ಟೇಕ್ವಾಂಡೊ- ತಂಡಕ್ಕೆ ಬೀಳ್ಕೊಡುಗೆ

7

ಟೇಕ್ವಾಂಡೊ- ತಂಡಕ್ಕೆ ಬೀಳ್ಕೊಡುಗೆ

Published:
Updated:
Deccan Herald

ಬೆಂಗಳೂರು: ಬೆಲಾರ‌ಸ್‌ನಲ್ಲಿ ಆ. 19ರಿಂದ 27ರವರೆಗೆ ನಡೆಯಲಿರುವ 13ನೇ ಜೂನಿಯರ್ ಹಾಗೂ 8ನೇ ವೆಟರನ್ಸ್‌ ವಿಶ್ವ ಟೇಕ್ವಾಂಡೊ ಚಾಂಪಿಯನ್‌ಷಿಪ್‌ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಭಾರತ ತಂಡದ ಟೇಕ್ವಾಂಡೊಪಟುಗಳಿಗೆ ಬ್ಯಾಟರಾಯನಪುರ ಕ್ಷೇತ್ರದ ಅಮೃತನಗರದಲ್ಲಿ ಬೀಳ್ಕೊಡುಗೆ ಮತ್ತು ಕಿಟ್ ವಿತರಣೆ ಶನಿವಾರ ನಡೆಯಿತು.

ಈ ವೇಳೆ ಮಾತನಾಡಿದ ಬಿಬಿಎಂಪಿ ಸದಸ್ಯ ಪಿ.ವಿ.ಮಂಜುನಾಥಬಾಬು, ‘ಅಮೃತನಗರದಲ್ಲಿ ರಾಜ್ಯ ಕಬಡ್ಡಿ ಸಂಸ್ಥೆಗೆ ಮೀಸಲಾಗಿದ್ದ ಅರ್ಧಎಕರೆ ಜಾಗವನ್ನು ಸಚಿವ ಕೃಷ್ಣಬೈರೇಗೌಡ ಅವರು ಟೆಕ್ವಾಂಡೊ ಸಂಸ್ಥೆಗೆ ನೀಡಿದ್ದಾರೆ. ತರಬೇತಿ ಸಂಸ್ಥೆಯ ಕಟ್ಟಡವನ್ನು ನಿರ್ಮಿಸಲು ಸರ್ಕಾರದಿಂದ ಈಗಾಗಲೆ ₹ 25 ಲಕ್ಷ ಅನುದಾನ ಬಿಡುಗಡೆಯಾಗಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ. ಇನ್ನೂ ₹ 20 ಲಕ್ಷ ಅನುದಾನವನ್ನು ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು ಎಂದರು.

ಕರ್ನಾಟಕ ಟೇಕ್ವಾಂಡೊ ಸಂಸ್ಥೆಯ ಕಾರ್ಯದರ್ಶಿ ಜೆ.ಪ್ರದೀಪ್ ಮಾತನಾಡಿ, ‘ಬೆಲಾರ‌ಸ್‌ಗೆ ತೆರಳುತ್ತಿರುವ ಭಾರತ ತಂಡದ 17 ಪಟುಗಳಲ್ಲಿ 12 ಸ್ಪರ್ಧಿಗಳು ಕರ್ನಾಟಕದವರು ಎಂಬುದು ಹೆಮ್ಮೆಯ ಸಂಗತಿ. ಅಮೃತಹಳ್ಳಿ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಈ ಸ್ಪರ್ಧಿಗಳು ಕಳೆದ 8 ತಿಂಗಳಿಂದ ಅಭ್ಯಾಸ ನಡೆಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪದಕಗಳನ್ನು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ಅಭಿನಂದನೆ: ನೇಪಾಳದ ಕಠ್ಮಂಡುವಿನಲ್ಲಿ ಇತ್ತೀಚೆಗೆ ನಡೆದ 6ನೇ ದಕ್ಷಿಣ ಏಷ್ಯಾ ವಿಶ್ವ ಟೇಕ್ವಾಂಡೊ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ಕಿರಿಯರ ಮತ್ತು ಹಿರಿಯರ ವಿಭಾಗಗಳಲ್ಲಿ ಎರಡನೇ ಸ್ಥಾನ ಪಡೆದಿದೆ. ಪದಕ ಗಳಿಸಿದ ಟೇಕ್ವಾಂಡೊ ಪಟುಗಳಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ತಂಡದವರು ಕಿರಿಯರ ವಿಭಾಗದಲ್ಲಿ 34 ಚಿನ್ನ, 23 ಬೆಳ್ಳಿ ಹಾಗೂ 12 ಕಂಚಿನ ಪದಕ ಪಡೆದಿದ್ದಾರೆ. ಹಿರಿಯರ ವಿಭಾಗದಲ್ಲಿ 10 ಚಿನ್ನ, 18 ಬೆಳ್ಳಿ ಹಾಗೂ 28 ಕಂಚಿನಪದಕ ಗಳಿಸಿದ್ದಾರೆ. ಕವನ ಕೆ ಅವರು 5 ಚಿನ್ನದಪದಕ ಪಡೆದು ‘ಉತ್ತಮ ಕ್ರೀಡಾಪಟು’ ಪ್ರಶಸ್ತಿ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !