ಏಷ್ಯನ್‌ ಗೇಮ್ಸ್‌: ಜಾರ್ಜಿಯಾಗೆ ಸುಶಿಲ್‌ ಕುಮಾರ್

7

ಏಷ್ಯನ್‌ ಗೇಮ್ಸ್‌: ಜಾರ್ಜಿಯಾಗೆ ಸುಶಿಲ್‌ ಕುಮಾರ್

Published:
Updated:
Deccan Herald

ಮುಂಬೈ: ಮುಂದಿನ ತಿಂಗಳು ಜರುಗುವ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ತವಕದಲ್ಲಿರುವ ಭಾರತದ ಕುಸ್ತಿ ಪಟು ಸುಶಿಲ್‌ ಕುಮಾರ್‌ ಅವರು ಪೂರ್ವಭಾವಿ ಸಿದ್ಧತೆಗೆ ಜಾರ್ಜಿಯಾಗೆ ತೆರಳಲಿದ್ದಾರೆ. 

ಹತ್ತು ದಿನಗಳ ಕಾಲ ಈ ಪೂರ್ವಸಿದ್ಧತಾ ಶಿಬಿರವು ನಡೆಯಲಿದೆ. 

‘ನಾಲ್ಕು ವರ್ಷಗಳ ನಂತರ ಕುಸ್ತಿಗೆ ಮರಳಿದ್ದೇನೆ. ಆಟದ ಲಯಕ್ಕೆ ಒಗ್ಗಿಕೊಂಡಿದ್ದೇನೆ. ಭಾರತ ಕುಸ್ತಿ ಫೆಡರೇಷನ್‌ನ (ಡಬ್ಲ್ಯುಎಫ್‌ಐ) ಶಿಫಾರಸಿನ ಮೇಲೆ ಜಾರ್ಜಿಯಾಗೆ ಹೋಗುತ್ತಿದ್ದೇನೆ. ಏಷ್ಯನ್‌ ಕ್ರೀಡಾಕೂಟಕ್ಕಾಗಿ ಉತ್ತಮ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸುಶಿಲ್‌ ಕುಮಾರ್‌ ಹೇಳಿದ್ದಾರೆ. 

‘ವಿಶ್ವ ಹಾಗೂ ಏಷ್ಯನ್‌ ಚಾಂಪಿಯನ್‌ಷಿಪ್‌ಗಳಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದೇನೆ. ಆದರೆ, ಏಷ್ಯನ್‌ ಕ್ರೀಡಾಕೂಟದಲ್ಲಿ ಈ ಸಾಧನೆ ಮಾಡಲು ಆಗಿಲ್ಲ. ಹೀಗಾಗಿ ಇಂಡೊನೇಷ್ಯಾದಲ್ಲಿ ನಡೆಯುವ ಈ ಬಾರಿಯ ಕ್ರೀಡಾಕೂಟವು ವೈಯಕ್ತಿಕವಾಗಿ ಮುಖ್ಯ’ ಎಂದು ಅವರು ತಿಳಿಸಿದ್ದಾರೆ. 

ಈ ಸಲದ ಕ್ರೀಡಾಕೂಟದಲ್ಲಿ ಸುಶಿಲ್‌, 74 ಕೆ. ಜಿ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.  

2006ರಲ್ಲಿ ದೋಹಾದಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಸುಶಿಲ್‌, ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !