ಟಿ.ಟಿ: ಭಾರತದ ತಂಡಗಳಿಗೆ ಪ್ರಶಸ್ತಿ

7

ಟಿ.ಟಿ: ಭಾರತದ ತಂಡಗಳಿಗೆ ಪ್ರಶಸ್ತಿ

Published:
Updated:

ನವದೆಹಲಿ: ಭಾರತದ ಬಾಲಕರ ಮತ್ತು ಬಾಲಕಿಯರ ತಂಡದವರು ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆಯುತ್ತಿರುವ ಜೂನಿಯರ್‌ ಮತ್ತು ಕೆಡೆಟ್‌ ಓಪನ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಸೋಮವಾರ ನಡೆದ ಕೆಡೆಟ್‌ ಬಾಲಕರ ಫೈನಲ್‌ನಲ್ಲಿ ಭಾರತ ‘ಎ’ ತಂಡ 3–1ರಿಂದ ಭಾರತ ‘ಬಿ’ ತಂಡವನ್ನು ಸೋಲಿಸಿತು.

ಮೊದಲ ಸಿಂಗಲ್ಸ್‌ನಲ್ಲಿ ಭಾರತ ‘ಬಿ’ ತಂಡದ ದಿವ್ಯಾಂಶು 11–7, 11–9, 6–11, 12–10ರಲ್ಲಿ ಭಾರತ ‘ಎ’ ತಂಡದ ಪಯಾಸ್‌ ಜೈನ್‌ ಅವರನ್ನು ಸೋಲಿಸಿದರು.

ಎರಡನೇ ಸಿಂಗಲ್ಸ್‌ನಲ್ಲಿ ‘ಎ’ ತಂಡದ ವಿಶ್ವ ದೀನದಯಾಳನ್‌ 11–7, 11–7, 11–8ರಲ್ಲಿ ಆದರ್ಶ್‌ ವಿರುದ್ಧ ಗೆದ್ದು 1–1ರ ಸಮಬಲಕ್ಕೆ ಕಾರಣರಾದರು.

ರಿವರ್ಸ್‌ ಸಿಂಗಲ್ಸ್‌ ಮತ್ತು ರಿವರ್ಸ್‌ ಡಬಲ್ಸ್‌ನಲ್ಲೂ ಭಾರತ ‘ಎ’ ತಂಡ ಪ್ರಾಬಲ್ಯ ಮೆರೆಯಿತು.

ಜೂನಿಯರ್‌ ಬಾಲಕಿಯರ ಫೈನಲ್‌ನಲ್ಲಿ ಅನುಷಾ ಕುಟುಂಬಳೆ, ಸ್ವಸ್ತಿಕಾ ಘೋಷ್‌ ಮತ್ತು ದಿಯಾ ಚಿಟಾಲೆ ಅವರಿದ್ದ ಭಾರತ ‘ಎ’ ತಂಡ 3–1ರಿಂದ ಸಿಂಗಪುರದ ಗೊಯಿ ರುಯಿ ಕ್ಸುವಾನ್‌, ಪಿಯರ್ಲಿನ್‌ ಕೊಹ್‌ ಕಾಯ್‌ ಮತ್ತು ವಾಂಗ್‌ ಕ್ಸಿನ್‌ ರು ಅವರನ್ನು ಸೋಲಿಸಿತು.

ಸಿಂಗಪುರ ತಂಡ ಸೆಮಿಫೈನಲ್‌ನಲ್ಲಿ ರಾಧಾಪ್ರಿಯ ಗೋಯೆಲ್‌, ಪ್ರಾಪ್ತಿ ಸೇನ್‌ ಮತ್ತು ಪೇಮಂಟಿ ಬೈಸ್ಯಾ ಅವರಿದ್ದ ಭಾರತ ‘ಬಿ’ ತಂಡವನ್ನು ಸೋಲಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !