ಗುರುವಾರ , ಅಕ್ಟೋಬರ್ 17, 2019
24 °C

ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌: ಸಿದ್ಧಾಂತ್‌, ಪ್ರಣವಿಗೆ ಪ್ರಶಸ್ತಿ

Published:
Updated:

ಬೆಂಗಳೂರು: ಸಿದ್ಧಾಂತ್‌ ವಾಸನ್‌ ಮತ್ತು ಎಚ್‌.ಎ. ಪ್ರಣವಿ ಅವರು ಕೆನರಾ ಬ್ಯಾಂಕ್‌ ಕಪ್‌ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಕೆಡೆಟ್‌ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಗುರುವಾರ ನಡೆದ ಫೈನಲ್‌ನಲ್ಲಿ ಸಿದ್ಧಾಂತ್‌ 9–11, 11–8, 10–12, 11–4, 11–7ರಲ್ಲಿ ತೇಶುಭ್‌ ದಿನೇಶ್‌ ಅವರನ್ನು ಸೋಲಿಸಿದರು.

ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್‌ ಪಂದ್ಯಗಳಲ್ಲಿ ಸಿದ್ಧಾಂತ್‌ 15–13, 11–7, 11–4ರಲ್ಲಿ ಶೇಶಾಂತ್‌ ರಾಮಸ್ವಾಮಿ ಎದುರೂ, ತೇಶುಭ್‌ 11–6, 11–8, 11–2ರಲ್ಲಿ ಮೊಹನಿಶ್‌ ನಂದಿ ನಾರಾ ಮೇಲೂ ಗೆದ್ದಿದ್ದರು.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಪ್ರಣವಿ 11–8, 11–7, 5–11, 14–12ರಲ್ಲಿ ಸಾನ್ವಿ ವಿಶಾಲ್‌ ಮಂಡೇಕರ್‌ ಅವರನ್ನು ಪರಾಭವಗೊಳಿಸಿದರು.

ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಸಾನ್ವಿ 11–5, 11–5, 11–5ರಲ್ಲಿ ಋತು ಪಂಡಿತ್‌ ಎದುರೂ, ಪ್ರಣವಿ 11–8, 11–5, 6–11, 9–11, 11–6ರಲ್ಲಿ ನೀತಿ ಅಗರವಾಲ್‌ ಮೇಲೂ ವಿಜಯಿಯಾಗಿದ್ದರು.

ಮಿನಿ ಕೆಡೆಟ್‌ ವಿಭಾಗದ ಸಿಂಗಲ್ಸ್‌ ಸ್ಪರ್ಧೆಗಳಲ್ಲಿ ಆಯುಷಿ ಬಾಲಕೃಷ್ಣ ಮತ್ತು ಅಥರ್ವ ನವರಂಗೆ ಚಾಂಪಿಯನ್‌ ಆದರು.

ಬಾಲಕಿಯರ ಸಿಂಗಲ್ಸ್‌ ಫೈನಲ್‌ನಲ್ಲಿ ಆಯುಷಿ 11–8, 11–3, 9–11, 11–7ರಲ್ಲಿ ಸ್ಮೃತಿ ಸುದರ್ಶನ್‌ ಎದುರೂ, ಬಾಲಕರ ಸಿಂಗಲ್ಸ್‌ನ ಅಂತಿಮ ಘಟ್ಟದ ಹಣಾಹಣಿಯಲ್ಲಿ ಅಥರ್ವ 9–11, 11–8, 9–11, 11–9, 12–10ರಲ್ಲಿ ಎನ್‌.ಅರ್ಣವ್‌ ಮೇಲೂ ಗೆದ್ದರು.

Post Comments (+)