ಭಾನುವಾರ, ಮಾರ್ಚ್ 7, 2021
25 °C

ಕಾರು ಅಪಘಾತ: ಗಾಲ್ಫ್‌ ಆಟಗಾರ ಟೈಗರ್‌ ವುಡ್ಸ್‌ಗೆ ಗಂಭೀರ ಗಾಯ

ಎಎಫ್‌‍ಪಿ Updated:

ಅಕ್ಷರ ಗಾತ್ರ : | |

Tiger Woods

ಲಾಸ್ ಏಂಜಲೀಸ್: ಅಮೆರಿಕದ ಖ್ಯಾತ ಗಾಲ್ಫ್‌ ಆಟಗಾರ ಟೈಗರ್‌ ವುಡ್ಸ್‌ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ ಎಂದು ಲಾಸ್ ಏಂಜಲೀಸ್ ಆಡಳಿತ ತಿಳಿಸಿದೆ.

ವುಡ್ಸ್‌ ಅವರ ಕಾಲಿಗೆ ಗಂಭೀರ ಏಟಾಗಿದ್ದು, ಕಾರಿನೊಳಗೆ ಸಿಲುಕಿದ್ದ ಅವರನ್ನು ರಕ್ಷಿಸಿರುವ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ವುಡ್ಸ್‌ ಅವರಿಗೆ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಯಶಸ್ವಿ ಗಾಲ್ಫರ್ ಆಗಿರುವ ವುಡ್ಸ್ 15 ಪ್ರಮುಖ ಗಾಲ್ಫ್ ಚಾಂಪಿಯನ್‌ಷಿಪ್‌ಗಳಲ್ಲಿ ಜಯಗಳಿಸಿದ್ದಾರೆ.

ಓದಿ: ಗಾಲ್ಫ್‌ ಚಾಂಪಿಯನ್‌ಷಿಪ್‌: ಮತ್ತೆ ಗರ್ಜಿಸಿದ ‘ಟೈಗರ್’!

ಇತ್ತೀಚೆಗಷ್ಟೇ ಅವರು ಐದನೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಆಡಲಿದ್ದೇನೆಯೇ ಎಂಬುದು ಖಚಿತವಿಲ್ಲ ಎಂದು ಅವರು ಹೇಳಿದ್ದರು. ಈ ಹಿಂದೆ ಕೊನೆಯದಾಗಿ 2019ರಲ್ಲಿ ಪಂದ್ಯವಾಡಿದ್ದ ಅವರು ಗೆಲುವು ಸಾಧಿಸಿದ್ದಾರೆ.

‘ರಿವೇರಿಯಾ ಕಂಟ್ರಿ ಕ್ಲಬ್‌’ನಲ್ಲಿ ವಾರ್ಷಿಕ ಜೆನೆಸಿಸ್ ಇನ್ವಿಟೇಷನಲ್ ಗಾಲ್ಫ್ ಟೂರ್ನಿಯಲ್ಲಿ ಭಾಗವಹಿಸಲು ವುಡ್ಸ್‌ ತೆರಳುತ್ತಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು