ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಗರಿ ಈಜುಪಟುಗಳಿಗೆ ಕೋವಿಡ್

ಬಟರ್‌ಫ್ಲೈ ವಿಭಾಗದ ವಿಶ್ವ ಚಾಂಪಿಯನ್ ಕಾಪಸ್ ಒಳಗೊಂಡು ಒಂಬತ್ತು ಮಂದಿ ಸಂಕಷ್ಟದಲ್ಲಿ
Last Updated 1 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಬುಡಾಪೆಸ್ಟ್:ಬಟರ್‌ಫ್ಲೈ ವಿಭಾಗದ ವಿಶ್ವ ಚಾಂಪಿಯನ್ ಬೊಗ್ಲಾರ್ಕ ಕಾಪಸ್ ಸೇರಿದಂತೆ ಹಂಗರಿ ರಾಷ್ಟ್ರೀಯ ತಂಡದ ಒಂಬತ್ತು ಮಂದಿ ಈಜುಪಟುಗಳಿಗೆ ಕೋವಿಡ್ ಇರುವುದು ದೃಢಪಟ್ಟಿದೆ.

ಈ ವಿಷಯವನ್ನು ಅಲ್ಲಿನ ಈಜು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಕೋವಿಡ್ ತಗುಲಿರುವವರಲ್ಲಿ 2017ರ ವಿಶ್ವ ಚಾಂಪಿಯನ್‌ಷಿಪ್‌ನ 4x100 ಮೀಟರ್ಸ್ ರಿಲೆ ತಂಡದಲ್ಲಿದ್ದ ಡೊಮಿನಿಕ್ ಕೋಜ್ಮ ಕೂಡ ಇದ್ದಾರೆ. ಅವರು ಇದ್ದ ತಂಡವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿತ್ತು.

‘ರಾಷ್ಟ್ರೀಯ ತಂಡದ ಪ್ರತಿಯೊಬ್ಬ ಈಜುಪಟುವನ್ನೂ ಸಿಬ್ಬಂದಿಯನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಮಂಗಳವಾರ ರಾತ್ರಿಯಿಂದ ವರದಿಗಳು ಬರಲು ಆರಂಭವಾಗಿದ್ದು ಈ ವರೆಗೆ ಒಂಬತ್ತು ಮಂದಿಯಲ್ಲಿ ರೋಗ ದೃಢಪಟ್ಟಿದೆ. ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿರುವವರು ಕೆಲವು ತಿಂಗಳಿಂದ ಅಭ್ಯಾಸ ಮಾಡುತ್ತಿದ್ದಾರೆ. ವಾಸಪ್ ಬಂದ ನಂತರ ಅವರೆಲ್ಲರೂ ಕ್ವಾರಂಟೈನ್‌ನಲ್ಲಿರುತ್ತಾರೆ. ಜಂಟಿ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಿಡುವುದಿಲ್ಲ’ ಎಂದು ಹಂಗರಿ ಈಜು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

’ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ 26 ವರ್ಷದ ಕಪಾಸ್ ‘ನಾನು ಚೆನ್ನಾಗಿದ್ದೇನೆ, ಯಾವುದೇ ತೊಂದರೆ ಇಲ್ಲ. ಸೋಂಕು ಇರುವುದು ದೃಢಪಟ್ಟಿದ್ದರೂ ದೈನಂದಿನ ಕಾರ್ಯಗಳಲ್ಲಿ ಬದಲಾವಣೆ ಮಾಡುವುದಿಲ್ಲ. ನನ್ನದೇ ಹೂದೋಟದಲ್ಲಿ ತಿರುಗಾಡುತ್ತ ಶುದ್ಧ ವಾಯು ಸೇವನೆ ಮಾಡುವೆ’ ಎಂದು ಹೇಳಿದರು. 2019ರ ವಿಶ್ವ ಚಾಂಪಿಯನ್‌ಷಿಪ್‌ನ 200 ಮೀಟರ್ಸ್ ಬಟರ್‌ಫ್ಲೈ ವಿಭಾಗದಲ್ಲಿ ಅವರು ಚಿನ್ನಕ್ಕೆ ಮುತ್ತಿಟ್ಟಿದ್ದರು.

ಕೋಜ್ಮಾ ಅವರ ಗಂಟಲು ದ್ರವದ ಮೊದಲ ವರದಿ ನೆಗೆಟಿವ್ ಆಗಿತ್ತು. ಆದರೆ ಎರಡನೇ ಬಾರಿ ನಡೆದ ಪರೀಕ್ಷೆಯಲ್ಲಿ ಕೋವಿಡ್ ಇರುವುದು ಗೊತ್ತಾಗಿತ್ತು. ‘ನಾನು ಇದನ್ನು ಮಿಶ್ರ ಭಾವದಿಂದ ಕಾಣುತ್ತೇನೆ. ಆದರೆ ಪತ್ನಿಯ ಬಗ್ಗೆ ಯೋಚಿಸುವಾಗ ಬೇಸರವಾಗುತ್ತದೆ’ ಎಂದು ಅವರು ಹೇಳಿದರು. ಹಂಗರಿಯಲ್ಲಿ ಈ ವರೆಗೆ 525 ಮಂದಿಯಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು 20 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT