ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಶೂಟಿಂಗ್‌ ಟೂರ್ನಿ: ಸ್ವಪ್ನಿಲ್‌– ಆಶಿ ಕೊರಳಿಗೆ ಚಿನ್ನ

ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌: ಪದಕಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಸ್ಥಾನ
Last Updated 4 ಜೂನ್ 2022, 19:32 IST
ಅಕ್ಷರ ಗಾತ್ರ

ನವದೆಹಲಿ:ಭಾರತದ ಸ್ವಪ್ನಿಲ್ ಕುಶಾಲೆ ಮತ್ತು ಆಶಿ ಚೌಕ್ಸಿ ಐಎಸ್ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನ 50 ಮೀಟರ್ಸ್ ರೈಫಲ್ ತ್ರಿ ಪೋಸಿಷನ್ಸ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಅಜರ್‌ಬೈಜಾನ್‌ನ ಬಾಕುನಲ್ಲಿ ನಡೆದ ಟೂರ್ನಿಯಮಿಶ್ರ ತಂಡದ ಸ್ಪರ್ಧೆಯ ಫೈನಲ್‌ನಲ್ಲಿ ಭಾರತದ ಜೋಡಿ 16–12ರಿಂದ ಉಕ್ರೇನ್‌ನ ಸೆರಿಯ್ ಕುಲಿಶ್‌ ಮತ್ತು ದರಿಯಾ ಟೈಕೊವಾ ಅವರನ್ನು ಸೋಲಿಸಿದರು.

ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್ ಹಣಾಹಣಿಯ ಆರಂಭದಲ್ಲಿ ಉಕ್ರೇನ್‌ ಜೋಡಿ 6–2ರಿಂದ ಮುಂದಿತ್ತು. ಬಳಿಕ ತಿರುಗೇಟು ನೀಡಿದ ಸ್ವಪ್ನಿಲ್‌–ಆಶಿ 14–10ಕ್ಕೆ ಮುನ್ನಡೆದರು. ನಂತರ ಸೆರಿಯ್‌– ದರಿಯಾ 12–14ಕ್ಕೆ ಹಿನ್ನಡೆ ತಗ್ಗಿಸಿಕೊಂಡರೂ ಭಾರತದ ಶೂಟರ್‌ಗಳ ಗೆಲುವು ತಡೆಯಲಾಗಲಿಲ್ಲ.

ಇದರೊಂದಿಗೆ ಟೂರ್ನಿಯಲ್ಲಿ ಭಾರತ ತಂಡದ ಮಡಿಲಿಗೆ ಎರಡು ಚಿನ್ನ ಮೂರು ಬೆಳ್ಳಿ ಸೇರಿ ಐದು ಪದಕಗಳು ಸೇರಿದವು. ಪದಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿತು. ಕೊರಿಯಾ ಮೊದಲ ಸ್ಥಾನ ತನ್ನದಾಗಿಸಿಕೊಂಡಿತು.

ಸ್ವಪ್ನಿಲ್ ಅವರಿಗೆ ಟೂರ್ನಿಯಲ್ಲಿ ಇದು ಮೊದಲ ಚಿನ್ನ; ಒಟ್ಟಾರೆ ಮೂರನೇ ಪದಕ. ಈ ಮೊದಲು ಪುರುಷರ 3ಪಿ ವೈಯಕ್ತಿಕ ಮತ್ತು ಪುರುಷರ ತಂಡ ವಿಭಾಗದಲ್ಲಿ ಅವರು ಬೆಳ್ಳಿ ಪದಕ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT