ಸ್ಟೀಲರ್ಸ್‌ಗೆ ರಾಕೇಶ್‌ ಕೋಚ್‌

ಮಂಗಳವಾರ, ಏಪ್ರಿಲ್ 23, 2019
32 °C

ಸ್ಟೀಲರ್ಸ್‌ಗೆ ರಾಕೇಶ್‌ ಕೋಚ್‌

Published:
Updated:
Prajavani

ಮುಂಬೈ: ಪ್ರೊ ಕಬಡ್ಡಿ ಲೀಗ್‌ನಲ್ಲಿ (‍ಪಿಕೆಎಲ್‌) ಆಡುವ ಹರಿಯಾಣ ಸ್ಟೀಲರ್ಸ್‌ ತಂಡ ರಾಕೇಶ್‌ ಕುಮಾರ್‌ ಅವರನ್ನು ಮುಖ್ಯ ಕೋಚ್‌ ಆಗಿ ನೇಮಿಸಿದೆ.

ಸ್ಟೀಲರ್ಸ್‌ ಫ್ರಾಂಚೈಸ್‌ ಭಾನುವಾರ ಈ ವಿಷಯ ತಿಳಿಸಿದೆ. ರಾಕೇಶ್‌ ಅವರು ಏಳನೇ ಆವೃತ್ತಿಯಲ್ಲಿ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ಹಿಂದಿನ ಎರಡು ಆವೃತ್ತಿಗಳಲ್ಲಿ ರಂಬೀರ್‌ ಸಿಂಗ್‌ ಕೋಖರ್‌ ತಂಡದ ತರಬೇತುದಾರರಾಗಿದ್ದರು. ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದೆ.

2013ರಲ್ಲಿ ಭಾರತ ಸೀನಿಯರ್‌ ತಂಡಕ್ಕೆ ಆಯ್ಕೆಯಾಗಿದ್ದ ರಾಕೇಶ್‌, ವಿಶ್ವಕಪ್‌ ಗೆದ್ದ ತಂಡದಲ್ಲಿ ಎರಡು ಸಲ ಆಡಿದ್ದರು.

ಭಾರತ ತಂಡ ಏಷ್ಯನ್‌ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕ ಜಯಿಸಿದಾಗಲೂ ನಿಜಾಮಪುರದ 36 ವರ್ಷದ ಆಟಗಾರ ತಂಡದ ಭಾಗವಾಗಿದ್ದರು.

ರಾಕೇಶ್‌ ಅವರು ಚೊಚ್ಚಲ ಪಿಕೆಎಲ್‌ನಲ್ಲಿ ಪಟ್ನಾ ಪೈರೇಟ್ಸ್‌ ತಂಡದ ನಾಯಕರಾಗಿದ್ದರು. ಪ್ರೊ ಕಬಡ್ಡಿಯಲ್ಲಿ 55 ಪಂದ್ಯಗಳನ್ನು ಆಡಿರುವ ಅವರು 260 ಪಾಯಿಂಟ್ಸ್‌ ಕಲೆಹಾಕಿದ್ದರು.

‘ಹರಿಯಾಣ ತಂಡದ ಕೋಚ್‌ ಆಗಿ ನೇಮಕವಾಗಿರುವುದರಿಂದ ಅತೀವ ಖುಷಿಯಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟು ಈ ಜವಾಬ್ದಾರಿ ನೀಡಿದ ಫ್ರಾಂಚೈಸ್‌ಗೆ ಆಭಾರಿಯಾಗಿದ್ದೇನೆ. ಮೊದಲ ಸಲ ತಂಡವೊಂದರ ಕೋಚ್‌ ಆಗಿ ನೇಮಕವಾಗಿದ್ದೇನೆ. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ’ ಎಂದು ರಾಕೇಶ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !