ಪ್ರಶಸ್ತಿ ಸುತ್ತಿಗೆ ಎಚ್ಬಿಆರ್, ಕೋರಮಂಗಲ

ಬೆಂಗಳೂರು: ಎಚ್ಬಿಆರ್ ಬಿ.ಸಿ. ಮತ್ತು ಎಂ.ಎನ್.ಕೆ. ರಾವ್ ಬಿ.ಸಿ. ತಂಡಗಳು ರಾಜ್ಯ ಸಬ್ಜೂನಿಯರ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಬಾಲಕರ ವಿಭಾಗದಲ್ಲಿ ಫೈನಲ್ ಪ್ರವೇಶಿಸಿವೆ.
ಬಾಲಕಿಯರ ವಿಭಾಗದಲ್ಲಿ ಎಂಸಿಎಚ್ಎಸ್ ಬಿ.ಸಿ. ಮತ್ತು ಕೋರಮಂಗಲ ಎಸ್ಸಿ ತಂಡಗಳು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟವು.
ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಷಿಪ್ನ ಸೆಮಿಫೈನಲ್ ಮೊದಲ ಲೀಗ್ ಪಂದ್ಯದಲ್ಲಿ ಎಚ್ಬಿಆರ್ 55–23ರಿಂದ ಬೆಂಗಳೂರು ಸ್ಪೋರ್ಟಿಂಗ್ ಎದುರು ಗೆದ್ದಿತು. ವಿಜೇತ ತಂಡದ ಸಂವೇಗ್ 20 ಪಾಯಿಂಟ್ಸ್ ಕಲೆಹಾಕಿದರೆ, ಚತ್ಮುರ 14 ಪಾಯಿಂಟ್ಸ್ ಗಳಿಸಿದರುು. ಎರಡನೇ ಲೀಗ್ನಲ್ಲಿ ಎಚ್ಬಿಆರ್ 52–22ರಿಂದ ಭಾರತ್ ಎಸ್ಯು ವಿರುದ್ಧ ಗೆದ್ದಿತು.
ಬಾಲಕರ ವಿಭಾಗದ ನಾಲ್ಕರ ಘಟ್ಟದ ಮೊದಲ ಲೀಗ್ನಲ್ಲಿ ಎಂ.ಎನ್.ಕೆ. ರಾವ್ 35– 31ರಿಂದ ಭಾರತ್ ಎಸ್ಯು ತಂಡವನ್ನು ಸೋಲಿಸಿತು. ಎರಡನೇ ಲೀಗ್ನಲ್ಲಿ 43–41ರಿಂದ ಬೆಂಗಳೂರು ಸ್ಪೋರ್ಟಿಂಗ್ ತಂಡವನ್ನು ಮಣಿಸಿತು.
ಬಾಲಕಿಯರ ವಿಭಾಗದ ಸೆಮಿಫೈನಲ್ ಮೊದಲ ಲೀಗ್ನಲ್ಲಿ ಜಯಶ್ರೀ ಗಳಿಸಿದ ಅಮೋಘ 28 ಪಾಯಿಂಟ್ಸ್ ಬಲದಿಂದ ಕೋರಮಂಗಲ ಎಸ್ಸಿ 52–32ರಿಂದ ನ್ಯಾಷನಲ್ಸ್ ಮೈಸೂರು ತಂಡವನ್ನು ಪರಾಭವಗೊಳಿಸಿತು. ಎರಡನೇ ಲೀಗ್ನಲ್ಲಿ 62–45ರಿಂದ ಅಪ್ಪಯ್ಯ ಬಿ.ಸಿ. ಎದುರು ಗೆದ್ದಿತು. ಈ ಪಂದ್ಯದಲ್ಲಿಯೂ ಮಿಂಚಿದ ಜಯಶ್ರೀ 30 ಪಾಯಿಂಟ್ಸ್ ಗಳಿಸಿದರು.
ಸೆಮಿಫೈನಲ್ನ ಮೊದಲ ಲೀಗ್ನಲ್ಲಿ ಎಂಸಿಎಚ್ಎಸ್ ಬಿ.ಸಿ 48–34ರಿಂದ ಅಪ್ಪಯ್ಯ ಬಿ.ಸಿ. ಎದುರು ಗೆದ್ದಿತು. ವಿಜೇತ ತಂಡದ ಅದಿತಿ 31 ಪಾಯಿಂಟ್ಸ್ ಗಳಿಸಿದರು. ಎರಡನೇ ಲೀಗ್ನಲ್ಲಿ ಎಂಸಿಎಚ್ಎಸ್ 44–30ರಿಂದ ನ್ಯಾಷನಲ್ ಬಿ.ಸಿ. ಮೈಸೂರು ತಂಡಕ್ಕೆ ಸೋಲುಣಿಸಿತು.
ಫೈನಲ್ ಪಂದ್ಯಗಳು ಸೋಮವಾರ ಮಧ್ಯಾಹ್ನ 3ರಿಂದ ನಡೆಯಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.