ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರ್ತಿಪೂಜೆ... ಮಾಹಿತಿ

Last Updated 8 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ಇಷ್ಟಲಿಂಗ, ಮೂರ್ತಿಪೂಜೆ, ಸ್ಥಾವರಲಿಂಗ’ (ಪ್ರ.ವಾ.,ಚರ್ಚೆ, ಏ. 5) ಲೇಖನದಲ್ಲಿ ಡಾ. ಆರ್. ಲಕ್ಷ್ಮಿನಾರಾಯಣ ಅವರು ಸ್ವಾಮಿ ವಿವೇಕಾನಂದರು ಮುಸ್ಲಿಂ ದೊರೆಯೊಬ್ಬರಿಗೆ ಮೂರ್ತಿಪೂಜೆಯ ಅರ್ಥವನ್ನು ಮನಗಾಣಿಸಿದ ಪ್ರಸಂಗವನ್ನು ಉಲ್ಲೇಖಿಸಿದ್ದಾರೆ.

ಆದರೆ ಈ ಪ್ರಸಂಗ ನಡೆದದ್ದು ಮುಸ್ಲಿಂ ದೊರೆಯ ಆಸ್ಥಾನದಲ್ಲಿ ಅಲ್ಲ, ರಾಜಸ್ಥಾನದ ಆಳ್ವಾರಿನ ಹಿಂದೂ ದೊರೆಯಾದ ಮಹಾರಾಜ ಮಂಗಳಸಿಂಗ್‌ ಅವರ ಆಸ್ಥಾನದಲ್ಲಿ. ಮೂರ್ತಿ ಪೂಜೆಯಲ್ಲಿ ನಂಬಿಕೆ ಇಲ್ಲದ ಮಹಾರಾಜ ಮಂಗಳಸಿಂಗ್‌, ಸ್ವಾಮಿ ವಿವೇಕಾನಂದರನ್ನು ಪ್ರಶ್ನಿಸಿದಾಗ ಈ ಪ್ರಸಂಗ ನಡೆಯುತ್ತದೆ.

ಹೆಚ್ಚಿನ ಮಾಹಿತಿಗಾಗಿ, ಮೈಸೂರಿನ ಶ್ರೀ ರಾಮಕೃಷ್ಣಾಶ್ರಮ ಪ್ರಕಟಿಸಿರುವ, ಸ್ವಾಮಿ ಪುರುಷೋತ್ತಮಾನಂದ ವಿರಚಿತ, ಸ್ವಾಮಿ ವಿವೇಕಾನಂದರ ಸಮಗ್ರ ಜೀವನ ಚರಿತ್ರೆಯ 2ನೇ ಸಂಪುಟ ‘ವಿಶ್ವವಿಜೇತ ವಿವೇಕಾನಂದ’ದ ಹತ್ತನೆಯ ಮುದ್ರಣದ (2009), ಮೊದಲನೆಯ ಅಧ್ಯಾಯ (ರಜಪುತಾನದ ರಾಜರೊಂದಿಗೆ) ಪುಟ ಸಂ: 15 ರಿಂದ 18 ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT