ಭಾನುವಾರ, ಸೆಪ್ಟೆಂಬರ್ 15, 2019
26 °C

ಟೇಬಲ್ ಟೆನಿಸ್: ಸುಜನ್‌, ತೃಪ್ತಿಗೆ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ಸುಜನ್ ಭಾರದ್ವಾಜ್ ಮತ್ತು ತೃಪ್ತಿ ಪುರೋಹಿತ್ ಇಲ್ಲಿ ನಡೆಯುತ್ತಿರುವ ಆರ್‌.ಎಸ್.ಶಕುಂತಲಾ ಸ್ಮಾರಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಜೂನಿಯರ್ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಜೂನಿಯರ್ ಬಾಲಕರ ಫೈನಲ್ ಪಂದ್ಯದಲ್ಲಿ ಸುಜನ್ 11–3, 9–11, 2–11, 3–11, 11–5, 11–8, 14–12ರಲ್ಲಿ ಆಕಾಶ್‌ ಜೆ.ಕೆ ಎದುರು ಗೆಲುವು ಸಾಧಿಸಿದರು. ತೃಪ್ತಿ ಫೈನಲ್‌ ಪಂದ್ಯದಲ್ಲಿ ಶ್ವೇತಾ ಪಿ ವಿರುದ್ಧ 11–8, 7–11, 11–2, 13–11, 11–7ರಲ್ಲಿ ಜಯ ಸಾಧಿಸಿದರು.

ಸೆಮಿಫೈನಲ್‌ನಲ್ಲಿ ಶ್ರೀಕಾಂತ್ ವಿರುದ್ಧ ಆಕಾಶ್‌ ಮತ್ತು ರೋಹಿತ್ ಶಂಕರ್ ವಿರುದ್ಧ ಸುಜನ್ ಭಾರದ್ವಾಜ್ ಗೆಲುವು ಸಾಧಿಸಿದರು. ದೇಶ್ನಾ ವಂಶಿಕಾ ವಿರುದ್ಧ ತೃಪ್ತಿ ಪುರೋಹಿತ್ ಮತ್ತು ಸಹನಾ ಮೂರ್ತಿ ವಿರುದ್ಧ ಶ್ವೇತಾ ಜಯ ಗಳಿಸಿದ್ದರು.

Post Comments (+)