ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌: ಕಾರ್ಲ್‌ಸನ್‌ಗೆ ಮಣಿದ ಪ್ರಜ್ಞಾನಂದ

Last Updated 23 ಜನವರಿ 2022, 14:07 IST
ಅಕ್ಷರ ಗಾತ್ರ

ವಿಜ್ಕ್‌ ಆನ್‌ಜಿ, ನೆದರ್ಲೆಂಡ್ಸ್: ಭಾರತದ ಆರ್‌. ಪ್ರಜ್ಞಾನಂದ ಅವರು ಪ್ರತಿಷ್ಠಿತ ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್‌ ಟೂರ್ನಿಯಲ್ಲಿ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಮ್ಯಾಗ್ನಸ್ ಕಾರ್ಲಸನ್ ಅವರಿಗೆ ಮಣಿದರು. ವಿದಿತ್ ಸಂತೋಷ್‌ ಗುಜರಾತಿ ಕೂಡ ಸೋಲು ಅನುಭವಿಸಿದರು.

ಈ ಗೆಲುವಿನೊಂದಿಗೆ ನಾರ್ವೆಯ ಕಾರ್ಲಸನ್‌ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದರು. ಪ್ರಜ್ಞಾನಂದ ಜಂಟಿ 12ನೇ ಸ್ಥಾನದಲ್ಲಿದ್ದಾರೆ.

ಏಳನೇ ಸುತ್ತಿನಲ್ಲಿ ವಿದಿತ್ ಅವರು ಸ್ಥಳೀಯ ಆಟಗಾರ ಜೋರ್ಡನ್‌ ವ್ಯಾನ್‌ ಫೊರೀಸ್ಟ್ ಎದುರು ನಿರಾಸೆ ಅನುಭವಿಸಿದರು.

ಟೂರ್ನಿಯಲ್ಲಿ ವಿದಿತ್ ಅವರಿಗೆ ಇದು ಮೊದಲ ಸೋಲು. ಸದ್ಯ ಅವರು ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.

ಮಾಸ್ಕ್‌ ಧರಿಸಿ ಆಡಲು ನಿರಾಕರಿಸಿದ ರಷ್ಯಾದ ಡ್ಯಾನಿಲ್ ದುಬೊವ್ ಅವರಿಗೆ ಭಾರತದ ಅನೀಶ್ ಗಿರಿ ಎದುರು ಆಡುವ ಅವಕಾಶ ಸಿಗಲಿಲ್ಲ. ಭಾರತದ ಇನ್ನೋರ್ವ ಆಟಗಾರ ಸೂರ್ಯಶೇಖರ್ ಗಂಗೂಲಿ ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT