ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳಿಂದ ಗ್ರಾಮಗಳಲ್ಲಿ ಮತಯಾಚನೆ

ನಗರ ಪ್ರದೇಶದಲ್ಲಿ ಪುಟ್ಟರಂಗಶೆಟ್ಟಿ, ಚನ್ನಪ್ಪನಪುರ ಗ್ರಾಮದಲ್ಲಿ ಎ.ಎಂ.ಮಲ್ಲಿಕಾರ್ಜುನಸ್ವಾಮಿ ಮತಭೇಟೆ
Last Updated 4 ಮೇ 2018, 7:31 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ದಡದಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಗುರುವಾರ ಮುಖಂಡರು, ಕಾರ್ಯ ಕರ್ತರ ಜತೆಯಲ್ಲಿ ಪಾದಯಾತ್ರೆ ಮೂಲಕ ಮನೆಮನೆಗೆ ತೆರಳಿ ಮತಯಾಚಿಸಿದರು.

ಗ್ರಾಮದ ಬಸ್ ನಿಲ್ದಾಣದಲ್ಲಿರುವ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ, ತೆರೆದ ವಾಹನದಲ್ಲಿ ಮೆರವಣಿಗೆ ಹೊರಟು, ಚುನಾವಣಾ ಪ್ರಚಾರ ಮಾಡಿದರು. ಹಲವೆಡೆ ಪಾದಯಾತ್ರೆಯ ಮೂಲಕ ಮನೆಮೆನೆಗೆ ತೆರಳಿ ಮತಯಾಚಿಸಿದರು.

‘ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಮತದಾರರ ಮನಸ್ಸು, ಒಲವು ಬಿಜೆಪಿ ಕಡೆ ಇದ್ದು, ತಮ್ಮ ಪರ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿ ಗೆಲುವು ಸಾಧಿಸಲಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿ ಮುಖಂಡ ಸಿ.ಗುರುಸ್ವಾಮಿ ಮಾತನಾಡಿ, ‘ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ  ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವದಿಂದ ರಾಜ್ಯದಲ್ಲಿ ಬಿಜೆಪಿ ಅಲೆ ಇದ್ದು, ಅವರ ಭೇಟಿಯಿಂದ ಜಿಲ್ಲೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಅಲ್ಲದೆ, ಚಂದಕವಾಡಿ ಭಾಗಗಳಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕೆ.ಆರ್.ಮಲ್ಲಿಕಾರ್ಜುನಪ್ಪ ಶಾಸಕರಾಗಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂತರ, ಮಲ್ಲಿಕಾರ್ಜುನಪ್ಪ ಅಮಚವಾಡಿ, ಹೊನ್ನಹಳ್ಳಿ, ಹಾಗೂ ಕಿಲಗೆರೆ ಗ್ರಾಮದಲ್ಲಿ ಬೆಂಬಲಿಗರೊಂದಿಗೆ ರೋಡ್ ಶೊ ನಡೆಸಿ ಮತಯಾಚಿಸಿದರು. ರಾಮಸಮುದ್ರ ಗ್ರಾಮಗಳಲ್ಲಿ ನೂರಾರು ಮುಖಂಡರು ಕಾಂಗ್ರೆಸ್ ತೊರೆದು ಮಲ್ಲಿಕಾರ್ಜುನಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾದ ರಾಜ್ಯ ಕಾರ್ಯದರ್ಶಿ ಕೆಲ್ಲಂಬಳ್ಳಿ ಸೋಮನಾಯಕ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮಂಗಲ ಶಿವಕುಮಾರ್, ಜಿ.ಪಂ.ಮಾಜಿ ಉಪಾಧ್ಯಕ್ಷ ಶಿವಕುಮಾರ್, ಮುಖಂಡರಾದ ವೆಂಕಟರಮಣಸ್ವಾಮಿ, ಚಾ.ಸಿ.ಸೋಮನಾಯಕ, ಕೆ.ಎಸ್.ನಾಗರಾಜಪ್ಪ, ಮಂಗಳಮ್ಮ, ಕಲ್ಮಳ್ಳಿ ಶಿವಕುಮಾರ್, ಕಾರ್ತೀಕ್, ರಮೇಶ್, ರಮೇಶ್‍ಬಾಬು, ಪ್ರಸನ್ನ, ಸಿದ್ದಯ್ಯನಪುರ ಶಿವಕುಮಾರ್, ಸೂರ್ಯಮೂರ್ತಿ, ಪ್ರಭಾಕರ್, ನಂಜಯ್ಯ, ಚಿನ್ನಸ್ವಾಮಿ ಇತರರು ಹಾಜರಿದ್ದರು.

ಬೆಂಗಲಿಸಲು ಮನವಿ

ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟೆ ಗುರುವಾರ ಪಟ್ಟಣದ ವಿವಿಧ ವಾರ್ಡಗಳಿಗೆ ಕಾರ್ಯಕರ್ತರು ಹಾಗೂ ಮುಖಂಡರ ಜತೆಗೆ ಮನೆಮನೆಗೆ ತೆರಳಿ ಬಿರುಸಿನ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾ ಡಿದ ಅವರು ಪಟ್ಟಣದ, ‘ಎಲ್ಲಾ ವಾರ್ಡ್‍ಗಳಿಗೂ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿದ್ದು, ಇಂದು ಶೇ 90ರಷ್ಟು ರಸ್ತೆ ಯುಜಿಡಿ ಕಾಮಗಾರಿಗಳು ಪೂರ್ಣಗೂಂಡಿವೆ. ಎಲ್ಲಾ ವಾರ್ಡ್‍ಗಳಲ್ಲೂ ರಸ್ತೆ ಚರಂಡಿಗಳು ನಿರ್ಮಾಣವಾಗಿದ್ದು ನಾಗರಿಕರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡಿದ್ದು, ಹೆಚ್ಚಿನ ಮತಗಳ ಅಂತರದಿಂದ ಈ ಬಾರಿಯೂ ಬೆಂಬಲಿಸ ಬೇಕು ಎಂದು’ ಮನವಿ ಮಾಡಿದರು.

ನಗರಸಭಾ ಅಧ್ಯಕ್ಷೆ ಶೋಭಾ ಪುಟ್ಟಸ್ವಾಮಿ, ಉಪಾಧ್ಯಕ್ಷ ರಾಜಪ್ಪ, ಚುಡಾ ಅಧ್ಯಕ್ಷ ಸುಹೇಲ್ ಖಾನ್, ಮಾಜಿ ಅಧ್ಯಕ್ಷ ಸೈಯದ್‍ರಪ್ಪೀ, ಬ್ಲಾಕ್ ಅಧ್ಯಕ್ಷರಾದ ಎ.ಎಸ್.ಗುರುಸ್ವಾಮಿ ಮಹಮದ ಅಜ್ಗರ್ ಮುನ್ನಾ ಮುಖಂಡರಾದ ಮಹೇಶ್‍ಕುದರ್, ಸೈಯದ್ ಹತ್ತಿಕ್ ಅಹಮದ್, ನಯಾಜ್‍ಪಾಷ ಇದ್ದರು.

ನನ್ನದೇ ಗೆಲುವು

ಚಾಮರಾಜನಗರ ತಾಲ್ಲೂಕಿನ ಚನ್ನಪ್ಪನಪುರ ಗ್ರಾಮದಲ್ಲಿ ಬಿಎಸ್‍ಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಎ.ಎಂ.ಮಲ್ಲಿಕಾರ್ಜುನಸ್ವಾಮಿ (ಆಲೂರುಮಲ್ಲು) ಅವರು ತಮ್ಮ ಬೆಂಬಲಿಗರ ಜತೆಯಲ್ಲಿ ಮನೆಮನೆಗೆ ತೆರಳಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ದುರಾಡಳಿತ, ಕಮೀಷನ್ ದಂದೆ, ಕಳಪೆ ಕಾಮಗಾರಿ ಹಾಗೂ ಬಿಜೆಪಿಯಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ನೀಡದೆ ಇರುವುದರಿಂದ ಜನತೆ ಬೇಸತ್ತಿದ್ದು ಈ ಬಾರಿ ಬದಲಾವಣೆಗಾಗಿ ತಮ್ಮ ಪರ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿದ್ದು, ನನ್ನ ಗೆಲುವು ಖಚಿತವಾಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿ.ಎಂ.ಕೃಷ್ಣಮೂರ್ತಿ, ನಗರ ಘಟಕ ಅಧ್ಯಕ್ಷ ಜಿ.ಎಂ.ಶಂಕರ್, ಬಿಎಸ್‍ಪಿ ನಗರ ಘಟಕ ಅಧ್ಯಕ್ಷ ಚಿನ್ನಸ್ವಾಮಿ, ಗ್ರಾಮ ಪಂಚಾಯುತಿ ಡಮೂಡ್ಲುಬಸವಣ್ಣ, ಎಸ್.ಪಿ.ಮಹೇಶ್, ಬಸವರಾಜು, ಲೋಕೇಶ್.ಪಿ. ಮಹದೇವಪ್ಪ, ಗುಂಡುರಾವ್, ಮರಪ್ಪ, ವೀರಭದ್ರಸ್ವಾಮಿ, ಮಹೇಂದ್ರ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

ಧ್ರುವನಾರಾಯಣ ಮತಯಾಚನೆ

ಈ ಬಾರಿಯ ಚುನಾವಣೆಯು ಕೋಮುವಾದಿ ಬಿಜೆಪಿ ಹಾಗೂ ಜಾತ್ಯಾತೀತ ಕಾಂಗ್ರೆಸ್ ಪಕ್ಷದ ನಡುವಿನ ಹೋರಾಟವಾಗಿದೆ ಎಂದು ಸಂಸದ ಆರ್.ಧ್ರುವನಾರಾಯಣ ವಿಶ್ಲೇಷಿಸಿದರು.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯ ಉಮ್ಮತ್ತೂರು, ಆಲ್ದೂರು, ಜನ್ನೂರು, ಹೊಸೂರು, ಕುದೇರು, ದೇಮಹಳ್ಳಿ, ಸಂತೇಮರಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎ.ಆರ್.ಕೃಷ್ಣಮುರ್ತಿ ಪರವಾಗಿ ಮತಯಾಚನೆ ಮಾಡಿದರು. ಮುಖ್ಯ ವೃತ್ತದಲ್ಲಿ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್ ಪಕ್ಷದ ಸಾಧನೆಯನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT