ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರಿನಂಗಳದಲ್ಲಿ ನಾಲ್ಕು ಪಂದ್ಯಗಳು

ಪ್ರೊ ಕಬಡ್ಡಿ ಲೀಗ್ ಏಳನೇ ಆವೃತ್ತಿ: ಡಬಲ್ ರೌಂಡ್ ರಾಬಿನ್ ಲೀಗ್ ಮಾದರಿಯ ಪಂದ್ಯಗಳು
Last Updated 15 ಜುಲೈ 2019, 17:32 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನ ಏಳನೇ ಆವೃತ್ತಿಯ ಪಂದ್ಯಗಳು ಇದೇ 20ರಂದು ಆರಂಭವಾಗಲಿದ್ದು ಡಬಲ್ ರೌಂಡ್ ರಾಬಿನ್ ಮಾದರಿಯ ಪಂದ್ಯಗಳು ಸೇರಿದಂತೆ ಹೊಸ ನಿಯಮಗಳನ್ನು ಈ ಬಾರಿ ಅಳವಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಆರಂಭದ ಆವೃತ್ತಿಗಳಲ್ಲಿ ಲೀಗ್‌ ಜುಲೈನಿಂದ ಅಕ್ಟೋಬರ್ ವರೆಗೆ ನಡೆಯುತ್ತಿತ್ತು. ಈ ಬಾರಿ ಮತ್ತೆ ಇದೇ ಅವಧಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಮೊದಲ ಪಂದ್ಯ ರಾತ್ರಿ 8 ಗಂಟೆಯ ಬದಲಾಗಿ 7.30ಕ್ಕೆ ಆರಂಭವಾಗಲಿದೆ.

ಪ್ರತಿ ತಂಡಗಳು ತವರಿನಲ್ಲಿ ತಲಾ ನಾಲ್ಕು ಪಂದ್ಯಗಳನ್ನು ಆಡಲಿವೆ. ಇದಕ್ಕೆ ತಂಡಗಳ ಕೋಚ್‌ಗಳು ಮತ್ತು ಪ್ರಮುಖ ಆಟಗಾರರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

‘ಏಳನೇ ಆವೃತ್ತಿ ತುಂಬ ಕುತೂಹಲಕಾರಿಯಾಗಿದೆ. ತವರಿನಲ್ಲಿ ನಾಲ್ಕೇ ಪಂದ್ಯಗಳು ಇರುವುದರಿಂದ ಪ್ರತಿ ತಂಡಗಳ ಆಟಗಾರರಿಗೆ ಸಾಕಷ್ಟು ವಿಶ್ರಾಂತಿ ಸಿಗಲಿದೆ. ಗಾಯಗೊಂಡವರು ಚೇತರಿಸಿಕೊಳ್ಳುವುದಕ್ಕು ಸಾಕಷ್ಟು ಅವಕಾಶ ಸಿಗಲಿದೆ’ ಎಂದು ಪಟ್ನಾ ಪೈರೇಟ್ಸ್‌ ಕೋಚ್‌ ರಾಮ್ ಮೆಹರ್ ಸಿಂಗ್ ಹೇಳಿದ್ದಾರೆ.

‘ಜುಲೈನಿಂದ ಅಕ್ಟೋಬರ್ ವರೆಗೆ ಲೀಗ್ ಆಯೋಜಿಸಲು ಮುಂದಾಗಿರುವುದು ಖುಷಿ ನೀಡಿದೆ. ಪ್ರತಿ ತಂಡಗಳು ಇನ್ನೊಂದನ್ನು ಎರಡು ಬಾರಿ ಮುಖಾಮುಖಿಯಾಗಲಿರುವುದರಿಂದ ಸ್ಪರ್ಧೆ ಹೆಚ್ಚು ರೋಚಕವಾಗಲಿದೆ’ ಎಂದು ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡದ ರೈಡರ್ ಪವನ್ ಶೆರಾವತ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT