ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್ಸ್‌: ಸ್ವಪ್ನಾ ಬರ್ಮನ್‌ಗೆ ಬೆಳ್ಳಿ

Last Updated 23 ಏಪ್ರಿಲ್ 2019, 18:51 IST
ಅಕ್ಷರ ಗಾತ್ರ

ದೋಹಾ: ಭಾರತದ ಸ್ವಪ್ನಾ ಬರ್ಮನ್‌, ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಹೆಪ್ಟಾಥ್ಲಾನ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಮಂಗಳವಾರ ಸಂಜೆ ಈ ವಿಭಾಗದ ಕೊನೆಯ ಸ್ಪರ್ಧೆ ಮುಕ್ತಾಯಗೊಂಡಾಗ ಸ್ವಪ್ನಾ ಒಟ್ಟು 5993 ಪಾಯಿಂಟ್ ಕಲೆ ಹಾಕಿದರು.

6198 ಪಾಯಿಂಟ್‌ಗಳನ್ನು ಗಳಿಸಿದ ಉಜ್ಬೆಕಿಸ್ತಾನದ ಎಕಟೇರಿನಾ ವಾರ್ನಿನಾ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಕಂಚಿನ ಪದಕ ಚೀನಾದ ಟ್ವಿಂಗ್ಲಿಂಗ್ ವಾಂಗ್ ಪಾಲಾಯಿತು. ಅವರು 5289 ಪಾಯಿಂಟ್ ಬಗಲಿಗೆ ಹಾಕಿಕೊಂಡಿದ್ದರು.

ಸ್ಪರ್ಧೆಯಲ್ಲಿ ಭಾರತದ ಪೂರ್ಣಿಮಾ ಹೆಂಬ್ರಮ್ ಕೂಡ ಇದ್ದರು. ಅವರು 5528 ಪಾಯಿಂಟ್ ಗಳಿಸಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು ಎಂದು ಕ್ರೀಡಾ ವೆಬ್‌ಸೈಟ್‌ಗಳು ವರದಿ ಮಾಡಿವೆ.

ಜಿನ್ಸನ್‌ಗೆ ಆಘಾತ: ಪುರುಷರ 1500 ಮೀಟರ್ಸ್ ಓಟದಲ್ಲಿ ಸ್ಪರ್ಧಿಸಬೇಕಾಗಿದ್ದ ಭಾರತದ ಜಿನ್ಸನ್ ಜಾನ್ಸನ್‌ ಗಾಯದ ಸಮಸ್ಯೆಯಿಂದಾಗಿ ಕಣಕ್ಕೆ ಇಳಿಯದಿರಲು ನಿರ್ಧರಿಸಿದ್ದಾರೆ. ‘ಅವರ ಎಡಗಾಲಿನ ಮೀನಖಂಡದಲ್ಲಿ ನೋವು ಕಾಣಿಸಿಕೊಂಡಿದ್ದು ಸ್ಪರ್ಧೆಯಲ್ಲಿ ಪಾಲ್ಗೊಳ್ಳದಂತೆ ವೈದ್ಯರು ಸೂಚಿಸಿದ್ದಾರೆ’ ಎಂದು ಭಾರತದ ಉಪ ಮುಖ್ಯ ಕೋಚ್‌ ಆರ್‌.ಕೆ.ನಾಯರ್ ತಿಳಿಸಿದ್ದಾರೆಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT