ಟೇಬಲ್ ಟೆನಿಸ್‌: ಮಣಿಕಾ, ಸುತೀರ್ಥಗೆ ಜಯ

ಭಾನುವಾರ, ಮೇ 19, 2019
34 °C

ಟೇಬಲ್ ಟೆನಿಸ್‌: ಮಣಿಕಾ, ಸುತೀರ್ಥಗೆ ಜಯ

Published:
Updated:
Prajavani

ಬುಡಾಪೆಸ್ಟ್‌: ಭಾರತದ ಅರ್ಚನಾ ಕಾಮತ್ ಮತ್ತು ಮಧುರಿಕಾ ಪಾಟ್ಕರ್ ಇಲ್ಲಿ ನಡೆಯುತ್ತಿರುವ ಐಟಿಟಿಎಫ್‌ ವಿಶ್ವ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ನಿರಾಸೆ ಅನುಭವಿಸಿದ್ದಾರೆ. ಮೊದಲ ಸುತ್ತಿನಲ್ಲಿ ಗೆದ್ದಿದ್ದ ಇವರಿಬ್ಬರು ಎರಡನೇ ಸುತ್ತಿನಲ್ಲಿ ಸೋತು ಹೊರಬಿದ್ದರು.

ಮಂಗಳವಾರ ನಡೆದ ರೋಚಕ ಹಣಾಹಣಿಯಲ್ಲಿ ಅರ್ಚನಾ 11–8, 11–8, 19–17, 8–11, 6–11, 7–11, 4–11ರಲ್ಲಿ ಈಜಿಪ್ಟ್‌ನ ದಿನಾ ಮೆಶ್ರೆಫ್‌ಗೆ ಮಣಿದರು. ಮಧುರಿಕಾ 11–5, 9–11, 6–11, 11–8, 17–11, 11–13ರಲ್ಲಿ ಆಸ್ಟ್ರಿಯಾದ ಅಮೆಲಿ ಸೋಲ್ಜ ವಿರುದ್ಧ ಸೋತರು.

ಮಣಿಕಾ ಬಾತ್ರಾ ಮತ್ತು ಸುತೀರ್ಥ ಮುಖರ್ಜಿ ಮೊದಲ ಸುತ್ತಿನಲ್ಲಿ ಸುಲಭ ಜಯ ಸಾಧಿಸಿದರು. ಮಣಿಕಾ 14–12, 11–5, 11–5, 11–8ರಲ್ಲಿ ಸರ್ಬಿಯಾದ ಆ್ಯಂಡ್ರಿಯಾ ತೊಡೊರೊವಿಚ್‌ ಎದುರು ಗೆದ್ದರು. ಸುತೀರ್ಥ ಜರ್ಮನಿಯ ಸಬೈನ್ ವಿಂಟರ್‌ ವಿರುದ್ಧ 8–11, 17–15, 11–9, 5–11, 6–11, 11–8, 11–6ರಲ್ಲಿ ಗೆದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !