ಈಜು ಕೋಚ್‌ ಬಾಲರಾಜು ನಿಧನ

ಶನಿವಾರ, ಮಾರ್ಚ್ 23, 2019
21 °C

ಈಜು ಕೋಚ್‌ ಬಾಲರಾಜು ನಿಧನ

Published:
Updated:
Prajavani

ಬೆಂಗಳೂರು: ಕರ್ನಾಟಕದ ಹಿರಿಯ ಈಜು ಮತ್ತು ಡೈವಿಂಗ್‌ ವಿಭಾಗದ ಕೋಚ್‌ ಜಿ.ಆರ್‌.ಬಾಲರಾಜು (72) ಬುಧವಾರ ಮುಂಜಾನೆ ಹೃದಯ ಸ್ಥಂಭನದಿಂದ ನಿಧನರಾಗಿದ್ದಾರೆ.

ಅನಾರೋಗ್ಯದ ಕಾರಣ ಅವರು ಐದು ದಿನಗಳಿಂದ ಕಮಾಂಡೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಬಾಲರಾಜು ಅವರು ಡೈವಿಂಗ್‌ ವಿಭಾಗದ ನುರಿತ ಕೋಚ್‌ ಆಗಿದ್ದರು. ಅವರ ಬಳಿ ತರಬೇತಿ ಪಡೆದಿದ್ದ ರಾಜ್ಯದ ಅನೇಕ ಈಜುಪಟುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.

ನಾಲ್ಕು ದಶಕಗಳ ಕಾಲ ಕೋಚ್‌ ಆಗಿ ಸೇವೆ ಸಲ್ಲಿಸಿದ್ದ ಬಾಲರಾಜು, ಕರ್ನಾಟಕ ಈಜು ಸಂಸ್ಥೆಯ ಆಜೀವ ಸದಸ್ಯರಾಗಿದ್ದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !