ಈಜು: ಶ್ರೀಹರಿಗೆ ಏಳನೆ ಸ್ಥಾನ

7
ಏಷ್ಯನ್‌ ಗೇಮ್ಸ್

ಈಜು: ಶ್ರೀಹರಿಗೆ ಏಳನೆ ಸ್ಥಾನ

Published:
Updated:
Deccan Herald

ಜಕಾರ್ತ: ಕರ್ನಾಟಕದ ಶ್ರೀಹರಿ ನಟರಾಜ್‌ ಅವರು ಏಷ್ಯನ್‌ ಕ್ರೀಡಾಕೂಟದ ಈಜು ಸ್ಪರ್ಧೆಯ 100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಏಳನೆ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಭಾನುವಾರ ನಡೆದ ಫೈನಲ್‌ನಲ್ಲಿ ಶ್ರೀಹರಿ 56.19 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಚೀನಾದ ಜಿಯಾಯು ಕ್ಸು (52.34ಸೆ.) ಚಿನ್ನ ಗೆದ್ದರೆ, ಜಪಾನ್‌ನ ರೊಸುಕೆ ಇರೀ (52.53ಸೆ.) ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡರು.

ದಕ್ಷಿಣ ಕೊರಿಯಾದ ಲೀ ಜುಹೊ (54.52ಸೆ.) ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಹೀಟ್ಸ್‌ನಲ್ಲಿ ಬೆಂಗಳೂರಿನ ಶ್ರೀಹರಿ 55.86 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿದ್ದರು.

ಸಾಜನ್‌ಗೆ ಐದನೆ ಸ್ಥಾನ: ಪುರುಷರ 200 ಮೀಟರ್ಸ್‌ ಬಟರ್‌ಫ್ಲೈ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಾಜನ್‌ ಪ್ರಕಾಶ್‌ ಐದನೆ ಸ್ಥಾನಕ್ಕೆ ತೃಪ್ತಿಪಟ್ಟರು.

ಫೈನಲ್‌ನಲ್ಲಿ ಅವರು ನಿಗದಿತ ದೂರ ಕ್ರಮಿಸಲು 1 ನಿಮಿಷ 57.75 ಸೆಕೆಂಡು ತೆಗೆದುಕೊಂಡರು.

ಜಪಾನ್‌ನ ಡೈಯಾ ಸೆಟೊ (1ನಿ;54.53ಸೆ.) ಈ ವಿಭಾಗದ ಚಿನ್ನದ ಪದಕ ಜಯಿಸಿದರು.

ಜಪಾನ್‌ನ ಮತ್ತೊಬ್ಬ ಈಜುಪಟು ನಾವೊ ಹೊರೊಮುರಾ (1ನಿ;55.58ಸೆ.) ಮತ್ತು ಚೀನಾದ ಲಿ ಜುಹಾವೊ (1ನಿ;55.76ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ಕೊರಳೊಡ್ಡಿದರು.

ಇದಕ್ಕೂ ಮುನ್ನ ನಡೆದಿದ್ದ ಅರ್ಹತಾ ಸುತ್ತಿನಲ್ಲಿ ಸಾಜನ್‌ 1 ನಿಮಿಷ 58.12 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು.

200 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಭಾಗವಹಿಸಿದ್ದ ಸೌರಭ್‌ ಸಾಂಗ್ವೇಕರ್‌ (1ನಿ;54.87ಸೆ.) ಅರ್ಹತಾ ಸುತ್ತಿನಲ್ಲೇ ಹೋರಾಟ ಮುಗಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !