ಬುಧವಾರ, ಮೇ 18, 2022
27 °C

ಥಾಮಸ್ ಕಪ್‌ ಟೂರ್ನಿ: ‘ಸಿ’ ಗುಂಪಿನಲ್ಲಿ ಭಾರತ

ಎಪಿ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಕಾಕ್: ಭಾರತ ಬ್ಯಾಡ್ಮಿಂಟನ್ ತಂಡವು ಥಾಮಸ್ ಕಪ್‌ ಟೂರ್ನಿಯ ‘ಸಿ’ ಗುಂಪಿನಲ್ಲಿ ಸ್ಥಾನ ಗಳಿಸಿದೆ. ಮಹಿಳೆಯರ ಉಬರ್ ಕಪ್‌ನಲ್ಲಿ ಭಾರತ ‘ಡಿ’ ಗುಂಪಿನಲ್ಲಿದೆ. ಮೇ 8ರಿಂದ 15ರ ವರೆಗೆ ಟೂರ್ನಿ ನಡೆಯಲಿದೆ.

ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಟೂರ್ನಿಯ ಡ್ರಾವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಥಾಮಸ್ ಕಪ್‌ನ ಹಾಲಿ ಚಾಂಪಿಯನ್ ಇಂಡೊನೇಷ್ಯಾ ‘ಎ’ ಗುಂಪಿನಲ್ಲಿದ್ದು ದಕ್ಷಿಣ ಕೊರಿಯಾ, ಥಾಯ್ಲೆಂಡ್ ಮತ್ತು ಸಿಂಗಪುರ ಇದೇ ಗುಂಪಿನಲ್ಲಿವೆ. 

‘ಬಿ’ ಗುಂಪಿನಲ್ಲಿ ಡೆನ್ಮಾಕ್ಸ್‌, ಚೀನಾ, ಫ್ರಾನ್ಸ್‌ ಮತ್ತು ಅಲ್ಜೀರಿಯಾ ಇದ್ದು ‘ಸಿ’ ಗುಂಪಿನಲ್ಲಿ ಭಾರತದೊಂದಿಗೆ ಚೀನಾ ಥೈಪೆ, ಜರ್ಮನಿ ಮತ್ತು ಕೆನಡಾ ಇದೆ. ಜಪಾನ್‌, ಮಲೇಷ್ಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ’ಡಿ’ ಗುಂಪಿನಲ್ಲಿವೆ.

ಉಬರ್ ಕಪ್‌ನ ಚಾಂಪಿಯನ್ ಚೀನಾ ‘ಬಿ’ ಗುಂಪಿನಲ್ಲಿದೆ. ಚೀನಾ ಥೈಪೆ, ಸ್ಪೇನ್ ಮತ್ತು ಆಸ್ಟ್ರೇಲಿಯಾ ಇದೇ ಗುಂಪಿನಲ್ಲಿದ್ದು ‘ಎ’ ಗುಂಪಿನಲ್ಲಿ 2018ರ ಚಾಂಪಿಯನ್ ಜಪಾನ್ ಜೊತೆ ಇಂಡೊನೇಷ್ಯಾ, ಫ್ರಾನ್ಸ್ ಮತ್ತು ಜರ್ಮನಿ ತಂಡಗಳಿವೆ. ‘ಸಿ’ ಗುಂಪಿನಲ್ಲಿ ಥಾಯ್ಲೆಂಡ್‌, ಡೆನ್ಮಾರ್ಕ್‌, ಮಲೇಷ್ಯಾ ಮತ್ತು ಈಜಿಪ್ಟ್, ‘ಡಿ’ ಗುಂಪಿನಲ್ಲಿ ಭಾರತದೊಂದಿಗೆ ದಕ್ಷಿಣ ಕೊರಿಯಾ, ಕೆನಡಾ ಮತ್ತು ಅಮೆರಿ ತಂಡಗಳು ಇವೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು