆರಾಧನಾ ಸಂತೋಷ ದ್ವಿತೀಯ ಹಾಗೂ ಗದಗದ ಕೀರ್ತಿ ನಾಯಕ 3ನೇ ಸ್ಥಾನ ಗಳಿಸಿದರು.

18 ವರ್ಷದ ಬಾಲಕರ ವಿಭಾಗದಲ್ಲಿ ವಿಜಯಪುರ ಜಿಲ್ಲೆಯವರು ಪಾರಮ್ಯ ಮೆರೆದರು. ಸಂಭಾಜಿ ಜಾಧವ ಮೊದಲಿಗರಾದರೆ, ಪ್ರತಾಪ ಪಡಚಿ ದ್ವಿತೀಯ ಸ್ಥಾನ ಹಾಗೂ ರಮೇಶ ಮುಳಗೊಂಡಿ ತೃತೀಯ ಸ್ಥಾನ ಪಡೆದರು.

ಬಾಲಕಿಯರ ವಿಭಾಗದಲ್ಲಿ ಅಂಕಿತಾ ರಾಥೋಡ ಮೊದಲ ಸ್ಥಾನ ಪಡೆದರೆ, ಬಾಗಲಕೋಟೆಯ ನಂದಾ ಚಿಚಕಂಡಿ ದ್ವಿತೀಯ ಸ್ಥಾನ ಮತ್ತು ಸವಿತಾ ಆಡಗಲ್‌ ತೃತೀಯ ಸ್ಥಾನ ಗಳಿಸಿದರು.

23 ವರ್ಷದೊಳಗಿನವರ ಪುರುಷರ ವಿಭಾಗದಲ್ಲಿ ವಿಜಯಪುರದ ಸಚಿನ್‌ ರಂಜಣಗಿ ಮೊದಲ ಸ್ಥಾನ ಪಡೆದರೆ, ಬೆಂಗಳೂರಿನ ಜಿಶಾನ್‌ ಎಂ. ದ್ವಿತೀಯ ಸ್ಥಾನ ಹಾಗೂ ಬೆಳಗಾವಿಯ ಲಾಯಪ್ಪ ಮುಧೋಳ 3ನೇ ಸ್ಥಾನ ಪಡೆದರು.

ಪುರುಷರ 40 ಕಿ.ಮೀ. ವಿಭಾಗದಲ್ಲಿ ಬಾಗಲಕೋಟೆಯ ನಂದೆಪ್ಪ ಸವಡಿ ಪ್ರಥಮ, ಬೆಂಗಳೂರಿನ ಗಗನರೆಡ್ಡಿ ದ್ವಿತೀಯ ಮತ್ತು ಧಾರವಾಡದ ಶ್ರೀನಿಧಿ ಉರಲಾ ತೃತೀಯ ಸ್ಥಾನ ಗಳಿಸಿದರು. ಮಹಿಳೆಯರ 10 ಕಿ.ಮೀ. ವಿಭಾಗದಲ್ಲಿ ವಿಜಯಪುರದ ಸಹನಾ ಕುಡಿಗನೂರ, ಬಾಗಲಕೋಟೆಯ ಸಾವಿತ್ರಿ ಹೆಬ್ಬಾಳಟ್ಟಿ ಹಾಗೂ ಚೈತ್ರಾ ಬೋರ್ಜಿ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರು.

44 ಮಂದಿಗೆ ರಾಷ್ಟ್ರಮಟ್ಟಕ್ಕೆ: ‘ಎರಡು ದಿನಗಳವರೆಗೆ ನಡೆದ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ 44 ಮಂದಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ಮೈಸೂರಿನವರು ಐವರು ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಡಿಸೆಂಬರ್‌ನಲ್ಲಿ ಸ್ಪರ್ಧೆ ನಡೆಯಲಿದ್ದು, ಸ್ಥಳ–ದಿನಾಂಕ ನಿಗದಿಯಾಗಬೇಕಿದೆ’ ಎಂದು ಸಂಸ್ಥೆಯ ಕಾರ್ಯದರ್ಶಿ ಎನ್‌.ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT