‘ನಮಗೂ ಸಹಾಯ ಮಾಡಿ’

7
ಭಾರತದ ನೆರವು ಕೋರಿದ ಅಫ್ಗಾನಿಸ್ತಾನದ ಕ್ರೀಡಾಪಟುಗಳು

‘ನಮಗೂ ಸಹಾಯ ಮಾಡಿ’

Published:
Updated:
Deccan Herald

ಪಾಲೆಂಬಂಗ್‌/ಜಕಾರ್ತ: ‘ಕ್ರಿಕೆಟ್‌ ತಂಡಕ್ಕೆ ನೆರವು ನೀಡಿ ಬೆಳೆಸಿ ದಂತೆ, ನಮಗೂ ಸಹಾಯ ಮಾಡಿ’ ಎಂದು ಯುದ್ಧಪೀಡಿತ ಅಫ್ಗಾನಿಸ್ತಾನ ದಿಂದ ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬಂದಿರುವ ಅಥ್ಲೀಟ್‌ಗಳು ಭಾರತವನ್ನು ಕೋರಿದ್ದಾರೆ.

ಅಫ್ಗಾನಿಸ್ತಾನದಿಂದ 100 ಅಥ್ಲೀಟ್‌ಗಳು ಇಲ್ಲಿಗೆ ಬಂದಿದ್ದು ರಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ 100 ಮೀಟರ್ ಓಟಗಾರರಾದ ಅಬ್ದುಲ್ ವಹಾಬ್‌ ಜಾಹಿರಿ ಮತ್ತು ಕಮಿಯಾ ಯೂಸುಫಿ ತಂಡದಲ್ಲಿದ್ದಾರೆ.

‘ಯುದ್ಧದ ನಡುವೆಯೇ ಬೆಳೆದವರು ನಾವು. ಹೀಗಾಗಿ ಶಾಂತಿಯುತ ಬದುಕು ನಮಗಿಲ್ಲ. ಆದರೂ ಕನಸುಗಳನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ’ ಎಂದು ಜಾಹಿರಿ ಹೇಳಿದರು.

ಆ ದೇಶದ ಕ್ರಿಕೆಟಿಗರಿಗೆ ಬೆಂಬಲ ನೀಡಿದ ಭಾರತ ರಶೀದ್ ಖಾನ್ ಅವ ರಂಥ ಆಟಗಾರರು ಬೆಳಕಿಗೆ ಬರಲು ಕಾರಣರಾಗಿದ್ದಾರೆ. ಹೀಗಾಗಿಯೇ ಅಥ್ಲೀ ಟ್‌ಗಳು ಕೂಡ ಭಾರತದತ್ತ ಕಣ್ಣು ಹಾಯಿಸಿದ್ದಾರೆ.

‘ಅಫ್ಗಾನಿಸ್ತಾನದಲ್ಲಿ ಸಾಕಷ್ಟು ಪ್ರತಿಭೆಗಳಿದ್ದಾರೆ. ಅವರಿಗೆ ಪ್ರೋತ್ಸಾಹ ಬೇಕಾಗಿದೆ. ನಿನ್ನೆ ಹೊರಡುವಾಗ ಕಾಬೂಲ್‌ನಲ್ಲಿ ಬಾಂಬ್ ಸ್ಫೋಟ ಆಗಿದೆ. ಅಲ್ಲಿ ಆಗಾಗ ಇಂಥ ಸ್ಫೋಟಗಳು ಸಂಭವಿಸುತ್ತವೆ. ಅಂಥ ಪರಿಸ್ಥಿತಿ ಯಲ್ಲಿ ಉನ್ನತ ಸ್ಥಾನಕ್ಕೇರುವ ಕನಸು ಕಾಣುವುದಾದರೂ ಹೇಗೆ’ ಎಂದು ಜಾಹಿರಿ ಪ್ರಶ್ನಿಸಿದರು.

‘ಅಥ್ಲೀಟ್‌ಗಳು ಆರ್ಥಿಕ ಸಮಸ್ಯೆಯನ್ನೂ ಎದುರಿಸುತ್ತಿ ದ್ದಾರೆ. ನನಗೆ ಶೂ ಕರೀದಿಸಲು ಲಭಿಸಿದ್ದು ಕೇವಲ ₹ 6,000. ಈ ಮೊತ್ತದಲ್ಲಿ ಗುಣಮಟ್ಟದ ಶೂ ಕೊಳ್ಳಲು ಸಾಧ್ಯವೇ’ ಎಂದು ಜಾಹಿರಿ ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !