ಟೈಗರ್‌ ವುಡ್ಸ್‌ಗೆ ‘ಮಾಸ್ಟರ್ಸ್’ ಗರಿ

ಶುಕ್ರವಾರ, ಏಪ್ರಿಲ್ 26, 2019
24 °C
ದಶಕದ ನಂತರ ಪ್ರಶಸ್ತಿ ಗೆದ್ದ ಅಮೆರಿಕದ ಗಾಲ್ಫರ್

ಟೈಗರ್‌ ವುಡ್ಸ್‌ಗೆ ‘ಮಾಸ್ಟರ್ಸ್’ ಗರಿ

Published:
Updated:
Prajavani

ಆಗಸ್ಟಾ: ಟೈಗರ್‌ ವುಡ್ಸ್ ದಶಕದ ನಂತರ ಗಾಲ್ಫ್‌ ಚಾಂಪಿಯನ್‌ ಆಗಿದ್ದಾರೆ. ಭಾನುವಾರ ನಡೆದ 83ನೇ ಮಾಸ್ಟರ್ಸ್ ಗಾಲ್ಫ್‌ ಚಾಂಪಿಯನ್‌ಷಿಪ್‌ನ ನಾಲ್ಕನೇ ಸುತ್ತಿನಲ್ಲಿ ಗೆಲುವು ಪಡೆದ ಅವರು 15ನೇ ಬಾರಿಗೆ ಪ್ರಮುಖ ಪ್ರಶಸ್ತಿಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. 

2008ರ ಅಮೆರಿಕ ಓಪನ್‌ನ ನಂತರ ವುಡ್ಸ್‌ ಅವರು ಯಾವುದೇ ಪ್ರಶಸ್ತಿ ಗೆದ್ದಿರಲಿಲ್ಲ. ಹನ್ನೊಂದು ವರ್ಷಗಳಿಂದ ಪ್ರಶಸ್ತಿ ಬರವನ್ನು ಅವರು ಅನುಭವಿಸಿದ್ದರು. ಗಾಯದ ಸಮಸ್ಯೆ, ಲೈಂಗಿಕ ಹಗರಣ ಗಳು ಅವರ ಕ್ರೀಡಾ ಬದುಕನ್ನು ಮಸುಕಾಗಿಸಿದ್ದವು. 2017ರಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಮಾಸ್ಟರ್ಸ್ ಟೂರ್ನಿಯಲ್ಲಿ ಮತ್ತೆ ಪುಟಿದೆದ್ದಿದ್ದಾರೆ. 

2005ರಲ್ಲಿ ಕೊನೆಯ ಬಾರಿಗೆ ಮಾಸ್ಟರ್ಸ್‌ ಚಾಂಪಿಯನ್ ಆಗಿದ್ದ ವುಡ್ಸ್, ಇದೀಗ 5ನೇ ಬಾರಿಗೆ ಹಸಿರು ಕೋಟ್‌ ಅನ್ನು ತೊಟ್ಟಿದ್ದಾರೆ. ಮೂರು ದಶಕಗಳಲ್ಲೂ ಮಾಸ್ಟರ್ಸ್ ಬಿರುದನ್ನು ಪಡೆದವರಲ್ಲಿ ವುಡ್ಸ್ ಎರಡನೆಯವರಾಗಿ ದಾಖಲೆ ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !