ಭಾನುವಾರ, ಆಗಸ್ಟ್ 1, 2021
23 °C

ಶೂಟಿಂಗ್‌: ತೇಜಸ್ವಿನಿಗೆ ಅಗ್ರಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಾಜಿ ವಿಶ್ವ ಚಾಂಪಿಯನ್‌, ಭಾರತದ ತೇಜಸ್ವಿನಿ ಸಾವಂತ್ ಅವರು ಕ್ರೊವೇಷ್ಯಾದಲ್ಲಿ ನಡೆಯುತ್ತಿರುವ ಯುರೋಪಿಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನ ಕನಿಷ್ಠ ಅರ್ಹತಾ ಸ್ಕೋರ್‌ (ಎಂಕ್ಯುಎಸ್‌) ಸುತ್ತಿನಲ್ಲಿ ಅಗ್ರ ಸ್ಥಾನ ಗಳಿಸಿದ್ದಾರೆ.

ಗುರುವಾರ ನಡೆದ ಮಹಿಳೆಯರ 50 ಮೀಟರ್ಸ್‌ ರೈಫಲ್ ತ್ರಿ ಪೊಸಿಷನ್‌ನಲ್ಲಿ ಮಹಾರಾಷ್ಟ್ರದ ತೇಜಸ್ವಿನಿ 622.7 ಸ್ಕೋರು ಗಳಿಸಿ ಭಾರತದ ಮೂವರು ಮತ್ತು ಇರಾನ್‌ನ ಆರು ಸ್ಪರ್ಧಿಗಳನ್ನು ಹಿಂದಿಕ್ಕಿದರು. 

ಯುವ ಶೂಟರ್‌ ಐಶ್ವರ್ಯಾ ಪ್ರತಾತ್ ಸಿಂಗ್ ತೋಮರ್ 620.3 ‍ಸ್ಕೋರು ಗಳಿಸಿದರೆ ಸಂಜೀವ್ ರಜಪೂತ್ 619.7 ಮತ್ತು ಅಂಜುಮ್ ಮೌದ್ಗಿಲ್ 619.2 ಸ್ಕೋರ್ ದಾಖಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು