ಮಂಗಳವಾರ, ಸೆಪ್ಟೆಂಬರ್ 17, 2019
24 °C
ಆರ್‌.ಎಸ್‌.ಶಕುಂತಲಾ ಸ್ಮಾರಕ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌

ಮರಿಯಾ, ಶ್ರೇಯಲ್‌ಗೆ ಸಿಂಗಲ್ಸ್‌ ಗರಿ

Published:
Updated:
Prajavani

ಬೆಂಗಳೂರು: ಮರಿಯಾ ರೋನಿ ಮತ್ತು ಶ್ರೇಯಲ್‌ ತೆಲಾಂಗ್‌ ಅವರು ಕರ್ನಾಟಕ ಟೇಬಲ್‌ ಟೆನಿಸ್‌ ಸಂಸ್ಥೆ ಆಶ್ರಯದ ಆರ್‌.ಎಸ್‌.ಶಕುಂತಲಾ ಸ್ಮಾರಕ ರಾಜ್ಯ ರ‍್ಯಾಂಕಿಂಗ್‌ ಟೂರ್ನಿಯಲ್ಲಿ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್‌ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ  ಮರಿಯಾ 11–3, 3–11, 11–7, 12–10, 6–11, 14–12ರಲ್ಲಿ ವಿ.ಖುಷಿ ಅವರನ್ನು ಸೋಲಿಸಿದರು.

ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್‌ನಲ್ಲಿ ಮರಿಯಾ 11–8, 16–14, 11–8, 11–3ರಲ್ಲಿ ಸೇಜಲ್‌ ಕೌಶಿಕ್‌ ಎದುರೂ, ಖುಷಿ 9–11, 8–11, 11–9, 11–2, 11–6, 11–9ರಲ್ಲಿ ಸಂಯುಕ್ತ ವಿರುದ್ಧವೂ ಗೆದ್ದಿದ್ದರು.

ಪುರುಷರ ವಿಭಾಗದ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಶ್ರೇಯಲ್‌ 11–7, 11–9, 11–6, 11–4ರಲ್ಲಿ ಅನಿರ್ಬನ್‌ ರಾಯ್‌ ಚೌಧರಿ ಅವರನ್ನು ಪರಾಭವಗೊಳಿಸಿದರು.

ನಾಲ್ಕರ ಘಟ್ಟದ ಹಣಾಹಣಿಗಳಲ್ಲಿ ಅನಿರ್ಬನ್‌ 4–11, 9–11, 5–11, 11–7, 11–8, 11–7, 11–6ರಲ್ಲಿ ಸಮರ್ಥ ಕುರಡಿಕೇರಿ ಎದುರೂ, ಶ್ರೇಯಲ್‌ 11–13, 11–9, 11–7, 11–8, 11–5ರಲ್ಲಿ ಕೌಸ್ತುಭ್‌ ಮಿಲಿಂದ್‌ ಕುಲಕರ್ಣಿ ವಿರುದ್ಧವೂ ವಿಜಯಿಯಾಗಿದ್ದರು.

ಸಬ್‌ ಜೂನಿಯರ್‌ ಬಾಲಕಿಯರ ವಿಭಾಗದ ಪ್ರಶಸ್ತಿ ಕರುಣಾ ಗಜೇಂದ್ರನ್‌ ಪಾಲಾಯಿತು. ಫೈನಲ್‌ನಲ್ಲಿ ಕರುಣಾ 12–10, 9–11, 11–5, 18–16ರಲ್ಲಿ ತೃಪ್ತಿ ಪುರೋಹಿತ್‌ ಅವರನ್ನು ಮಣಿಸಿದರು.

ಬಾಲಕರ ವಿಭಾಗದ ಅಂತಿಮ ಘಟ್ಟದ ಹಣಾಹಣಿಯಲ್ಲಿ ಕೆ.ಜೆ.ಆಕಾಶ್‌ 13–11, 11–8, 13–11ರಲ್ಲಿ ಪಿ.ವಿ.ಶ್ರೀಕಾಂತ್‌ ಕಶ್ಯಪ್‌ ವಿರುದ್ಧ ಗೆದ್ದರು.

ಕೆಡೆಟ್‌ ಬಾಲಕಿಯರ ಸಿಂಗಲ್ಸ್‌ ಫೈನಲ್‌ನಲ್ಲಿ ಎಚ್‌.ಎ.ಪ್ರಣವಿ 11–5, 11–9, 11–7ರಲ್ಲಿ ಸಾನ್ವಿ ವಿಶಾಲ್‌ ಮಂಡೇಕರ್‌ ಎದುರೂ, ಬಾಲಕರ ಸಿಂಗಲ್ಸ್‌ ಫೈನಲ್‌ನಲ್ಲಿ ಕೆ.ಆಯುಷ್‌ 5–11, 11–5, 11–3, 11–9ರಲ್ಲಿ ಸಿದ್ಧಾಂತ್‌ ವಾಸನ್‌ ಮೇಲೂ ಗೆದ್ದು ಪ್ರಶಸ್ತಿ ಪಡೆದರು.

ಮಿನಿ ಕೆಡೆಟ್‌ ಬಾಲಕಿಯರ ಸಿಂಗಲ್ಸ್‌ನಲ್ಲಿ ಸುಮೇಧಾ ಕೆ.ಎಸ್‌.ಭಟ್‌ ಅವರು ಚಾಂಪಿಯನ್‌ ಆದರು. ಫೈನಲ್‌ನಲ್ಲಿ ಸುಮೇಧಾ 8–11, 11–7, 11–4, 12–10ರಲ್ಲಿ ಶಿವಾನಿ ಮಹೇಂದ್ರನ್‌ ಅವರನ್ನು ಮಣಿಸಿದರು.

ಬಾಲಕರ ವಿಭಾಗದ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಎನ್‌.ಅರ್ಣವ್‌ 11–9, 11–7, 9–11, 11–9ರಲ್ಲಿ ಅಥರ್ವ ನವರಂಗೆ ಎದುರು ಗೆದ್ದರು.

Post Comments (+)