ಚೆನ್ನೈ: ಈ ವರ್ಷದ ಜುಲೈ– ಆಗಸ್ಟ್‌ನಲ್ಲಿ ಚೆನ್ನೈನಲ್ಲಿ ನಡೆಯಲಿರುವ 44ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ ರೀತಿಯ ಜ್ಯೋತಿಯಾತ್ರೆಪರಿಚಯಿಸಲಾಗುತ್ತಿದೆ.
‘ಮುಂಬರುವ ಎಲ್ಲ ಒಲಿಂಪಿಯಾಡ್‌ಗೂ ಇದೇ ರೀತಿ ಕ್ರೀಡಾಜ್ಯೋತಿ ಸಂಚರಿಸಲಿದೆ. ಚೆಸ್ ಕ್ರೀಡೆಯು ಜನ್ಮತಾಳಿದ ದೇಶವಾದ ಭಾರತದಿಂದಲೇ ಜ್ಯೋತಿಯಾತ್ರೆ ಆರಂಭವಾಗಿ ಎಲ್ಲ ಖಂಡಗಳಿಗೂ ತೆರಳಿ ಬಳಿಕ ಆತಿಥೇಯ ದೇಶವನ್ನು ತಲುಪಲಿದೆ‘ ಎಂದು ಚೆಸ್ ಆಡಳಿತ ಮಂಡಳಿ ಫಿಡೆ ತಿಳಿಸಿದೆ.
ಸಮಯದ ಕೊರತೆಯಿಂದ ಈ ಬಾರಿ ಜ್ಯೋತಿಯಾತ್ರೆಯನ್ನು ಭಾರತಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಮಾಜಿ ವಿಶ್ವ ಚಾಂಪಿಯನ್, ಭಾರತದ ವಿಶ್ವನಾಥನ್ ಆನಂದ್ ಯಾತ್ರೆಯ ಭಾಗೀದಾರರಲ್ಲಿ ಒಬ್ಬರಾಗಲಿದ್ದಾರೆ.
‘ಚೆಸ್ ಕ್ರೀಡೆಯನ್ನು ಜನಪ್ರಿಯಗೊಳಿಸಲು ಮತ್ತು ಅಭಿಮಾನಿಗಳನ್ನು ಹೆಚ್ಚಿಸಲು ಈ ಉಪಕ್ರಮ ಸಹಾಯವಾಗಲಿದೆ‘ ಎಂದು ಫಿಡೆ ಅಧ್ಯಕ್ಷ ಅರ್ಕಾಡಿ ಡೊರ್ಕೊವಿಚ್ ಹೇಳಿದ್ದಾರೆ.
‘ಕ್ರೀಡಾಜ್ಯೋತಿ ಸಂಚಾರದ ದಿನಾಂಕ ಮತ್ತು ಮಾರ್ಗವನ್ನು ಶೀಘ್ರ ತಿಳಿಸಲಾಗುವುದು‘ ಎಂದು ಒಲಿಂಪಿಯಾಡ್ ನಿರ್ದೇಶಕ ಭರತ್ ಸಿಂಗ್ ಚೌಹಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.