ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್ ಕಲಿಯಲು ಸುಸಮಯ

Last Updated 12 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಕೊರೊನಾ ಭೀತಿಯಿಂದಾಗಿ ಜಾರಿಯಲ್ಲಿರುವ ಲಾಕ್‌ಡೌನ್‌, ಬದುಕಿನ ಹೊಸ ಪುಟಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಕೆಲವರು ಹೊಸತನಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಅದರಲ್ಲೂ ಕ್ರೀಡಾಪಟುಗಳು ವಿವಿಧ ಚಟುವಟಿಕೆಗಳ ಮೂಲಕ ಜೀವನ ಕಳೆಯುತ್ತಿದ್ದಾರೆ.

ಹಾಗೆಯೇ,ಚೆಸ್‌ ಆಟಗಾರರು ಆನ್‌ಲೈನ್‌ ಆಟದ ಮೂಲಕ ತಮ್ಮ ಕೌಶಲವನ್ನು ಮತ್ತಷ್ಟು ಸುಧಾರಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಗಿರೀಶ್‌ ಕೌಶಿಕ್‌ ಕೂಡ ಒಬ್ಬರು.

ಉದ್ಯೋಗದಲ್ಲಿರುವ ಇವರು ಈಗ ‘ವರ್ಕ್‌ ಫ್ರಂ ಹೋಂ’ನಲ್ಲಿ ತೊಡಗಿದ್ದರೂ ವಿರಾಮದ ವೇಳೆಯಲ್ಲಿ ಆನ್‌ಲೈನ್ ಆಟದಲ್ಲಿ ಎದುರಾಳಿಗಳಿಗೆ ಸವಾಲು ಒಡ್ಡುತ್ತಿರುತ್ತಾರೆ.

‘ಈಚೆಗೆ ಟೂರ್ನಿಗಳಲ್ಲಿ ಪಾಲ್ಗೊಳ್ಳುವುದು ಕಡಿಮೆ ಆಗಿದೆ. ಈಗ ಲಾಕ್‌ಡೌನ್‌ ಆಗಿರುವುದರಿಂದ ಆನ್‌ಲೈನ್‌ನಲ್ಲಿ ಆಡುತ್ತಿರುತ್ತೇನೆ. ಹೊಸ ಹೊಸ ಆಟಗಾರರು ಸಿಗುವುದರಿಂದ ಇದೊಂದು ವಿಶೇಷ ಅನುಭವ. ಜೊತೆಗೆ ಅತ್ಯುತ್ತಮ ದರ್ಜೆಯ ಆಟಗಾರರೊಂದಿಗೆ ಆಡಲು ಅವಕಾಶ ಸಿಗುತ್ತದೆ’ ಎಂದು ಗಿರೀಶ್‌ ಕೌಶಿಕ್‌ ಹೇಳುತ್ತಾರೆ.

‘ಟೂರ್ನಿಗಳಲ್ಲಿ ಪಾಲ್ಗೊಳ್ಳುವಸಂದರ್ಭಗಳಲ್ಲಿಸಮಯವೇ ಸಿಗುವುದಿಲ್ಲ. ಓಡಾಟಕ್ಕೆ ಹೆಚ್ಚು ಸಮಯ ವ್ಯಯವಾಗುತ್ತದೆ. ಈಗ ಯಾವುದೇ ಟೂರ್ನಿಗಳು ಇಲ್ಲದಿರುವುದರಿಂದ ಆಟಗಾರರಿಗೆ ಸಾಕಷ್ಟು ಸಮಯಾವಕಾಶ ಸಿಗುತ್ತದೆ. ಹೀಗಾಗಿ, ಆನ್‌ಲೈನ್‌ ಆಟದಲ್ಲಿ ತೊಡಗಿಸಿಕೊಳ್ಳಬಹುದು. ಕೌಶಲ ವೃದ್ಧಿಸಿಕೊಳ್ಳಲು ಇದೊಂದು ಅತ್ಯುತ್ತಮ ಅವಕಾಶ. ಹೊಸ ವಿಚಾರ ಕಲಿಯಬಹುದು. ಹೊಸ ಪ್ರಯೋಗ ಮಾಡಬಹುದು’ ಎಂದು ನುಡಿಯುತ್ತಾರೆ.

‘ಹಾಗೆಯೇ, ಮಕ್ಕಳಿಗೆ ರಜೆ ಇರುವುದರಿಂದ ಪೋಷಕರು ಆನ್‌ಲೈನ್‌ ಮೂಲಕಚೆಸ್‌ ಕಲಿಸಬಹುದು. ಸಾಕಷ್ಟು ಮಂದಿ ಆನ್‌ಲೈನ್‌ನಲ್ಲಿ ಕೋಚಿಂಗ್‌ ನೀಡುತ್ತಾರೆ. ಇದರೊಂದಿಗೆ ಹೊಸ ವಿಚಾರಗಳನ್ನು ಕಲಿಯಬಹುದು. ವಿವಿಧ ಆಟಗಾರರೊಂದಿಗೆ ಆಡಿದರೆ ಅನುಭವ ಸಿಗುತ್ತದೆ. ಬೇರೆ ಆಟಗಾರರ ಆಟವನ್ನು ವಿಶ್ಲೇಷಿಸಬಹುದು’ ಎಂದು ಕಿವಿಮಾತು ಹೇಳುತ್ತಾರೆ ಎಂಜಿನಿಯರಿಂಗ್‌ ಪದವೀಧರ ಕೌಶಿಕ್‌.

ಆನ್‌ಲೈನ್‌ ಆಟಕ್ಕೆ https://www.chess.com/, https://chess24.com/en ಉತ್ತಮವಾದ ವೆಬ್‌ಸೈಟ್‌ಗಳು ಎಂದು ಅವರು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT