ಈಜು: ಜೈನ್‌ ವಿ.ವಿಗೆ ಸಮಗ್ರ ಪ್ರಶಸ್ತಿ

7
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಈಜು ಚಾಂಪಿಯನ್‌ಷಿಪ್‌

ಈಜು: ಜೈನ್‌ ವಿ.ವಿಗೆ ಸಮಗ್ರ ಪ್ರಶಸ್ತಿ

Published:
Updated:
Deccan Herald

ಬೆಂಗಳೂರು: ಜೈನ್‌ ವಿಶ್ವವಿದ್ಯಾಲಯ ತಂಡದವರು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಈಜು ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 57 ಪಾಯಿಂಟ್ಸ್‌ ಗಳಿಸಿ ಸಮಗ್ರ ಪ್ರಶಸ್ತಿ ಜಯಿಸಿದರು. 

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ ಮತ್ತು ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸಹಯೋಗದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 15 ಪಾಯಿಂಟ್ಸ್‌ ಗಳಿಸಿದ ದೇವಿ ಅಹಲ್ಯಾ ವಿ.ವಿ ಡೈವಿಂಗ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದಿತು. 

ಅಂತಿಮ ದಿನದ ಫಲಿತಾಂಶಗಳು: 50 ಮೀಟರ್ಸ್‌ ಬಟರ್‌ಫ್ಲೈ: ದೀಕ್ಷಾ ರಮೇಶ್‌ (ಜೈನ್‌ ವಿ.ವಿ. ಕಾಲ–27.50 ಸೆಕೆಂಡು)–1, ಶಿವಾನಿ ಕಟಾರಿಯಾ (ದೆಹಲಿ ವಿ.ವಿ)–2, ದೂರಿ ಸಾಧ್ವಿ (ಸಾವಿತ್ರಿಬಾಯಿ ಫುಲೆ ವಿ.ವಿ)–3; 50 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌: ಚಾಹತ್‌ ಅರೋರ (ಪಂಜಾಬ್‌ ವಿ.ವಿ; ಕಾಲ–36.18 ಸೆಕೆಂಡು)–1, ಸೃಷ್ಟಿ ಬಸು (ಜಾಧದವಪುರ ವಿ.ವಿ)–2, ಆರತಿ ಪಾಟೀಲ್‌ (ಮುಂಬೈ ವಿ.ವಿ)–3; 100 ಮೀಟರ್ಸ್‌ ಬಟರ್‌ಫ್ಲೈ: ಶಿವಾನಿ ಕಟಾರಿಯಾ (ದೆಹಲಿ ವಿ.ವಿ;ಕಾಲ–1 ನಿಮಿಷ 06.61 ಸೆಕೆಂಡು)–1, ದಾಮಿನಿ ಕೆ.ಗೌಡ (ರಾಜೀವ್‌ ಗಾಂಧಿ ವಿ.ವಿ)–2, ದೂರಿ ಸಾಧ್ವಿ (ಸಾವಿತ್ರಿ ಬಾಯಿ ಫುಲೆ ವಿ.ವಿ)–3; 400 ಮೀಟರ್ಸ್‌ ಫ್ರೀಸ್ಟೈಲ್‌: ಶಿವಾನಿ ಕಟಾರಿಯಾ (ದೆಹಲಿ ವಿ.ವಿ;ಕಾಲ–4 ನಿಮಿಷ 43.09 ಸೆಕೆಂಡು)–1, ಶ್ರುತಿ ಮಹಾಲಿಂಗಂ (ಜೈನ್‌ ವಿ.ವಿ)–2, ಜಾಸ್ಮಿನ್‌ ಗುರಂಗ್‌ (ದೆಹಲಿ ವಿ.ವಿ)–3; 4X200 ಮೀಟರ್ಸ್‌ ಫ್ರೀಸ್ಟೈಲ್‌ ರಿಲೇ: ದೆಹಲಿ ವಿ.ವಿ (ಕಾಲ–9 ನಿಮಿಷ 27.03 ಸೆಕೆಂಡು)–1, ಜೈನ್‌ ವಿ.ವಿ–2, ಸಾವಿತ್ರಿಬಾಯಿ ಫುಲೆ ವಿ.ವಿ–3; ಮೂರು ಮೀಟರ್ಸ್‌ ಸ್ಪ್ರಿಂಗ್‌ ಡೈವಿಂಗ್‌: ಮೆದಾಲಿ ರೆಡ್ಕರ್‌ (ಮಹಾರಾಷ್ಟ್ರ ವಿ.ವಿ; 166.55 ಪಾಯಿಂಟ್ಸ್‌)–1, ಭಾವಿಕಾ ಪಿಂಗಳೆ (ದೇವಿ ಅಹಲ್ಯಾ ವಿ.ವಿ)–2, ಆಯೆಷಾ (ದೆಹಲಿ ವಿ.ವಿ)–3.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !