ಗುರುವಾರ , ಅಕ್ಟೋಬರ್ 24, 2019
21 °C
ರಾಜ್ಯ ಮಟ್ಟದ ಫ್ಲೋರ್‌ ಬಾಲ್‌ ಪಂದ್ಯಾಟ

ಫ್ಲೋರ್‌ ಬಾಲ್‌: ಬೆಂಗಳೂರು ಉತ್ತರ ದಕ್ಷಿಣ ಕನ್ನಡ ತಂಡಗಳಿಗೆ ಗೆಲುವು

Published:
Updated:
Prajavani

ಮಂಗಳೂರು: ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಫ್ಲೋರ್‌ ಬಾಲ್‌ ಪಂದ್ಯಾಟದ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಕ್ರಮವಾಗಿ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಂಡಗಳು ಪ್ರಶಸ್ತಿ ಮುಡಿಗೇರಿಸಿಕೊಂಡವು.

ಮಂಗಳೂರಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸೇಂಟ್‌ ಆ್ಯಗ್ನೆಸ್‌ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಭಾನುವಾರ ಸೇಂಟ್‌ ಆ್ಯಗ್ನೆಸ್‌ ಕಾಲೇಜು ಮೈದಾನದಲ್ಲಿ ನಡೆದ ಬಾಲಕರ ವಿಭಾಗದ ಮೊದಲ ಸೆಮಿಫೈನಲ್‌ ಸ್ಪರ್ಧೆಯಲ್ಲಿ ಬೆಂಗಳೂರು ಉತ್ತರ ತಂಡವು ಮಂಡ್ಯದ ವಿರುದ್ಧ (1–0), ದಕ್ಷಿಣ ಕನ್ನಡ ತಂಡವು ಉಡುಪಿ ವಿರುದ್ಧ (11–1) ಪಾಯಿಂಟ್‌ ಅಂತರದ ಗೆಲುವು ಸಾಧಿಸಿ ಫೈನಲ್‌ಗೆ ಅರ್ಹತೆ ಪಡೆದಿದ್ದವು. ಫೈನಲ್‌ಲ್ಲಿ ಬೆಂಗಳೂರು ಉತ್ತರ ತಂಡವು ದಕ್ಷಿಣ ಕನ್ನಡ ತಂಡದ ವಿರುದ್ಧ (3–1) ಪಾಯಿಂಟ್‌ ಅಂತರದ ಗೆಲುವು ಸಾಧಿಸಿತು. ದಕ್ಷಿಣ ಕನ್ನಡ ರನ್ನರ್‌ ಅಪ್‌ ಸ್ಥಾನಕ್ಕೆ ಖುಷಿ ಪಟ್ಟಿತು.

ನಂತರ ನಡೆದ ಬಾಲಕಿಯರ ವಿಭಾಗದ ಮೊದಲ ಹಂತದ ಸೆಮಿಫೈನಲ್‌ನಲ್ಲಿ ಬೆಂಗಳೂರು ಉತ್ತರ ತಂಡವು ಮಂಡ್ಯದ ವಿರುದ್ಧ(3–1), ದಕ್ಷಿಣ ಕನ್ನಡ ತಂಡವು ಉಡುಪಿ ವಿರುದ್ಧ (18–1) ಪಾಯಿಂಟ್‌ ಅಂತರದ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದವು. ಫೈನಲ್‌ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ತಂಡವು ಬೆಂಗಳೂರು ಉತ್ತರ ತಂಡದ ವಿರುದ್ಧ (3–1) ಪಾಯಿಂಟ್‌ ದಾಖಲಿಸಿ ವಿನ್ನರ್‌ ಪ್ರಶಸ್ತಿ ಪಡೆಯಿತು.

ಬೆಂಗಳೂರು ಉತ್ತರ ತಂಡದ ಚಿರಾಗ್‌ ಗೌಡ, ಧನುಷ್‌, ದಕ್ಷಿಣ ಕನ್ನಡ ತಂಡದ ರಿಶ್ಚಿಕಾ ತಮ್ಮಯ್ಯ ಹಾಗೂ ಶೋಭಾ ಎಡಪದವು ಉತ್ತಮ ಆಟ ಪ್ರದರ್ಶಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)