ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಜೂನಿಯರ್, ಸಬ್‌ಜೂನಿಯರ್‌ ಚಾಂಪಿಯನ್‌ಷಿಪ್‌

Last Updated 23 ಅಕ್ಟೋಬರ್ 2021, 16:10 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ತಂಡವು ಶನಿವಾರ ಮುಕ್ತಾಯವಾದ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನ ಜೂನಿಯರ್ ಮತ್ತು ಸಬ್‌ಜೂನಿಯರ್ ಎರಡೂ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು.

ಸಬ್‌ಜೂನಿಯರ್ ವಿಭಾಗದಲ್ಲಿ ರಾಜ್ಯ ತಂಡವು ಒಟ್ಟು 456 ಪಾಯಿಂಟ್ಸ್ ಕಲೆಹಾಕಿದರೆ, ಜೂನಿಯರ್ ವಿಭಾಗದಲ್ಲಿ 517 ಪಾಯಿಂಟ್ಸ್ ಸಂಗ್ರಹಿಸಿತು. ವಾಟರ್‌ಪೋಲೊ ಬಾಲಕರ ವಿಭಾಗದಲ್ಲಿ ಬಂಗಾಳ ಮತ್ತು ಬಾಲಕಿಯರ ವಿಭಾಗದಲ್ಲಿ ಕೇರಳ ತಂಡಗಳು ಚಾಂಪಿಯನ್ ಪಟ್ಟ ಧರಿಸಿದವು.

ಬಾಲಕರ ಡೈವಿಂಗ್‌ನಲ್ಲಿ ಎಸ್‌ಎಸ್‌ಬಿಸಿ ಮತ್ತು ಮಹಾರಾಷ್ಟ್ರ ತಂಡಗಳು ಪಾರಮ್ಯ ಮೆರೆದವು. ಶನಿವಾರ ಕರ್ನಾಟಕದ ಧಿನಿಧಿ ದೇಶಿಂಗು ಸಬ್‌ಜೂನಿಯರ್ ವಿಭಾಗದಲ್ಲಿ ಹಾಗೂ ನೀನಾ ವೆಂಕಟೇಶ್ ಜೂನಿಯರ್ ವಿಭಾಗದಲ್ಲಿ ದಾಖಲೆ ಬರೆದರು.

ಐದನೇ ಮತ್ತು ಕೊನೆಯ ದಿನದ ಫಲಿತಾಂಶಗಳು: ಬಾಲಕರು: 400 ಮೀ. ಮೆಡ್ಲೆ: ಎರಡನೇ ಗುಂಪು: ಪವನ್ ಧನಂಜಯ್‌ (ಕರ್ನಾಟಕ)–1, ಕಾಲ: 4:57.42, ಕ್ರಿಶ್ ಶಿವಕುಮಾರ್‌ (ಕರ್ನಾಟಕ)–2, ರಿಷವಂತ್‌ ಎಂ.ಎಸ್‌. (ತಮಿಳುನಾಡು)–3. 100 ಮೀ. ಫ್ರೀಸ್ಟೈಲ್‌: ಮೂರನೇ ಗುಂಪು: ಅಕ್ಷಜ್ ಠಾಕೂರಿಯಾ (ಕರ್ನಾಟಕ)–1, ಕಾಲ: 1:02.77, ಯಜ್ಞ ಸಾಯಿ ಎಂ. (ಆಂಧ್ರಪ್ರದೇಶ)–2, ದೇವಜೀತ್ ದೆಂಕಿ (ಬಂಗಾಳ)–3. 200 ಮೀ. ಬ್ಯಾಕ್‌ಸ್ಟ್ರೋಕ್‌: ಎರಡನೇ ಗುಂಪು: ಸುಹಾಸ್‌ ಪ್ರೀತಮ್‌ (ತೆಲಂಗಾಣ)–1, ಕಾಲ: 2:18.12, ರಿಷಭ್ ದಾಸ್‌ (ಮಹಾರಾಷ್ಟ್ರ)–2, ಕ್ರಿಶ್ ಜೈನ್‌ (ಹರಿಯಾಣ)–3. 50 ಮೀ. ಫ್ರೀಸ್ಟೈಲ್‌: ಒಂದನೇ ಗುಂಪು: ವಿಕ್ರಂ ಚಾಂಗ್ಮಯಿ (ಅಸ್ಸಾಂ)–1, ಕಾಲ:25.22, ಹರ್ಷ ಸರೋಹಾ (ಹರಿಯಾಣ)–2, ಸಂಭವ್ ಆರ್‌. (ಕರ್ನಾಟಕ)–3. ಎರಡನೇ ಗುಂಪು: ಜನಂಜಯ್‌ ಹಜಾರಿಕಾ (ಅಸ್ಸಾಂ)–1, ಕಾಲ: 26.64, ರಾಬಿನ್ ಸೇನ್‌ (ದೆಹಲಿ)–2, ಹೀರ್ ಪಿತ್ರೊಡಾ (ಗುಜರಾತ್‌)–3. ನಾಲ್ಕನೇ ಗುಂಪು: ಆಕಾಶ್ ಚೌಹಾನ್‌ (ಉತ್ತರ ಪ್ರದೇಶ)–1, ಕಾಲ:30.57, ಕಾಬಿಲನ್‌ ಟಿ. (ತಮಿಳುನಾಡು)–2, ಸಮರ್ಥ್‌ ಗೌಡ (ಕರ್ನಾಟಕ)–3. ಐದನೇ ಗುಂಪು: ಜಾಸ್‌ ಸಿಂಗ್‌ (ಕರ್ನಾಟಕ)–1, ಕಾಲ: 31.90, ಅಜೀತ್ ಯಾದವ್‌ (ಉತ್ತರ ಪ್ರದೇಶ)–2, ಮೋನಿಶ್ ನಾಯ್ದು ಪಿ. (ತಮಿಳುನಾಡು)–3. 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ಮೂರನೇ ಗುಂಪು: ನಿತೀಶ್ ಎಂ.ಎಸ್‌. (ತಮಿಳುನಾಡು)–1,ಕಾಲ:35.19, ಆಯುಷ್ ಬೋರಾ (ಅಸ್ಸಾಂ)–2, ಶುಭಂ ಚೌಹಾನ್ (ಉತ್ತರಪ್ರದೇಶ)–3. 100 ಮೀ. ಫ್ರೀಸ್ಟೈಲ್‌: ಒಂದನೇ ಗುಂಪು:ಸಂಭವ್ ಆರ್‌. (ಕರ್ನಾಟಕ)–1, ಕಾಲ: 51.39, ವೀರ್ ಖಾತ್ಕರ್‌ (ಹರಿಯಾಣ)–2, ವೇದಾಂತ್ ಮಾಧವನ್‌ (ಮಹಾರಾಷ್ಟ್ರ)–3.ಎರಡನೇ ಗುಂಪು: ಪ್ರಾಂಜಲ್ ಪಾಂಡೆ (ಮಧ್ಯಪ್ರದೇಶ)–1 ಕಾಲ: 56.70, ಸುಹಾಸ್‌ ಪ್ರೀತಂ (ತೆಲಂಗಾಣ)–2, ಹೀರ್ ಪಿತ್ರೊಡಾ (ಗುಜರಾತ್‌)–3.

ಬಾಲಕಿಯರು: 100 ಮೀ. ಫ್ರೀಸ್ಟೈಲ್‌: ನಾಲ್ಕನೇ ಗುಂಪು: ಧಿನಿಧಿ ದೇಶಿಂಗು (ಕರ್ನಾಟಕ)–1, ಕಾಲ: 1:01.52 (ಸಬ್‌ಜೂನಿಯರ್‌ ನೂತನ ದಾಖಲೆ), ತನಿಶಾ ಗುಪ್ತಾ (ಕರ್ನಾಟಕ)–2, ಅದಿತಿ ಹೆಗ್ಡೆ (ಮಹಾರಾಷ್ಟ್ರ)–3 (1:02.77: ಈ ಹಿಂದಿನ ದಾಖಲೆಯನ್ನು 2017ರಲ್ಲಿ ಮಹಾರಾಷ್ಟ್ರದ ವೇದಿಕಾ ಅಮಿನ್ ಸ್ಥಾಪಿಸಿದ್ದರು). 400 ಮೀ. ಮೆಡ್ಲೆ: ಒಂದನೇ ಗುಂಪು: ಶಕ್ತಿ ಬಾಲಕೃಷ್ಣನ್‌ (ತಮಿಳುನಾಡು)–1, ಕಾಲ: 5:15.69, ಕನ್ಯಾ ನಾಯರ್‌ (ಮಧ್ಯಪ್ರದೇಶ)–2, ಎ.ಜೆದಿದಾ (ಕರ್ನಾಟಕ)–3. 200 ಮೀ. ಬ್ಯಾಕ್‌ಸ್ಟ್ರೋಕ್‌: ಎರಡನೇ ಗುಂಪು: ರಿಧಿಮಾ ವೀರೇಂದ್ರಕುಮಾರ್‌ (ಕರ್ನಾಟಕ)–1, ಕಾಲ:2:24.26, ಶಾಲಿನಿ ದೀಕ್ಷಿತ್‌ (ಕರ್ನಾಟಕ)–2, ಶ್ರೀ ನಿತ್ಯಾ ಸಾಗಿ (ತೆಲಂಗಾಣ)–3. 50 ಮೀ. ಫ್ರೀಸ್ಟೈಲ್‌: ನಾಲ್ಕನೇ ಗುಂಪು: ಜೋಯಾ ಜನ್ನತ್‌ (ಬಂಗಾಳ)–1, ಕಾಲ:31.61, ತ್ರೀಶಾ ಸಿಂಧು (ಕರ್ನಾಟಕ)–2, ಅಲಿಸಾ ರೆಗೊ (ಕರ್ನಾಟಕ)–3. ಐದನೇ ಗುಂಪು: ಲಾಸ್ಯ ಶ್ರೀ ಕೆ. (ಆಂಧ್ರಪ್ರದೇಶ)–1, ಕಾಲ: 33.52, ಆಡ್ರಿಜಾ ಚೇಟಿಯಾ (ಅಸ್ಸಾಂ)–2, ಶ್ರೇಯಾ ಬಿನಿ (ಕೇರಳ)–3. 50 ಮೀ. ಬಟರ್‌ಫ್ಲೈ: ಒಂದನೇ ಗುಂಪು: ನೀನಾ ವೆಂಕಟೇಶ್ (ಕರ್ನಾಟಕ)–1, ಕಾಲ: 28.51 (ಜೂನಿಯರ್‌ ನೂತನ ದಾಖಲೆ), ಆಸ್ಥಾ ಚೌಧರಿ (ಅಸ್ಸಾಂ)–2, ನಿಲಬ್ಜಾ ಘೋಷ್‌ (ಬಂಗಾಳ)–3. (28.93; ಈ ಹಿಂದಿನ ದಾಖಲೆಯನ್ನು ನೀನಾ ವೆಂಕಟೇಶ್ ಅವರೇ ಇದೇ ಚಾಂಪಿಯನ್‌ಷಿಪ್‌ನ ಹೀಟ್ಸ್‌ನಲ್ಲಿ ದಾಖಲಿಸಿದ್ದರು). ಎರಡನೇ ಗುಂಪು: ರಿಷಿಕಾ ಮಂಗಳೆ (ಕರ್ನಾಟಕ)–1, ಕಾಲ: 29.55, ಮಾನವಿ ವರ್ಮಾ (ಕರ್ನಾಟಕ)–1, ಅರ್ಷಪ್ರೀತ್ ಕೌರ್‌ (ಪಂಜಾಬ್)–3. 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ನಾಲ್ಕನೇ ಗುಂಪು: ಔರೇಲಿಯಾ ದಿಯಾಸ್‌ (ಕರ್ನಾಟಕ)–1, ಕಾಲ: 39.35, ಅನನ್ಯಾ ಚಕ್ರವರ್ತಿ (ಕರ್ನಾಟಕ)–2, ಅಹವೈ ಗಾಂಧಿ (ಮಹಾರಾಷ್ಟ್ರ)–3. 100 ಮೀ. ಫ್ರೀಸ್ಟೈಲ್: ಎರಡನೇ ಗುಂಪು: ರಿಧಿಮಾ ವೀರೇಂದ್ರ ಕುಮಾರ್‌ (ಕರ್ನಾಟಕ)–1, ಕಾಲ: 1:00.80, ಜಾಹ್ನವಿ ಕಶ್ಯಪ್ (ಅಸ್ಸಾಂ)–2, ಕ್ಷಮಾ ಅಯ್ಯರ್‌ (ಮಹಾರಾಷ್ಟ್ರ)–3. ಒಂದನೇ ಗುಂಪು: ಜಾಹ್ನವಿ ಚೌಧರಿ (ಬಂಗಾಳ)–1, ಕಾಲ: 59.16, ನೀನಾ ವೆಂಕಟೇಶ್‌ (ಕರ್ನಾಟಕ)–2, ಅನ್ಯಾ ವಾಲಾ (ಮಹಾರಾಷ್ಟ್ರ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT