ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಂತ್‌–ರಾಘು ಫೈನಲ್‌ ‘ಫೈಟ್‌’

ಎಂ.ಎಸ್‌.ರಾಮಯ್ಯ ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿ
Last Updated 3 ಆಗಸ್ಟ್ 2019, 18:34 IST
ಅಕ್ಷರ ಗಾತ್ರ

ಬೆಂಗಳೂರು: ಕೆಬಿಎ ಅಕಾಡೆಮಿಯ ಹೇಮಂತ್‌ ಎಂ.ಗೌಡ ಮತ್ತು ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿಯ ರಾಘು ಮರಿಸ್ವಾಮಿ ಅವರು ಎಂ.ಎಸ್‌.ರಾಮಯ್ಯ ಆನಂದಾಶ್ರಮ ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಪೈಪೋಟಿ ನಡೆಸಲಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ ಹೇಮಂತ್‌ 21–17, 21–12 ನೇರ ಗೇಮ್‌ಗಳಿಂದ ಮೂರನೇ ಶ್ರೇಯಾಂಕದ ಆಟಗಾರ ನಿಖಿಲ್‌ ಶ್ಯಾಮ್‌ ಶ್ರೀರಾಮ್‌ ಅವರನ್ನು ಸೋಲಿಸಿದರು.

ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಆಟಗಾರ ರಾಘು 21–19, 21–11ರಲ್ಲಿ ಎಸ್‌.ಭಾರ್ಗವ್‌ ವಿರುದ್ಧ ಗೆದ್ದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ದೀಪ್ತಿ ರಮೇಶ್‌ ಫೈನಲ್‌ಗೆ ಲಗ್ಗೆ ಇಟ್ಟರು.

ಸೆಮಿಫೈನಲ್‌ನಲ್ಲಿ ದೀಪ್ತಿ 21–10, 24–22ರಲ್ಲಿ ಡಿ.ಶೀತಲ್‌ ಅವರನ್ನು ಸೋಲಿಸಿದರು.

ಅಂತಿಮ ಘಟ್ಟದ ಹಣಾಹಣಿಯಲ್ಲಿ ದೀಪ್ತಿ, ಲೆವಲ್‌ ಅಪ್‌ ಅಕಾಡೆಮಿಯ ಮೇಧಾ ಶಶಿಧರನ್‌ ವಿರುದ್ಧ ಸೆಣಸಲಿದ್ದಾರೆ.

ಇನ್ನೊಂದು ಸೆಮಿಫೈನಲ್‌ನಲ್ಲಿ ಮೇಧಾ 21–18, 21–15ರಲ್ಲಿ ರುತ್‌ ಮಿಶಾ ವಿನೋದ್‌ ವಿರುದ್ಧ ವಿಜಯಿಯಾದರು.

ಪುರುಷರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಎಚ್‌.ಆರ್‌.ವಸಂತ್‌ ಕುಮಾರ್‌ ಮತ್ತು ಆಶಿತ್‌ ಸೂರ್ಯ 16–21, 21–13, 21–15ರಲ್ಲಿ ಎಂ.ಮಧುಸೂದನ್‌ ಮತ್ತು ಪಿ.ಸೂರಜ್‌ ಅವರನ್ನು ಮಣಿಸಿದರು.

ನಾಲ್ಕರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಎಸ್‌.ಪ್ರಕಾಶ್‌ ರಾಜ್‌ ಮತ್ತು ವೈಭವ್‌ 21–18, 21–15ರಲ್ಲಿ ಎಚ್‌.ವಿ.ನಿತಿನ್‌ ಮತ್ತು ಎಸ್‌.ಕುಶಾಲ್‌ ರಾಜ್‌ ವಿರುದ್ಧ ಗೆದ್ದರು.

ಮಹಿಳೆಯರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಜಿ.ಎಂ.ನಿಶ್ಚಿತಾ ಮತ್ತು ಪಾರ್ವತಿ ಎಸ್‌.ಕೃಷ್ಣನ್‌ ಅವರು ಪ್ರಶಸ್ತಿ ಸುತ್ತು ಪ್ರವೇಶಿಸಿದರು.

ಸೆಮಿಫೈನಲ್‌ನಲ್ಲಿ ನಿಶ್ಚಿತಾ ಮತ್ತು ಪಾರ್ವತಿ 21–11, 21–5ರಲ್ಲಿ ಅದಿತಾ ಶೆಣೈ ಮತ್ತು ಜಾಹ್ನವಿ ಜೆ.ಶೆಟ್ಟಿ ಅವರನ್ನು ಪರಾಭವಗೊಳಿಸಿದರು.

ದೀತ್ಯಾ ಮತ್ತು ಕೆ.ಬಿ.ರಚನಾ 21–12, 21–8ರಲ್ಲಿ ಎ.ದಿವ್ಯಾ ಮತ್ತು ಎನ್‌.ಎಸ್‌.ಪ್ರೇರಣಾ ಎದುರು ಗೆದ್ದು ಅಂತಿಮ ಘಟ್ಟಕ್ಕೆ ಲಗ್ಗೆ ಇಟ್ಟರು.

ಮಿಶ್ರ ಡಬಲ್ಸ್‌ ವಿಭಾಗದ ಮೊದಲ ಸೆಮಿಫೈನಲ್‌ನಲ್ಲಿ ಸಾಯಿ ಪ್ರತೀಕ್‌ ಕೃಷ್ಣಪ್ರಸಾದ್‌ ಮತ್ತು ಅಶ್ವಿನಿ ಕೆ.ಭಟ್‌ 21–16, 21–17ರಲ್ಲಿ ಎಚ್‌.ವಿ.ನಿತಿನ್‌ ಮತ್ತು ರಮ್ಯಾ ವೆಂಕಟೇಶ್‌ ಎದುರು ಗೆದ್ದರು.

ನಾಲ್ಕರ ಘಟ್ಟದ ಇನ್ನೊಂದು ಪೈಪೋಟಿಯಲ್ಲಿ ಜಿ.ಕಿರಣ್‌ ಕುಮಾರ್‌ ಮತ್ತು ಜಿ.ಎಂ.ನಿಶ್ಚಿತಾ 21–16, 21–12ರಲ್ಲಿ ಎಸ್‌.ಕುಶಾಲ್‌ ರಾಜ್‌ ಮತ್ತು ಅಂಚಲ್‌ ಧವನ್‌ ವಿರುದ್ಧ ವಿಜಯಿಯಾದರು.

45 ವರ್ಷದೊಳಗಿನವರ ಪುರುಷರ ಸಿಂಗಲ್ಸ್‌ನಲ್ಲಿ ಕೆ.ಎಚ್‌.ಅಮೋಘವರ್ಷ ಫೈನಲ್‌ ಪ್ರವೇಶಿಸಿದರು.

ಸೆಮಿಫೈನಲ್‌ನಲ್ಲಿ ಅಮೋಘವರ್ಷ 22–20, 21–15ರಲ್ಲಿ ಪ್ರಭಾಕರನ್‌ ಸುಬ್ಬಯ್ಯನ್‌ ಎದುರು ಗೆದ್ದರು.

ಇನ್ನೊಂದು ಪಂದ್ಯದಲ್ಲಿ ಅಶೋಕ್‌ ಕುಮಾರ್‌ ರಘುರಾಮ್‌ ಚೇರ್ಕಲ್‌ 21–18, 21–19ರಲ್ಲಿ ಶ್ರೀನಿವಾಸಮು ಮಹೇಶ್‌ ಅವರನ್ನು ಸೋಲಿಸಿದರು.

ಡಬಲ್ಸ್‌ ವಿಭಾಗದ ಮೊದಲ ಸೆಮಿಫೈನಲ್‌ನಲ್ಲಿ ಪಿ.ಜೆ.ಪೆರಿಮಳ್‌ಜಾಗನ್‌ ಮತ್ತು ಎಸ್‌.ದೀಪಕ್‌ ರಾಜ್‌ 21–9, 21–17ರಲ್ಲಿ ವಿನಾಯಕ ಮಂಚಿಕೊಪ್ಪ ಬಸವಣ್ಣಪ್ಪ ಮತ್ತು ಈಶ್ವರ್ ನಾಗಪ್ಪ ಅವರನ್ನು ಮಣಿಸಿದರು.

ಕಿರಣ್‌ ಕುಮಾರ್‌ ಮತ್ತು ಕೆ.ಎಸ್‌.ಸುನಿಲ್‌ 21–11, 21–18ರಲ್ಲಿ ಪ್ರದೀಪ್‌ ಎನ್‌.ಕುಮಾರ್‌ ಮತ್ತು ಎಂ.ಬಾಲಕೃಷ್ಣ ಅವರನ್ನು ಮಣಿಸಿ ಪ್ರಶಸ್ತಿ ಸುತ್ತು ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT