ಗುರುವಾರ , ಸೆಪ್ಟೆಂಬರ್ 23, 2021
22 °C

ಜಿಮ್ನಾಸ್ಟಿಕ್ಸ್: ಚಿನ್ನ ಗೆದ್ದ ಸುನೀಸಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ (ಎಎಫ್‌ಪಿ): ಅಮೆರಿಕದ ಯುವ ಜಿಮ್ನಾಸ್ಟಿಕ್ಸ್ ಪಟು ಸುನೀಸಾ ಲೀ ಅವರು ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಆಲ್ ಅರೌಂಡ್‌ ವಿಭಾಗದಲ್ಲಿ ನವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ರಿಯೊ ಕೂಟದಲ್ಲಿ ಈ ವಿಭಾಗದಲ್ಲಿ ಚಿನ್ನ ಜಯಿಸಿದ್ದ ಅಮೆರಿಕದವರೇ ಆದ ತಾರಾ ಜಿಮ್ನಾಸ್ಟ್‌ ಸಿಮೋನ್ ಬೈಲ್ಸ್ ಈ ಕ್ಷಣಕ್ಕೆ ಸಾಕ್ಷಿಯಾದರು.

ಈ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ನೆಚ್ಚಿನ ಅಥ್ಲೀಟ್‌ ಆಗಿದ್ದ ಬೈಲ್ಸ್, ಮಾನಸಿಕ ಆರೋಗ್ಯದ ಕಾರಣ ನೀಡಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

ಅರಿಯೇಕ್ ಜಿಮ್ನಾಸ್ಟಿಕ್ಸ್ ಸೆಂಟರ್‌ನಲ್ಲಿ 18 ವರ್ಷದ ಸುನೀಸಾ ಅವರ ಸ್ಪರ್ಧೆಯನ್ನು ಬೈಲ್ಸ್ ಕಣ್ತುಂಬಿಕೊಂಡರು.

ಸುನೀಸಾ ಒಟ್ಟು 57.4333 ಸ್ಕೋರ್‌ ಗಳಿಸಿದರು. ಬ್ರೆಜಿಲ್‌ನ 22 ವರ್ಷದ ರೆಬೆಕಾ ಆ್ಯಂಡ್ರಾಡೆ (57.298) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಮಹಿಳಾ ಜಿಮ್ನಾಸ್ಟಿಕ್ಸ್‌ನಲ್ಲಿ ಬ್ರೆಜಿಲ್‌ಗೆ ಒಲಿದ ಮೊದಲ ಪದಕ ಇದು.

ರಷ್ಯಾದ ಎಂಜೆಲಿನಾ ಮೆಲ್ನಿಕೊವಾ (57.199) ಕಂಚಿನ ಪದಕ ಗೆದ್ದುಕೊಂಡರು.

 

ಲೀ ಸುನೀಸಾ ಸ್ಕೋರ್‌ ವಿವರ

ವಿಭಾಗ;ಸ್ಕೋರ್‌

ವಾಲ್ಟ್‌;14.600

ಅನ್‌ಇವನ್ ಬಾರ್ಸ್‌;15.300

ಬ್ಯಾಲನ್ಸ್ ಬೀಮ್‌;13.833

ಫ್ಲೋರ್‌;13.700

ಒಟ್ಟು;57.433

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು