ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ಧರಣಿ 1027ನೇ ದಿನಕ್ಕೆ

Last Updated 7 ಮೇ 2018, 11:11 IST
ಅಕ್ಷರ ಗಾತ್ರ

ನರಗುಂದ: ಮಹದಾಯಿಗಾಗಿ ದೆಹಲಿಯಲ್ಲಿ ಹೋರಾಟ ನಡೆಸಿ ಬಂದಿದ್ದೇವೆ. ರಾಷ್ಟ್ರಪತಿಗಳಿಗೂ ಮನವಿ ಮಾಡಿದ್ದೇವೆ. ಒಂದು ತಿಂಗಳ ಗಡುವು ನೀಡಲಾಗಿದೆ. ಮಹದಾಯಿ ವಿವಾದ ನ್ಯಾಯಮಂಡಳಿಯಲ್ಲಿದೆ. ಅಲ್ಲಿಯೇ ಇತ್ಯರ್ಥವಾಗಬೇಕಿದೆ. ಅದರ ಮೇಲೆ ವಿಶ್ವಾಸ ಇಟ್ಟಿದ್ದೇವೆ ಎಂದು ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 1027 ನೇ ದಿನವಾದ ಭಾನುವಾರ ಮಾತನಾಡಿದರು. ಮಹದಾಯಿ ಬಗ್ಗೆ ಪ್ರಧಾನಿಯವರು ಮಾತನಾಡಿದ್ದಾರೆ. ಈ ಮೊದಲೇ ನಾವು ಹಲವಾರು ಸಲ ಮನವಿ ಮಾಡಿದ್ದೇವೆ. ಆಗ ಇದಕ್ಕೆ ಸ್ಪಂದನೆ ದೊರೆಯಲಿಲ್ಲ. ಈಗ ಚುನಾವಣೆ ವೇಳೆ ಪ್ರಧಾನಿ ಮಹದಾಯಿಗೆ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ. ಇದರ ಬಗ್ಗೆ ಜನರು ಅವಲೋಕನ ಮಾಡುತ್ತಾರೆ. ಮಹದಾಯಿ ಹೋರಾಟ ನಿರಂತರ ಎಂದರು.

ಕೋಶಾಧ್ಯಕ್ಷ ಎಸ್‌.ಬಿ.ಜೋಗಣ್ಣವರ ಮಾತನಾಡಿ ‘ಮಹದಾಯಿಗೆ ಸಾಕಷ್ಟು ಹೋರಾಟ ನಡೆಸಿದ್ದೇವೆ. ಈಗ ನಮಗೆ ದಯಾಮರಣ ಬೇಕು. ಇಲ್ಲವೇ ಸಾಮೂಹಿಕವಾಗಿ ಸಾಯಲು ಅನುಮತಿ ನೀಡಬೇಕು’ ಎಂದರು.

ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ ಹಾಗೂ ಹೋರಾಟ ಸಮಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT