ನೈರುತ್ಯ ವಲಯಕ್ಕೆ ಸಮಗ್ರ ಪ್ರಶಸ್ತಿ

7
ಅಖಿಲ ಭಾರತ ರೈಲ್ವೆ ಈಜು: ಡಿಸೋಜಾ ಶ್ರೇಷ್ಠ ಈಜುಪಟು

ನೈರುತ್ಯ ವಲಯಕ್ಕೆ ಸಮಗ್ರ ಪ್ರಶಸ್ತಿ

Published:
Updated:
Deccan Herald

ಹುಬ್ಬಳ್ಳಿ: ಮೊದಲ ನಾಲ್ಕು ದಿನಗಳ ಅಂತ್ಯಕ್ಕೆ ಗಳಿಸಿಕೊಂಡಿದ್ದ ಮುನ್ನಡೆಯನ್ನು ಕೊನೆಯ ದಿನವೂ ಉಳಿಸಿಕೊಂಡ ನೈರುತ್ಯ ರೈಲ್ವೆ ತಂಡ 59ನೇ ಅಖಿಲ ಭಾರತ ಅಂತರ ವಲಯಗಳ ರೈಲ್ವೆ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಜಯಿಸಿದೆ.

ರಾಷ್ಟ್ರಮಟ್ಟದ ರೈಲ್ವೆ ಈಜು ಚಾಂಪಿಯನ್‌ಷಿಪ್‌ಗೆ ನೈರುತ್ಯ ವಲಯ ಮೊದಲ ಬಾರಿಗೆ ಆತಿಥ್ಯ ವಹಿಸಿತ್ತು. ಈ ವಲಯದ ತಂಡದವರು ಆರು ಚಿನ್ನ, 12 ಬೆಳ್ಳಿ ಮತ್ತು 13 ಕಂಚಿನ ಪದಕಗಳೊಂದಿಗೆ ಒಟ್ಟು 153 ಪಾಯಿಂಟ್ಸ್‌ ಗಳಿಸಿ ಅಗ್ರಸ್ಥಾನ ಗಳಿಸಿದರು. 132 ಪಾಯಿಂಟ್ಸ್‌ನಿಂದ ಪಶ್ಚಿಮ ವಲಯ ರನ್ನರ್ಸ್‌ ಅಪ್‌ ಆಯಿತು.

ಡೈವಿಂಗ್‌ನಲ್ಲಿ ಪಶ್ಚಿಮ ವಲಯ ಸತತ ಐದನೇ ಬಾರಿಗೆ ಸಮಗ್ರ ಪ್ರಶಸ್ತಿ ಜಯಿಸಿತು. ವಾಟರ್‌ಪೋಲೊದಲ್ಲಿ ಪಶ್ಚಿಮ ವಲಯ ತಂಡ ಚಾಂಪಿಯನ್‌, ನೈರುತ್ಯ ರೈಲ್ವೆ ತಂಡ ರನ್ನರ್ಸ್‌ ಅಪ್‌ ಗೌರವಕ್ಕೆ ಭಾಜನವಾಯಿತು.

ಪಶ್ಚಿಮ ವಲಯ ಪ್ರತಿನಿಧಿಸಿದ್ದ ಆ್ಯರನ್‌ ಡಿಸೋಜಾ ವೈಯಕ್ತಿಕ ಶ್ರೇಷ್ಠ ಈಜುಪಟು ಪ್ರಶಸ್ತಿ ಪಡೆದರು. ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿರುವ ಡಿಸೋಜಾ ಇಲ್ಲಿ ನಾಲ್ಕು ಚಿನ್ನ ಹಾಗೂ ಒಂದು ಕಂಚು ಜಯಿಸಿದರು.

‘ಕಠಿಣ ಸ್ಪರ್ಧೆ ಎದುರಾಗುವ ನಿರೀಕ್ಷೆ ಇದ್ದ ಕಾರಣ ನಮ್ಮ ವಲಯದ ಈಜುಪಟುಗಳು ಬೆಂಗಳೂರಿನಲ್ಲಿ ತರಬೇತಿ ಪಡೆದಿದ್ದರು. ಇದರಿಂದ ಪಶ್ಚಿಮ ವಲಯವನ್ನು ಹಿಂದಿಕ್ಕಲು ಸಾಧ್ಯವಾಯಿತು. ತವರಿನಲ್ಲಿ ನಡೆದ ಮೊದಲ ಕ್ರೀಡಾಕೂಟದಲ್ಲಿಯೇ ಸಮಗ್ರ ಪ್ರಶಸ್ತಿ ಜಯಿಸಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ’  ಎಂದು ನೈರುತ್ಯ ರೈಲ್ವೆ ವಲಯದ ಕೋಚ್‌ ಥಾಮಸ್‌ ಚಾವ್ಲಾ ಹೇಳಿದರು.

ಬುಧವಾರದ ಸ್ಪರ್ಧೆಗಳ ಫಲಿತಾಂಶ: ಪ್ಲಾಟ್‌ಫಾರ್ಮ್‌ ಡೈವಿಂಗ್‌: ತುಷಾರ್‌ ಘಾಟೆ (‍ಪಶ್ಚಿಮ ವಲಯ; 276.25 ಪಾಯಿಂಟ್ಸ್‌)–1, ಜಿ. ಆದಿತ್ಯ (ಕೇಂದ್ರ ವಲಯ; 250.55)–2, ಹಿಮಾಂಶು ತಿವಾರಿ (ಪಶ್ಚಿಮ ವಲಯ; 241.60)–3.

ಸ್ಪ್ರಿಂಗ್‌ ಬೋರ್ಡ್‌ ಡೈವಿಂಗ್‌–1 ಮೀಟರ್‌: ಟಿ. ಹರಿಪ್ರಸಾದ್ (ಪಶ್ಚಿಮ ವಲಯ; 269.80)–1, ಗುರುದೇವ ರಘುವಂಶಿ (ಪಶ್ಚಿಮ ವಲಯ; 260.55)–2, ಜಿ. ಆದಿತ್ಯ (ಕೇಂದ್ರ ರೈಲ್ವೆ; 255.15)–3.

ಸ್ಪ್ರಿಂಗ್‌ ಬೋರ್ಡ್‌ ಡೈವಿಂಗ್‌–3 ಮೀಟರ್‌: ಗುರುದೇವ್‌ ರಘುವಂಶಿ (ಪಶ್ಚಿಮ ವಲಯ; 274.70)–1, ಜಿ. ಆದಿತ್ಯ (ಕೇಂದ್ರ ವಲಯ; 259.35)–2, ಹಿಮಾಂಶು ಸೋನಿ (ಈಶಾನ್ಯ ವಲಯ; 216.75)–3.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !