ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ: ಟೈಟನ್ಸ್‌ಗೆ ಮಣಿದ ಯೋಧಾ

Last Updated 13 ಅಕ್ಟೋಬರ್ 2018, 16:23 IST
ಅಕ್ಷರ ಗಾತ್ರ

ಸೋನೆಪತ್‌: 19 ರೈಡ್‌ಗಳಲ್ಲಿ 11 ಪಾಯಿಂಟ್ ಹೆಕ್ಕಿ ತಂದ ರಾಹುಲ್ ಚೌಧರಿ ಅವರ ಉತ್ತಮ ಆಟದ ನೆರವಿನಿಂದ ತೆಲುಗು ಟೈಟನ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನ ಶನಿವಾರದ ಪಂದ್ಯದಲ್ಲಿ ಗೆಲುವು ಸಾಧಿಸಿತು.

ಇಲ್ಲಿನ ಮೋತಿಲಾಲ್ ನೆಹರೂ ಕ್ರೀಡಾಶಾಲೆಯ ಆವರಣದಲ್ಲಿ ನಡೆದ ಪಂದ್ಯದಲ್ಲಿ ಈ ತಂಡ ಯು.ಪಿ.ಯೋಧಾ ವಿರುದ್ಧ 34–29ರಿಂದ ಜಯಿಸಿತು. ಅಬೋಜರ್ ಮಿಘಾನಿ ಮತ್ತು ನೀಲೇಶ್ ಸಾಳುಂಕೆ ಕ್ರಮವಾಗಿ ಆರು ಮತ್ತು ಐದು ಪಾಯಿಂಟ್ ಗಳಿಸಿ ಮಿಂಚಿದರು.

ಯು.ಪಿ.ಯೋಧಾ ಪರವಾಗಿ ಕನ್ನಡಿಗ ಆಟಗಾರರಾದ ಪ್ರಶಾಂತ್ ಕುಮಾರ್ ರೈ ಮತ್ತು ರಿಷಾಂಕ್ ದೇವಾಡಿಗ ಕ್ರಮವಾಗಿ 11 ಮತ್ತು ಏಳು ಪಾಯಿಂಟ್ ಗಳಿಸಿದರು. ಆದರೆ ಸಂಘಟಿತ ಹೋರಾಟ ಮಾಡದೆ ತಂಡ ಸೋಲಿಗೆ ಶರಣಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT