ವಿಶ್ವ ಜೂನಿಯರ್‌ ಓಪನ್‌ ಈಜು ಚಾಂಪಿಯನ್‌ಷಿಪ್‌ಗೆ ಹೋಗಲು ನಂದಿನಿಗೆ ನೆರವಾಗಿ

7

ವಿಶ್ವ ಜೂನಿಯರ್‌ ಓಪನ್‌ ಈಜು ಚಾಂಪಿಯನ್‌ಷಿಪ್‌ಗೆ ಹೋಗಲು ನಂದಿನಿಗೆ ನೆರವಾಗಿ

Published:
Updated:
Deccan Herald

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಈಜುಪಟು ಎಸ್‌.ಎಸ್‌.ನಂದಿನಿ ಇಸ್ರೇಲ್‌ನಲ್ಲಿ ನಡೆಯಲಿರುವ ಫಿನಾ ವಿಶ್ವ ಜೂನಿಯರ್‌ ಓಪ‍ನ್‌ ಈಜು ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದು, ಸ್ಪರ್ಧೆಗೆ ತೆರಳಲು ಹಣಕಾಸಿನ ಕೊರತೆ ಎದುರಿಸುತ್ತಿದ್ದಾರೆ. 

ಚಾಂಪಿಯನ್‌ಷಿಪ್‌ ಸೆಪ್ಟೆಂಬರ್‌ ಏಳು ಹಾಗೂ ಎಂಟರಂದು ನಡೆಯಲಿದೆ. ನಂದಿನಿ ಅವರಲ್ಲದೇ, ಭಾರತದಿಂದ 11 ಸ್ಪರ್ಧಿಗಳು ಹಾಗೂ ಐವರು ಅಧಿಕಾರಿಗಳು ತೆರಳುತ್ತಿದ್ದಾರೆ. ಇದಕ್ಕೆ ಭಾರತೀಯ ಈಜು ಫೆಡರೇಷನ್‌ ಅನುಮತಿ ನೀಡಿದೆ.

ಬೆಂಗಳೂರಿನ ಬಿಎಂಎಸ್‌ ಮಹಿಳಾ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿರುವ ನಂದಿನಿ ಅವರು ಬಸವನಗುಡಿ ಈಜು ಕೇಂದ್ರದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಫ್ರೀಸ್ಟೈಲ್‌ ಮತ್ತು ಬ್ಯಾಕ್‌ಸ್ಟ್ರೋಕ್‌ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.

ರಾಜ್ಯ ಮತ್ತು ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಿ ಪದಕ ಜಯಿಸಿರುವ ಅವರಿಗೆ ‘ಕೆಂಪೇಗೌಡ ಪ್ರಶಸ್ತಿ’ಯೂ ಲಭಿಸಿದೆ. ಫೆಬ್ರುವರಿಯಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್‌ ಮುಕ್ತ ಈಜು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.  

‘ಅಂತರರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ಮಗಳ ಪ್ರದರ್ಶನಮಟ್ಟ ಮತ್ತಷ್ಟು ಉತ್ತಮಗೊಳ್ಳಲಿದೆ. ಇಸ್ರೇಲ್‌ಗೆ ಹೋಗಿ ಬರಲು ₹ 2 ಲಕ್ಷ ಬೇಕು. ವಿಮಾನದ ಪ್ರಯಾಣ ಖರ್ಚು ಹೊಂದಿಸುವುದು ಕಷ್ಟವಾಗಿದೆ. ಇಷ್ಟೊಂದು ಹಣ ನಮ್ಮ ಬಳಿ ಇಲ್ಲ‌’ ಎಂದು ನಂದಿನಿ ತಂದೆ ಗುತ್ತಿಗೆ ಕಾರ್ಮಿಕರಾಗಿರುವ ಎಸ್‌.ಶಿವಕುಮಾರ್‌ ತಿಳಿಸಿದರು. ಆರ್ಥಿಕ ಸಹಾಯ ನೀಡುವವರು 97425 61196 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !