ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಬಾಕ್ಸಿಂಗ್‌: ತರಬೇತಿಗಾಗಿ ಇಟಲಿಗೆ ಮೇರಿ ಕೋಮ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆರು ಬಾರಿಯ ವಿಶ್ವ ಚಾಂಪಿಯನ್‌, ಭಾರತದ ಮೇರಿ ಕೋಮ್‌ ಅವರು ತರಬೇತಿಗಾಗಿ ಇಟಲಿಯಲ್ಲಿರುವ ದೇಶದ ಇತರ ಬಾಕ್ಸರ್‌ಗಳನ್ನು ಸೇರಿಕೊಳ್ಳಲು ನಿರ್ಧರಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ಗಾಗಿ ಜಪಾನ್‌ ಸರ್ಕಾರ ಸಿದ್ಧಪಡಿಸಿರುವ ಹೆಚ್ಚುವರಿ ನಿರ್ಬಂಧಗಳಿಂದ ಪಾರಾಗಲು ಅವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ.

ಇನ್ನು ಒಂದೆರಡು ದಿನಗಳಲ್ಲಿ ಅವರು ಇಟಲಿಯ ಅಸ್ಸಾಸಿ ವಿಮಾನವೇರಲಿದ್ದು, ಅಲ್ಲಿ ತರಬೇತಿ ಪಡೆಯುತ್ತಿರುವ ಎಂಟು ಮಂದಿಯನ್ನು ಸೇರಿಕೊಳ್ಳಲಿದ್ದಾರೆ. ಅಲ್ಲಿಂದಲೇ ನೇರವಾಗಿ ಟೋಕಿಯೊಕ್ಕೆ ತೆರಳುವ ಚಿಂತನೆಯಲ್ಲಿದ್ದಾರೆ.

ಲಂಡನ್‌ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮೇರಿ, ಇದುವರೆಗೆ ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆಯುತ್ತಿದ್ದರು.

‘ನಾನು ನನ್ನ ಯೋಜನೆಗಳನ್ನು ಬದಲಿಸಿದ್ದೇನೆ. ದೆಹಲಿಗೆ ಬಂದಿದ್ದು ಮತ್ತು ನಾಳೆ ಅಥವಾ ನಾಡಿದ್ದು ಇಟಲಿಗೆ ತೆರಳುತ್ತೇನೆ. ಭಾರತದಿಂದ ಪ್ರಯಾಣಿಸುವ ಅಥ್ಲೀಟ್‌ಗಳ ಮೇಲೆ ಕಟ್ಟುನಿಟ್ಟಿನ ಕ್ವಾರಂಟೈನ್‌ ನಿರ್ಬಂಧಗಳನ್ನು ಜಾರಿ ಮಾಡಲಾಗುತ್ತಿದೆ. ನಾನು ಅವುಗಳಿಂದ ತಪ್ಪಿಸಿಕೊಳ್ಳಲು ಬಯಸಿದ್ದೇನೆ‘ ಎಂದು 38 ವರ್ಷದ ಮೇರಿ ಕೋಮ್ ಮಂಗಳವಾರ ತಿಳಿಸಿದ್ದಾರೆ.

‘ಇಷ್ಟು ದಿನ ಕಠಿಣ ತರಬೇತಿ ಪಡೆದ ಬಳಿಕ, ಕಠಿಣ ಕ್ವಾರಂಟೈನ್‌ ನಿಯಮಗಳಿಂದಾಗಿ ನಮ್ಮ ಲಯ ತಪ್ಪಬಹುದು. ಆ ಅಪಾಯವನ್ನು ಮೇಲೆದುಕೊಳ್ಳಲು ಬಯಸುವುದಿಲ್ಲ‘ ಎಂದು ಮೇರಿ ಹೇಳಿದ್ದಾರೆ.

ಮೇರಿ ಜೊತೆಗೆ ಅವರ ಕೋಚ್‌ ಚೋಟೆಲಾಲ್ ಯಾದವ್ ಮತ್ತು ಒಬ್ಬ ಫಿಸಿಯೊ ಕೂಡ ಇಟಲಿಗೆ ತೆರಳುವರು.

ಟೋಕಿಯೊಗೆ ತೆರಳುವ ಮುನ್ನ ಒಂದು ವಾರ ಪ್ರತಿದಿನ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದೂ ಟೋಕಿಯೊಗೆ ತಲುಪಿದ ನಂತರ ಮೂರು ದಿನ ಬೇರೆ ದೇಶದ ಯಾರೊಂದಿಗೂ ಮಾತನಾಡಬಾರದು ಎಂದು ಭಾರತದ ಪ್ರತಿನಿಧಿಗಳಿಗೆ ಜಪಾನ್ ಸರ್ಕಾರ ಸೂಚಿಸಿತ್ತು.

ಇದನ್ನೂ ಓದಿ... ಟೆನಿಸ್‌: ಅರ್ಜುನ ಪುರಸ್ಕಾರಕ್ಕೆ ಅಂಕಿತಾ, ಪ್ರಜ್ಞೇಶ್ ಹೆಸರು ಶಿಫಾರಸು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು