ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಟ ದಾಖಲೆ ನಿರ್ಮಿಸಿದ ಪ್ರಜ್ವಲ್‌

ರಾಜ್ಯ ಸೀನಿಯರ್‌ ಅಥ್ಲೆಟಿಕ್‌: ಉತ್ತಮ ಸಾಮರ್ಥ್ಯ ತೋರಿದ ಸಂಶೀರ್‌, ಜಗದೇ ಚಂದ್ರ
Last Updated 27 ಜುಲೈ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕಣ್ಣು ಹಾಯಿಸಿದಲ್ಲೆಲ್ಲಾ ಕಿತ್ತುಹೋಗಿದ್ದ ಟ್ರ್ಯಾಕ್‌ನಲ್ಲಿ ಕೆಚ್ಚೆದೆಯಿಂದ ಓಡಿದ ಪ್ರಜ್ವಲ್‌ ಮಂದಣ್ಣ, ರಾಜ್ಯ ಸೀನಿಯರ್‌ ಅಥ್ಲೆಟಿಕ್‌ ಕೂಟದ ಮೊದಲ ದಿನ ಕೂಟ ದಾಖಲೆ ನಿರ್ಮಿಸಿದರು.

ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿರುವ ಪ್ರಜ್ವಲ್‌, ಪುರುಷರ 100 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದರು.

10.3 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದ 20ರ ಹರೆಯದ ಪ್ರಜ್ವಲ್‌, ಲಯನೆಲ್‌ ಜೊಹಾನಸ್ ಹೆಸರಿನಲ್ಲಿದ್ದ 24 ವರ್ಷಗಳ ಹಿಂದಿನ ದಾಖಲೆ ಅಳಿಸಿ ಹಾಕಿದರು. 1995ರಲ್ಲಿ ನಡೆದಿದ್ದ ಕೂಟದಲ್ಲಿ ಲಯನೆಲ್‌ ಅವರಿಂದ 10.4 ಸೆಕೆಂಡು ಸಾಮರ್ಥ್ಯ ಮೂಡಿಬಂದಿತ್ತು.

ಪುರುಷರ ಲಾಂಗ್‌ಜಂಪ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಸ್‌.ಇ.ಸಂಶೀರ್‌ ಕೂಟ ದಾಖಲೆ ಬರೆದರು. ಫೈನಲ್‌ನ ಮೊದಲ ಪ್ರಯತ್ನದಲ್ಲೇ ಅವರು 7.91 ಮೀಟರ್ಸ್‌ ಸಾಮರ್ಥ್ಯ ತೋರಿದರು. ಇದರೊಂದಿಗೆ ಸಿ.ಕುಂಜುಮೊನ್‌ ಹೆಸರಲ್ಲಿದ್ದ (1995ರಲ್ಲಿ 7.86 ಮೀ.) ದಾಖಲೆ ಮೀರಿದರು.

ಪುರುಷರ 400 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಫ್ಯೂಷನ್‌ ಕ್ಲಬ್‌ನ ಜಗದೇ ಚಂದ್ರ, ಕೂಟ ದಾಖಲೆ ನಿರ್ಮಿಸಿದರು. ಅವರು 51.2 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು.

ಸಿ.ಪಿ.ನಾಗಭೂಷಣ್‌ (2017ರಲ್ಲಿ 52.3 ಸೆ.) ಹೆಸರಿನಲ್ಲಿ ಈ ದಾಖಲೆ ಇತ್ತು.

ಮೊದಲ ದಿನದ ಫಲಿತಾಂಶಗಳು: ಪುರುಷರು: 100 ಮೀಟರ್ಸ್‌ ಓಟ: ಪ್ರಜ್ವಲ್‌ ಮಂದಣ್ಣ (10.3ಸೆ.)–1, ವಿದ್ಯಾ ಸಾಗರ್‌ (ಮೈಸೂರು; 10.4ಸೆ.)–2, ರೋಹಿತ್‌ (ಉಡುಪಿ–10.6ಸೆ.)–3.

1500 ಮೀ. ಓಟ: ವಿಶ್ವಾಂಭರ ಎಲ್‌.ಕೋಳೆಕರ್‌ (ಫ್ಯೂಷನ್‌; ಕಾಲ:3 ನಿಮಿಷ, 54.3 ಸೆ.)–1, ಬಿ.ಕೆ.ಕುಮಾರಸ್ವಾಮಿ (ಕೆಎಸ್‌ಪಿ; 4:04.3ಸೆ.)–2, ಈರಪ್ಪ (ಬಾಗಲಕೋಟೆ; 4:08.7ಸೆ.)–3.

5000 ಮೀ ಓಟ: ರಂಜಿತ್‌ (ಭಾರತೀಯ ವಾಯು ಸೇನೆ; 15 ನಿಮಿಷ 28.4 ಸೆಕೆಂಡು)–1, ಸಿದ್ದಪ್ಪ ಗುಂಡಗೈ (15:35.0ಸೆ.)–2, ರವೀಂದ್ರ ಸಿಂಗ್‌ (15:57.6ಸೆ.)–3. (ಇಬ್ಬರೂ ಎಎಸ್‌ಸಿ).

400 ಮೀ. ಹರ್ಡಲ್ಸ್‌: ಜಗದೇ ಚಂದ್ರ (ಫ್ಯೂಷನ್‌; ಕಾಲ: 51.2 ಸೆಕೆಂಡು)–1, ಎಂ.ಡಿ.ಅಮರನಾಥ (ಉಡುಪಿ; 53.2ಸೆ.)–2, ಬಕ್ಷಿತ್‌ ಸಾಲಿಯನ್‌ (ದಕ್ಷಿಣ ಕನ್ನಡ; 54.4ಸೆ.)–3.

110 ಮೀ.ಹರ್ಡಲ್ಸ್‌: ಎಂ.ಸಿ.ಪಿ.ಶ್ರೀಕಾಂತ್‌ (ಏರ್‌ ಫೋರ್ಸ್‌; ಕಾಲ: 14.4 ಸೆಕೆಂಡು)–1, ಎ.ಆರ್‌.ಆಶಿಶ್‌ (ಎಸ್‌.ಜೆ.ಇ.ಎಸ್‌; 17.6 ಸೆ.)–2, ಎಸ್‌.ಮಣಿವಣ್ಣನ್‌ (ಕ್ರಿಸ್ತು ಜಯಂತಿ; 20 ಸೆ.)–3.

ಲಾಂಗ್‌ ಜಂಪ್‌: ಎಸ್‌.ಇ.ಸಂಶೀರ್‌ (ದಕ್ಷಿಣ ಕನ್ನಡ; ದೂರ: 7.91 ಮೀ.)–1, ಎಸ್‌.ಲೋಕೇಶ್‌ (ಬೆಂಗಳೂರು; 7.57 ಮೀ.)–2, ಸಿಲಂಬರಸನ್‌ (ಬಳ್ಳಾರಿ; 7.55 ಮೀ.)–3.

ಶಾಟ್‌ಪಟ್‌: ಜೇಸನ್‌ ಸಾಲಿನ್ಸ್‌ (ದಕ್ಷಿಣ ಕನ್ನಡ; ದೂರ: 15.97 ಮೀ.)–1, ಸೂರ್ಯ ಪ್ರಕಾಶ್‌ (ವೈಎಸ್‌ಸಿ; 15.28 ಮೀ.)–2, ಮೋಹನ್‌ ಕುಮಾರ್‌ (ಮೈಸೂರು; 15.25 ಮೀ.)–3.

ಹೈಜಂಪ್‌: ಚೇತನ್‌ (ಎತ್ತರ: 2.20 ಮೀಟರ್ಸ್‌)–1, ಎಂ.ಡಿ.ಅನೀಶ್‌ (2.05ಮೀ.)–2 (ಇಬ್ಬರೂ ಎನ್‌ಎಸ್‌ಎ). ಪಿ.ಯಶಸ್‌ (ಯುವ; 2.00 ಮೀ.)–3.

ಮಹಿಳೆಯರು: 100 ಮೀ. ಓಟ: ‍ಪ್ರಿಯಾಂಕ ಎಸ್‌.ಕಳಗಿ (ಕಾಲ: 11.3 ಸೆಕೆಂಡು)–1, ಎನ್‌.ಎಸ್‌.ಸಿಮಿ (11.5ಸೆ.)–2 (ಇಬ್ಬರೂ ರೈಲ್ವೇಸ್‌), ಪಿ.ಜೆ.ಸ್ನೇಹಾ (ಎ.ಎಫ್‌.ಒ; 11.6ಸೆ.)–3.

400 ಮೀ. ಓಟ: ಜಿ.ಕೆ.ವಿಜಯಕುಮಾರಿ (ಸಾಯ್‌, ಬೆಂಗಳೂರು; ಕಾಲ: 53.4 ಸೆಕೆಂಡು)–1, ಲಿಖಿತಾ (53.8ಸೆ.)–2, ಎ.ನಿತ್ಯಶ್ರೀ (55.7ಸೆ.)–3 (ಇಬ್ಬರೂ ಬೆಂಗಳೂರು).

400 ಮೀ. ಹರ್ಡಲ್ಸ್‌: ಎಂ.ಬಿ.ಬಿಬಿಶಾ (ಸಾಯ್‌, ಬೆಂಗಳೂರು; ಕಾಲ: 1 ನಿಮಿಷ, 06.2 ಸೆಕೆಂಡು)–1.

100 ಮೀ.ಹರ್ಡಲ್ಸ್‌: ಪುಷ್ಪಾಂಜಲಿ (ಕಾಲ: 13.9 ಸೆಕೆಂಡು)–1, ಮೇಧಾ ಕಾಮತ್‌ (14.3ಸೆ.)–2 (ಇಬ್ಬರೂ ಫ್ಯೂಷನ್‌), ಎಚ್‌.ವಿ.ಪೂಜಾ (ಸಾಯ್‌, ಬೆಂಗಳೂರು; 14.7ಸೆ.)–3.

1500 ಮೀ. ಓಟ: ಕೆ.ಸಿ.ಶ್ರುತಿ (ಸೌತ್‌ ವೆಸ್ಟ್‌ ರೈಲ್ವೇಸ್‌; ಕಾಲ: 4 ನಿಮಿಷ 48.5ಸೆ.)–1, ಎಚ್‌.ಎಂ.ಸಹನಾ (ಹಾಸನ; 5:11.1ಸೆ.)–2, ಎಂ.ಎನ್‌.ಅರ್ಪಿತಾ (ಬೆಂಗಳೂರು; 5:31.6ಸೆ.)–3.

5000 ಮೀ. ಓಟ: ಕವಿತಾ ಯಾದವ್‌ (ಸಾಯ್‌, ಬೆಂಗಳೂರು; ಕಾಲ:17 ನಿಮಿಷ 11.3ಸೆ.)–1, ಪ್ರೀಣು ಯಾದವ್‌ (ಬೆಂಗಳೂರು; 17:34.1ಸೆ.)–2, ಮಲ್ಲೇಶ್ವರಿ ರಾಥೋಡ್‌ (ಡಿವೈಇಎಸ್‌; 20:46.6ಸೆ.)–3.

ಟ್ರಿಪಲ್‌ ಜಂಪ್‌: ಬಿ.ಐಶ್ವರ್ಯ (ದಕ್ಷಿಣ ಕನ್ನಡ; ದೂರ: 12.94 ಮೀಟರ್ಸ್‌)–1, ಅನುಷಾ ಜಿ.ಪೂಜಾರಿ (ಉಡುಪಿ; 12.73 ಮೀ.)–2, ಎಸ್‌.ಗಾಯತ್ರಿ (ಬೆಂಗಳೂರು; 12.69 ಮೀ.)–3.

ಲಾಂಗ್‌ ಜಂಪ್‌: ಬಿ.ಐಶ್ವರ್ಯ (ದಕ್ಷಿಣ ಕನ್ನಡ; ದೂರ: 6.26 ಮೀಟರ್ಸ್‌)–1, ಮೇಧಾ ಆರ್‌.ಕಾಮತ್‌ (ಬೆಂಗಳೂರು; 5.50ಮೀ.)–2, ದಿವ್ಯಾ (ಧಾರವಾಡ; 4.57 ಮೀ.)–3.

ಶಾಟ್‌ಪಟ್‌: ಪಿ.ಎಸ್‌.ಉಮಾ (ರೈಲ್ವೇಸ್‌; ದೂರ: 14.05 ಮೀಟರ್ಸ್‌)–1, ಟಿ.ಎ.ಗೌತಮಿ (ತುಮಕೂರು; 8.39 ಮೀ.)–2, ಎಸ್.ಸ್ಮರ್ತಿಕಾ (ಬಿಎಸ್‌ಸಿ; 5.70 ಮೀ.)–3.

ಹೈಜಂಪ್‌: ಎಸ್‌.ಬಿ.ಸುಪ್ರಿಯಾ (ಆಳ್ವಾಸ್‌; ಎತ್ತರ: 1.65 ಮೀಟರ್ಸ್‌)–1, ಸ್ಟೆಮಿ ಮೈಕಲ್‌ (ಎನ್‌.ಎ.ಎಲ್‌; 1.65 ಮೀ.)–2.

**

ಶುಕ್ರವಾರ ಅಭ್ಯಾಸ ನಡೆಸುವ ವೇಳೆ ಗಾಯವಾಗಿತ್ತು. ಹೀಗಿದ್ದರೂ ಅಂಜದೆ ಛಲದಿಂದ ಓಡಿದೆ. ಆದ್ದರಿಂದ ಮೊದಲಿಗನಾಗಿ ಗುರಿ ಮುಟ್ಟಲು ಸಾಧ್ಯವಾಯಿತು. ಕೂಟ ದಾಖಲೆ ನಿರ್ಮಿಸಿದ್ದು ಖುಷಿ ನೀಡಿದೆ.
– ಪ್ರಜ್ವಲ್‌ ಮಂದಣ್ಣ, 100 ಮೀ. ಓಟದಲ್ಲಿ ಚಿನ್ನ ಗೆದ್ದ ಅಥ್ಲೀಟ್‌.

**

ಕೋಚ್‌ ಸಲಹೆಯಂತೆ ತಂತ್ರ ಬದಲಿಸಿ ಜಿಗಿದಿದ್ದೆ. ಹೀಗಾಗಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಲು ಸಾಧ್ಯವಾಯಿತು. ರಾಷ್ಟ್ರೀಯ ಕೂಟದಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಲು ಈ ಸಾಧನೆ ಪ್ರೇರಣೆಯಾಗಲಿದೆ.
– ಸಂಶೀರ್‌, ಲಾಂಗ್‌ಜಂಪ್‌ನಲ್ಲಿ ಕೂಟ ದಾಖಲೆ ಬರೆದ ಅಥ್ಲೀಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT