ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜು: ಉತ್ಕರ್ಷ್‌ ಪಾಟೀಲ ಮಿಂಚು

ಈಜು ಚಾಂಪಿಯನ್‌ಷಿಪ್‌; ಗಮನ ಸೆಳೆದ ಸುವನ
Last Updated 1 ಜೂನ್ 2019, 20:15 IST
ಅಕ್ಷರ ಗಾತ್ರ

ಮೈಸೂರು: ಬಿಎಸಿಯ ಉತ್ಕರ್ಷ್‌ ಎಸ್‌.ಪಾಟೀಲ ಅವರು ರಾಜ್ಯ ಜೂನಿಯರ್‌ ಮತ್ತು ಸಬ್‌ ಜೂನಿಯರ್‌ ಈಜು ಚಾಂಪಿ ಯನ್‌ಷಿಪ್‌ನಲ್ಲಿ ಹೊಸ ಕೂಟ ದಾಖಲೆ ಸ್ಥಾಪಿಸಿದರು.

ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬಾಲಕರ ‘ಗುಂಪು–2’ ವಿಭಾಗದ 200 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಅವರು 2 ನಿ. 18.7 ಸೆಕೆಂಡುಗಳೊಂದಿಗೆ ಗುರಿ ತಲುಪಿ ದಾಖಲೆಗೆ ಭಾಜನರಾದರು.

ಸುವನ ಮತ್ತೊಂದು ದಾಖಲೆ: ಡಾಲ್ಫಿನ್‌ ಈಜು ಕೇಂದ್ರದ ಸುವನ ಸಿ.ಭಾಸ್ಕರ್‌ ಶನಿವಾರ ಮತ್ತೊಂದು ದಾಖಲೆ ಸ್ಥಾಪಿಸಿದರು. ಬಾಲಕಿಯರ ‘ಗುಂಪು–1’ ವಿಭಾಗದ 200 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ 2 ನಿ. 28.21 ಸೆ.ಗಳಲ್ಲಿ ಗುರಿ ತಲುಪಿದರು.

ರಿಧಿಮಾ ವೀರೇಂದ್ರ ಕುಮಾರ್‌ ಅವರು ಬಾಲಕಿಯರ ಗುಂಪು–2ರ 200 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಫಲಿತಾಂಶ: ಬಾಲಕರ ವಿಭಾಗ: 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ವೈಷ್ಣವ್‌ ಹೆಗ್ಡೆ (ಬಿಎಸ್‌ಆರ್‌ಸಿ)–1, ಎಸ್‌.ಸುನೀಶ್‌ (ಬಿಎಸ್‌ಆರ್‌ಸಿ)–2, ಶ್ರೀಹರಿ ನಟರಾಜ್ (ಬಿಎಸ್‌ಆರ್‌ಸಿ)–3. ಕಾಲ: 29.98 ಸೆ; 100 ಮೀ. ಫ್ರೀಸ್ಟೈಲ್‌: ಶ್ರೀಹರಿ ನಟರಾಜ್ (ಬಿಎಸ್‌ಆರ್‌ಸಿ)–1, ಎಸ್‌.ಶಿವ (ಬಿಎಸಿ)–2, ಕರಣ್‌ ಕೆ.ರಾಜು (ಬಿಎಸಿ)–3. ಕಾಲ: 51.65 ಸೆ; ಗುಂಪು–1: 50 ಮೀ. ಬ್ರೆಸ್ಟ್‌ಸ್ಟ್ರೋಕ್: ಐನೇಶ್‌ ರೇ (ಬಿಎಸ್‌ಆರ್‌ಸಿ)–1, ಎಸ್‌.ಹಿತೇನ್‌ ಮಿತ್ತಲ್ (ಜಿಎಎಫ್‌ ರೇ)–2, ಲಿತೇಶ್‌ ಜಿ.ಗೌಡ (ಬಿಎಸಿ)–3. ಕಾಲ: 31.67 ಸೆ; 100 ಮೀ. ಫ್ರೀಸ್ಟೈಲ್‌: ಸಿ.ಜೆ.ಸಂಜಯ್‌ (ಡಾಲ್ಫಿನ್)–1, ತನಿಷ್‌ ಜಾರ್ಜ್‌ ಮ್ಯಾಥ್ಯೂ (ಬಿಎಸ್‌ಆರ್‌ಸಿ)–2, ಆರ್‌.ಸಂಭವ್ (ಬಿಎಸ್‌ಆರ್‌ಸಿ)–3. ಕಾಲ: 54.23 ಸೆ; 200 ಮೀ. ಬ್ಯಾಕ್‌ಸ್ಟ್ರೋಕ್‌: ಆರ್‌.ಭವೇಶ್ (ಬಿಎಸ್‌ಆರ್‌ಸಿ)–1, ಬಿ.ಜತಿನ್‌ (ಬಿಎಸ್‌ಆರ್‌ಸಿ)–2, ಶಿವಾಂಶ್‌ ಸಿಂಗ್ (ಬಿಎಸಿ)–3. ಕಾಲ: 2 ನಿ. 16.23 ಸೆ; 400 ಮೀ.ಫ್ರೀಸ್ಟೈಲ್: ಅನೀಶ್‌ ಎಸ್‌.ಗೌಡ (ಪೂಜಾ ಈಜು ಕೇಂದ್ರ)–1, ಯತೀಶ್‌ ಎಸ್‌.ಗೌಡ (ಬಿಎಸಿ)–2, ಮೋಹಿತ್‌ ವೆಂಟಕೇಶ್ (ಬಿಎಸಿ)–3. ಕಾಲ: 4 ನಿಮಿಷ 12.16 ಸೆ; ಗುಂಪು–2: 200 ಮೀ. ಬ್ಯಾಕ್‌ಸ್ಟ್ರೋಕ್‌: ಉತ್ಕರ್ಷ್‌ ಎಸ್‌.ಪಾಟೀಲ್ (ಬಿಎಸಿ)–1, ಅಕ್ಷಯ ಶೇಟ್‌ (ಬಿಎಸ್ಆರ್‌ಸಿ)–2, ಎಸ್‌.ವಿಶ್ವಾತನ್ (ಪೂಜಾ)–3. ಕಾಲ: 2 ನಿ. 18.07 ಸೆ; 400 ಮೀ. ಫ್ರೀಸ್ಟೈಲ್: ವಿ.ಶಿವಾಂಕ್‌ (ಬಿಎಸಿ)–1, ತರುಣ್‌ ಅರುಣ್ ಗೌಡ (ಬಿಎಸಿ)–2, ಜೆ.ಸಂಜಿತ್‌ (ಬಿಎಸಿ)–3. ಕಾಲ: 4 ನಿ. 36.41 ಸೆ.

ಬಾಲಕಿಯರ ವಿಭಾಗ: 50 ಮೀ. ಬ್ರೆಸ್ಟ್‌ಸ್ಟ್ರೋಕ್: ದೀಕ್ಷಾ ರಮೇಶ್‌ (ಬಿಎಸ್‌ಆರ್‌ಸಿ)–1, ರಿಧಿ ಎಸ್‌. ಬೊಹ್ರಾ (ಪೂಜಾ)–2, ರಿಯಾ ಸಿಂಗ್‌ (ಎನ್‌ಎಸಿ)–3. ಕಾಲ: 36.21 ಸೆ.

100ಮೀ. ಫ್ರೀಸ್ಟೈಲ್‌: ಮಾಳವಿಕಾ ವಿಶ್ವನಾಥ್ (ಬಿಎಸಿ)–1, ರಿಯಾ ಸಿಂಗ್ (ಎನ್‌ಎಸಿ)–2. ಕಾಲ: 1 ನಿ. 0.27 ಸೆ.

ಗುಂಪು–1: 50 ಮೀ. ಬ್ರೆಸ್ಟ್‌ಸ್ಟ್ರೋಕ್: ಆರುಷಿ ಮಂಜುನಾಥ್ (ಡಾಲ್ಫಿನ್)–1, ಸಲೋನಿ ದಲಾಲ್‌ (ಬಿಎಸಿ)–2, ಗುನ್‌ ಮಠ (ಬಿಎಸಿ)–3. ಕಾಲ: 35.58 ಸೆ.

100 ಮೀ. ಫ್ರೀಸ್ಟೈಲ್‌: ಸ್ಮೃತಿ ಮಹಾಲಿಂಗಂ (ಬಿಎಸ್‌ಆರ್‌ಸಿ)–1, ಖುಷಿ ದಿನೇಶ್‌ (ಬಿಎಸಿ)–2, ಬಿ.ಇಂಚರ (ವಿಎಸಿ)–3. ಕಾಲ: 1 ನಿ. 1.32 ಸೆ.

200 ಮೀ. ಬ್ಯಾಕ್‌ಸ್ಟ್ರೋಕ್‌: ಸುವನ ಸಿ.ಭಾಸ್ಕರ್ (ಡಾಲ್ಫಿನ್)–1, ಭೂಮಿಕಾ ಆರ್‌.ಕೇಸರ್ಕರ್ (ಬಿಎಸ್‌ಆರ್‌ಸಿ)–2, ವಿ.ಸಾಕ್ಷಿ (ಎನ್‌ಎಸಿ)–3. ಕಾಲ: 2 ನಿ. 28.21 ಸೆ.

400 ಮೀ. ಫ್ರೀಸ್ಟೈಲ್‌: ಖುಷಿ ದಿನೇಶ್ (ಬಿಎಸಿ)–1, ಜಿ.ಸಾಚಿ (ಬಿಎಸಿ)–2, ದಿವ್ಯಾ ಘೋಷ್‌ (ಬಿಎಸ್‌ಆರ್‌ಸಿ)–3. ಕಾಲ: 4 ನಿ. 38.98 ಸೆ.

ಗುಂಪು–2: 200 ಮಿ. ಬ್ಯಾಕ್‌ಸ್ಟ್ರೋಕ್‌: ರಿಧಿಮಾ ವೀರೇಂದ್ರ ಕುಮಾರ್‌ (ಬಿಎಸಿ)–1, ನೀನಾ ವೆಂಕಟೇಶ್‌ (ಡಾಲ್ಫಿನ್)–2, ರೀತು ಬಿ. (ಬಿಎಸಿ)–3. ಕಾಲ: 2 ನಿ. 31.79 ಸೆ.

400 ಮೀ. ಫ್ರೀಸ್ಟೈಲ್: ಅಶ್ಮಿತಾ ಚಂದ್ರ (ಜಿಎಎಫ್‌ ರೇ)–1, ಸಮನ್ವಿತಾ ರವಿಕುಮಾರ್ (ಎಎಸ್‌ಸಿ)–2, ಅನ್ವಯಿ ಎಸ್. (ಡಾಲ್ಫಿನ್)–3. ಕಾಲ: 4 ನಿ. 54.36 ಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT