ಆ್ಯರನ್, ಸೌರಭ್ಗೆ ಮತ್ತೊಂದು ಪದಕ

ಹುಬ್ಬಳ್ಳಿ: ಅನುಭವಿ ಈಜುಪಟುಗಳಾದ ಆ್ಯರನ್ ಡಿಸೋಜಾ ಮತ್ತು ಸೌರಭ್ ಸಾಂಗ್ವೇಕರ್ ಅವರ ಚಿನ್ನದ ಪದಕಗಳ ಬೇಟೆ ರೈಲ್ವೆ ಅಂತರ ವಲಯಗಳ ಈಜು ಚಾಂಪಿಯನ್ಷಿಪ್ನಲ್ಲಿ ಮುಂದುವರಿದಿದೆ.
ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಸೋಮವಾರ ನಡೆದ ಪುರುಷರ 100 ಮೀಟರ್ ಫ್ರೀಸ್ಟೈಲ್ನಲ್ಲಿ ಪಶ್ಚಿಮ ವಲಯ ಪ್ರತಿನಿಧಿಸುತ್ತಿರುವ ಆ್ಯರನ್ 52.88 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಇದೇ ವಲಯ ಪ್ರತಿನಿಧಿಸುವ ಸೌರಭ್ 1500 ಮೀಟರ್ ಫ್ರೀಸ್ಟೈಲ್ನಲ್ಲಿ 17:17.43ಸೆ.ಗಳಲ್ಲಿ ಗುರಿ ಮುಟ್ಟಿ ಚಿನ್ನದ ಒಡೆಯರಾದರು.
ವಾಟರ್ ಪೋಲೊ ಸ್ಪರ್ಧೆಯ ಲೀಗ್ ಪಂದ್ಯದಲ್ಲಿ ಆಗ್ನೇಯ ರೈಲ್ವೆ ತಂಡ ಆರು ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು.
100ಮೀ. ಫ್ರೀಸ್ಟೈಲ್: ಆ್ಯರನ್ ಡಿಸೋಜಾ (ಪಶ್ಚಿಮ ವಲಯ; 52.88ಸೆ.)–1, ಸೌರಭ್ ಸಾಂಗ್ವೇಕರ್ (ಪಶ್ಚಿಮ ವಲಯ; 53.38)–2, ಶರ್ಮಾ ಎಸ್.ಪಿ. ನಾಯರ್ (ನೈರುತ್ಯ ರೈಲ್ವೆ; 54.18)–3.
1500ಮೀ. ಫ್ರೀಸ್ಟೈಲ್: ಸೌರಭ್ ಸಾಂಗ್ವೇಕರ್ (ಪಶ್ಚಿಮ ವಲಯ; 17:17.43ಸೆ.)–1, ಮೆರ್ವಿನ್ ಚೆನ್ (ಪಶ್ಚಿಮ ವಲಯ; 18:10.25ಸೆ.)–2, ಆಶಿಶ್ ದೇ (ಪೂರ್ವ ವಲಯ; 18:53.82ಸೆ.)–3.
50ಮೀ. ಬ್ರೆಸ್ಟ್ ಸ್ಟ್ರೋಕ್: ಜೆ.ಪಿ. ಅರ್ಜುನ್ (ನೈರುತ್ಯ ರೈಲ್ವೆ; 30.49ಸೆ.)–1, ಎಂ. ಲೋಹಿತ್ (ನೈರುತ್ಯ ರೈಲ್ವೆ; 31.50ಸೆ.)–2, ನೀಲಾದ್ರಿ ದತ್ತ (ಸೌತ್ ಈಸ್ಟರ್ನ್; 31.94ಸೆ.)–3.
200ಮೀ. ಬಟರ್ಫ್ಲೈ: ಸುಪ್ರಿಯಾ ಮಂಡಲ್ (ಆಗ್ನೇಯ ವಲಯ; 2:04.46ಸೆ.)–1, ಸನು ದೇಬನಾಥ್ (ಪೂರ್ವ ವಲಯ; 2:10.73ಸೆ.)–2, ವಿ. ಅಭಿಷೇಕ (ನೈರುತ್ಯ ವಲಯ; 2:24.13ಸೆ.)–3.
4x100 ಮೀ. ಮೆಡ್ಲೆ ರಿಲೆ: ಸೋನಿ ಎಲಿಸ್, ಶರ್ಮಾ ಎಸ್.ಪಿ. ನಾಯರ್, ಎಂ. ಲೋಹಿತ್, ಕೆ. ಮಣಿ (ನೈರುತ್ಯ ರೈಲ್ವೆ; 4:10.01ಸೆ.)–1, ಸುಮಂತ ನಾಥ್, ಸುಪ್ರಿಯಾ ಮಂಡಲ್, ನಿಲಾದ್ರಿ ದತ್, ಸೈಬಲ್ ಬ್ಯಾನರ್ಜಿ (ಆಗ್ನೇಯ ವಲಯ; 4:14.03ಸೆ.)–2, ಆ್ಯರನ್ ಡಿಸೋಜಾ, ಸುಪ್ರಿಯಾ ಮಂಡಲ್, ನೀಲಾದ್ರಿ ದತ್, ಸೈಬಲ್ ಬ್ಯಾನರ್ಜಿ (ಪೂರ್ವ ವಲಯ; 4:18.13ಸೆ.)–3.
ಸ್ಪ್ರಿಂಗ್ ಬೋರ್ಡ್ ಡೈವಿಂಗ್, 1 ಮೀ.: ಟಿ. ಹರಿಪ್ರಸಾದ್ (ಪಶ್ಚಿಮ ರೈಲ್ವೆ; 268.80)–1, ಗೌರವ್ ರಘುವಂಶಿ (ಪಶ್ಚಿಮ ರೈಲ್ವೆ; 260.55)–2, ಜಿ. ಆದಿತ್ಯ (ಕೇಂದ್ರ ರೈಲ್ವೆ; 255.15ಸೆ.)–3.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.