ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಫೈನಲ್‌ಗೆ ರೋಹಿತ್, ಭರತ್‌

Last Updated 25 ಆಗಸ್ಟ್ 2021, 12:07 IST
ಅಕ್ಷರ ಗಾತ್ರ

ನವದೆಹಲಿ: ಅಮೋಘ ಸಾಮರ್ಥ್ಯ ತೋರಿದ ಭಾರತದ ಮೂವರು ಬಾಕ್ಸರ್‌ಗಳು ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ತಲುಪಿದ್ದಾರೆ.

ರೋಹಿತ್‌ ಚಮೋಲಿ (48 ಕೆಜಿ ವಿಭಾಗ), ಭರತ್‌ ಜೂನ್‌ (+81 ಕೆಜಿ) ಪುರುಷರ ವಿಭಾಗದಲ್ಲಿ ಮತ್ತು ಮುಸ್ಕಾನ್‌ (46 ಕೆಜಿ) ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟವರು.

ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್ ಬೌಟ್‌ಗಳಲ್ಲಿ ಭರತ್‌ 5–0ಯಿಂದ ಕಿರ್ಗಿಸ್ತಾನದ ಎಮಿರ್‌ ಖಾನ್‌ ರಜಪೊವ್ ಎದುರು, ರೋಹಿತ್ ಅವರು ಇಷ್ಟೇ ಅಂತರದಿಂದ ಕಜಕಸ್ತಾನದ ಐದರ್‌ ಖದೀರ್‌ಖಾನ್‌ ಅವರನ್ನು ಮಣಿಸಿದರು.

ಮುಸ್ಕಾನ್ ಅವರು ಕೂಡ ಕಜಕಸ್ತಾನದ ಯೆಲ್ಯಾನೂರ್‌ ತುರ್ಗನೊವಾ ಎದುರು 5–0ಯಿಂದ ಗೆದ್ದರು.

ಸುಪ್ರಿಯಾ ರಾವತ್‌ (66 ಕೆಜಿ) 1–4ರಿಂದ ಸನೊವಾರ್ ಬೊಜೊರ್ಬೊವಾ ಎದುರು, ಆರ್ಜೂ (54 ಕೆಜಿ) 2–3ರಿಂದ ಉಜ್ಬೆಕಿಸ್ತಾನದ ಗುಲ್‌ದಾನಾ ತಿಲೆರ್ಜೆನ್ ಎದುರು ಸೋತು ಕಂಚಿನ ಪದಕಗಳಿಗೆ ಸಮಾಧಾನಪಟ್ಟರು.

ದೇವಿಕಾ ಘೋರ್ಪಡೆ (50 ಕೆಜಿ) 0–5ರಿಂದ ಉಜ್ಬೆಕಿಸ್ತಾನದ ಶೈನಾ ನೆಮತೊವೈನ್‌ ಎದುರು ಮತ್ತು ಅಂಕುಶ್‌ (66 ಕೆಜಿ) ಅಷ್ಟೇ ಅಂತರದಿಂದ ಉಜ್ಬೆಕಿಸ್ತಾನದ ಫಜ್ಲಿದ್ದೀನ್‌ ಎರ್ಕಿನ್‌ಬೊವ್ ಎದುರು ಸೋತು ಕಂಚು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT