3

ಈಜು: ಶ್ರೀಹರಿ, ಸುವನಾ ದಾಖಲೆ

Published:
Updated:

ಪುಣೆ: ಕರ್ನಾಟಕದ ಶ್ರೀಹರಿ ನಟರಾಜ್ ಮತ್ತು ಸುವನಾ ಸಿ ಭಾಸ್ಕರ್ ಭಾನುವಾರ ಇಲ್ಲಿ ಆರಂಭವಾದ ರಾಷ್ಟ್ರೀಯ ಜೂನಿಯರ್ ಈಜು ಸ್ಪರ್ಧೆಯಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದರು.

ಜೂನಿಯರ್ ಬಾಲಕರ ಒಂದನೇ ಗುಂಪಿನ 100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ  ಬೆಂಗಳೂರಿನ ಶ್ರೀಹರಿ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಅವರು 56.41 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. 2017ರಲ್ಲಿ ಅವರು ಇದೇ ವಿಭಾಗದಲ್ಲಿ 57.33 ಸೆಕೆಂಡುಗಳಲ್ಲಿ ಗುರಿ ಸಾಧನೆ ಮಾಡಿದ್ದರು. ಮಹಿಳೆಯರ ಒಂದನೇ ಗುಂಪಿನ್ 50 ಮೀಟರ್ಸ್‌ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಸುವನಾ ಭಾಸ್ಕರ್  29.35ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. 2017ರಲ್ಲಿ ಮಹಾರಾಷ್ಟ್ರದ ಜೋತ್ಸ್ನಾ ಪಾನ್ಸರೆ (29.39ಸೆ) ಅವರು ಮಾಡಿದ್ದ ದಾಖಲೆಯನ್ನು ಸುವನಾ ಮೀರಿ ನಿಂತರು.

ಫಲಿತಾಂಶಗಳು:

ಜೂನಿಯರ್: ಬಾಲಕರು (ಗುಂಪು 1): 400 ಮೀಟರ್ಸ್ ಫ್ರೀಸ್ಟೈಲ್: ಅದ್ವೈತ್ ಪಾಗೆ (ಮಧ್ಯಪ್ರದೇಶ; ನೂತನ ದಾಖಲೆ: 4ನಿ,2.09ಸೆ; ಹಳೆಯದು: 4ನಿ,06.20ಸೆ; ಎ.ಪಿ. ಗಗನ್ –ಕರ್ನಾಟಕ)–1, ವಿಶಾಲ್ ಗ್ರೆವಾಲ್ (ದೆಹಲಿ)–1, ಸಿ.ಜೆ. ಸಂಜಯ್ (ಕರ್ನಾಟಕ)–3.  50 ಮೀ ಬಟರ್‌ಫ್ಲೈ: ಕ್ಸೇವಿಯರ್ ಮೈಕೆಲ್ ಡಿಸೋಜಾ (ಗೋವಾ; 25.92ಸೆ)–1, ತನೀಶ್ ಜಾರ್ಜ್ ಮ್ಯಾಥ್ಯೂ (ಕರ್ನಾಟಕ)–2, ಡಿ. ಆದಿತ್ಯ (ತಮಿಳುನಾಡು)–3. 100 ಮೀ ಬ್ಯಾಕ್‌ಸ್ಟ್ರೋಕ್: ಶ್ರೀಹರಿ ನಟರಾಜ್ (ಕರ್ನಾಟಕ; ನೂತನ ದಾಖಲೆ; 56.41; ಹಳೆಯದು–57.33) )–1, ನೀಲ್ ರಾಯ್ (ಎಸ್‌ಎಫ್‌ಐ)–2, ಕ್ಸೇವಿಯರ್ ಮೈಕೆಲ್ ಡಿಸೋಜಾ (ಗೋವಾ)–3. 4X100 ಮೀ ಫ್ರೀಸ್ಟೈಲ್: ಕರ್ನಾಟಕ (3ನಿ,38.26ಸೆ)–1, ತಮಿಳುನಾಡು–2, ಎಸ್‌ಎಫ್‌ಐ –3. ಗುಂಪು 2; 100 ಮೀ ಬ್ಯಾಕ್‌ಸ್ಟ್ರೋಕ್: ಸಾಹಿಲ್ ಲಷ್ಕರ್ (ಬಂಗಾಳ; ನೂತನ ದಾಖಲೆ: 1ನಿ,01.52ಸೆ; ಹಳೆಯದು: 1ನಿ,02.41ಸೆ–ವೇದಾಂತ್ ಬಾಪಣಾ, ಮಹಾರಾಷ್ಟ್ರ)–1,  ಆಕಾಶದೀಪ್ ಸಿಂಗ್ (ಪಂಜಾಬ್)–2, ಜಸ್ವಂತ್ ವೈ ರೆಡ್ಡಿ (ತೆಲಂಗಾಣ)–3,  50 ಮೀ ಬ್ರೆಸ್ಟ್‌ಸ್ಟ್ರೋಕ್: ಸ್ವದೇಶ್ ಮಂಡಲ್ (ಬಂಗಾಳ; ನೂತನ ದಾಖಲೆ; 31.33ಸೆ; ಹಳೆಯದು– 31.41ಸೆ, ಎಸ್‌.ಪಿ. ಲಿಖಿತ್, ಕರ್ನಾಟಕ)–1, ವಿಕ್ರಮ್ ಚಾಂಗ್‌ಮೈ (ಅಸ್ಸಾಂ)–2, ಆರ್. ಹರ್ಷ (ಕರ್ನಾಟಕ)–3, 400 ಮೀ ಮೆಡ್ಲೆ: ಸ್ವದೇಶ್ ಮಂಡಲ್ (ಬಂಗಾಳ; ನೂತನ ದಾಖಲೆ: 4ನಿ,40.94ಸೆ, ಹಳೆಯದು: ಸ್ವದೇಶ್ ಮಂಡಲ್–4ನಿ,48.90ಸೆ)–1, ಆರ್ಯನ್ ನೆಹ್ರಾ (ಗುಜರಾತ್)–2, ಶಾನ್ ಗಂಗೂಲಿ (ಗೋವಾ)–3,  ಗುಂಪು 2: 4X100 ಮೀ ಫ್ರೀಸ್ಟೈಲ್: ಅಸ್ಸಾಂ (ನೂತನ ದಾಖಲೆ; 3ನಿ,49.32ಸೆ. ಹಳೆಯದು: 3ನಿ, 51.79ಸೆ–ಕರ್ನಾಟಕ, 2016) –1, ಎಸ್‌ಎಫ್‌ಐ –2, ಕರ್ನಾಟಕ–3,  ಗುಂಪು 3; 100 ಮೀ ಬಟರ್‌ಫ್ಲೈ: ರೋನಕ್ ಸಾವಂತ್ (ಎಸ್‌ಎಫ್‌ಐ– 1ನಿ,9.62ಸೆ)–1, ಕಾರ್ತಿಕೆಯನ್ ನಾಯರ್ (ಕರ್ನಾಟಕ)–2, ಪರಂಬ್ರತಾ ಬಿಸ್ವಾಸ್ (ಬಂಗಾಳ)–3,  4X50 ಮೀ ಫ್ರೀಸ್ಟೈಲ್: ತಮಿಳುನಾಡು (1ನಿ,57.23ಸೆ)–1, ಅಸ್ಸಾಂ –2, ಎಸ್‌ಎಫ್‌ಐ –3.  ಗುಂಪು 4: 50 ಮೀ ಬಟರ್‌ಫ್ಲೈ: ತಿರಾಡು ಸಾಮದೇವ (ಆಂಧ್ರ , 33.30ಸೆ)–1, ಪಾರ್ಥ ದತ್ತಾ (ಅಸ್ಸಾಂ)–2. ರೇಣುಕಾಚಾರ್ಯ ಹೊದಮನಿ (ಕರ್ನಾಟಕ)–3.

ಮಹಿಳೆಯರು: ಗುಂಪು 1: 400 ಮೀ ಫ್ರೀಸ್ಟೈಲ್: ಖುಷಿ ದಿನೇಶ್ (ಕರ್ನಾಟಕ, 4ನಿ,33.28ಸೆ)–1, ರೈನಾ ಸಲ್ಡಾನಾ (ಎಸ್‌ಎಫ್‌ಐ)–2, ಪ್ರಾಚಿ ಟೋಕಸ್‌ (ದೆಹಲಿ)–3,  100 ಮೀ ಬ್ಯಾಕ್‌ಸ್ಟ್ರೋಕ್: ಸುವನಾ ಸಿ ಭಾಸ್ಕರ್ (ಕರ್ನಾಟಕ. 1ನಿ,07.07ಸೆ)–1, ತನೀಶ್ ಮಾಳವಿಯ (ದೆಹಲಿ)–2, ಪ್ರತ್ಯಾಸಾ ರೇ (ಒಡಿಶಾ)–3. 50 ಮೀ ಬಟರ್‌ಫ್ಲೈ: ಸುವನಾ ಸಿ ಭಾಸ್ಕರ್ (ಕರ್ನಾಟಕ, ನೂತನ ದಾಖಲೆ: 29.35ಸೆ. ಹಳೆಯದು: 29.39ಸೆ, ಜೋತ್ಸ್ಹಾ ಪಾನ್ಸರೆ, ಮಹಾರಾಷ್ಟ್ರ)–1, ನಂದಿನಿ ಪೇಟ್ಕರ್ (ಎಸ್‌ಎಫ್‌ಐ)–2, ಅನುಭೂತಿ ಬರುವಾ (ಅಸ್ಸಾಂ)–3, 4X100 ಮೀ ಫ್ರೀಸ್ಟೈಲ್: ಎಸ್‌ಎಫ್‌ಐ (4ನಿ,7.18ಸೆ)–1, ಕರ್ನಾಟಕ –2, ಹರಿಯಾಣ –3.

ಬಾಲಕಿಯರು: ಗುಂಪು 2: 800 ಮೀ ಫ್ರೀಸ್ಟೈಲ್: ಭವ್ಯಾ ಸಚದೇವ (ದೆಹಲಿ; 9ನಿ,30.78ಸೆ)–1, ಬಿ. ಶಕ್ತಿ (ತಮಿಳುನಾಡು)–2, ಆನ್ಯಾ ವಾಲಾ (ಎಸ್‌ಎಫ್‌ಐ)–3. !00 ಮೀ ಬ್ರೆಸ್ಟ್‌ಸ್ಟ್ರೋ‌ಕ್: ನೀನಾ ವೆಂಕಟೇಶ್ (ಕರ್ನಾಟಕ, 1ನಿ, 07.12ಸೆ)–1, ಪಲಕ್ ಧಾಮಿ (ಎಸ್‌ಎಫ್‌ಐ)–2, ಖುಷಿ ಪಟೇಲ್ (ಎಸ್‌ಎಫ್‌ಐ)–3, 400 ಮೀ ಮೆಡ್ಲೆ: ಅಪೇಕ್ಷಾ ಫರ್ನಾಂಡಿಸ್ (ಎಸ್‌ಎಫ್‌ಐ; 5ನಿ,22.50ಸೆ)–1, ಬಿ. ಶಕ್ತಿ (ತಮಿಳುನಾಡು)–2, ಕಾನ್ಯಾ ನಯ್ಯರ್ (ಮಧ್ಯಪ್ರದೇಶ)–3, 4X100 ಮೀ ಫ್ರೀಸ್ಟೈಲ್: ಎಸ್‌ಎಫ್‌ಐ (ನೂತನ ದಾಖಲೆ: 4ನಿ,13.11ಸೆ. ಹಳೆಯದು: 4ನಿ,14.48ಸೆ, ಮಹಾರಾಷ್ಟ್ರ)–1, ತಮಿಳುನಾಡು –2, ಕರ್ನಾಟಕ–3.  ಗುಂಪು 3; 50ಮೀ ಬ್ರೆಸ್ಟ್‌ಸ್ಟ್ರೋಕ್: ವೇದಿಕಾ ಅಮಿನ್ (ಎಸ್‌ಎಫ್‌ಐ, ನೂತನ ದಾಖಲೆ– 35.01ಸೆ, ಹಳೆಯದು: 35.28ಸೆ,  ಅಲಿಯಾ ಸಿಂಗ್, 2016)–1, ಕರೀನಾ ಶಂಕ್ತಾ (ಎಸ್‌ಎಫ್‌ಐ) –2, ರಚನಾ ರಾವ್ (ಕರ್ನಾಟಕ)–3,  100 ಮೀ ಬಟರ್‌ಫ್ಲೈ: ಕೈರಾ ಬಂಗೇರಾ (ಎಸ್‌ಎಫ್‌ಐ, 1ನಿ,09.72ಸೆ)–1, ರಿಷಿಕಾ ಮಾಂಗ್ಲೆ (ಕರ್ನಾಟಕ)–2, ಸಿಂಥಿಯಾ ಚೌಧರಿ (ಬಂಗಾಳ)–3. 4X50 ಮೀ ಫ್ರೀಸ್ಟೈಲ್:  ಎಸ್‌ಎಫ್‌ (2ನಿ,01.60ಸೆ)–1, ಕರ್ನಾಟಕ –2, ತಮಿಳುನಾಡು –3, ಗುಂಪು 4: 50 ಮೀ ಬಟರ್‌ಫ್ಲೈ: ಮಾನವಿ ವರ್ಮಾ (ಕರ್ನಾಟಕ, 35.16ಸೆ)–1, ವಿಹಿತಾ ನಯನಾ (ಕರ್ನಾಟಕ, 35.53ಸೆ)–2, ಅರಿಸ್ತಾ ಸೈಕಿಯಾ (ಅಸ್ಸಾಂ)–3

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !