ಭಾನುವಾರ, ಜೂನ್ 20, 2021
28 °C

ಟೋಕಿಯೊ ಒಲಿಂಪಿಕ್ಸ್ ರದ್ದತಿಗೆ ಜಪಾನ್‌ ವೈದ್ಯರ ಸಲಹೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಒಲಿಂಪಿಕ್ಸ್ ಕೂಟವನ್ನು ರದ್ದು ಮಾಡುವುದು ಒಳಿತು ಎಂದು ಜಪಾನ್‌ನ ವೈದ್ಯರ ಬಳಗ ಸಲಹೆ ನೀಡಿದೆ. ವೈದ್ಯಕೀಯ ವಲಯದವರು ಕ್ರೀಡಾಕೂಟದಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಲು ಮುಂದಾಗಬೇಕು ಎಂದು ಆಯೋಜಕರು ಪದೇ ಪದೇ ಕೋರಿಕೊಂಡ ಬೆನ್ನಲ್ಲೇ ಈ ನಿರ್ಧಾರವನ್ನು ವೈದ್ಯರು ಪ್ರಕಟಿಸಿದ್ದಾರೆ. 

ಕೋವಿಡ್‌ನಿಂದಾಗಿ ಮುಂದೂಡಲಾಗಿರುವ ಟೋಕಿಯೊ ಒಲಿಂಪಿಕ್ಸ್‌ ಆರಂಭವಾಗಲು ಹತ್ತು ವಾರ ಮಾತ್ರ ಬಾಕಿ ಇದೆ. ಜಪಾನ್‌ನಲ್ಲಿ ಇತ್ತೀಚೆಗೆ ಕೋವಿಡ್ ಏರುಗತಿಯಲ್ಲಿ ಸಾಗುತ್ತಿದೆ. ಇಂಥ ಸಂದರ್ಭದಲ್ಲೇ ವೈದ್ಯರು ಕ್ರೀಡಾಕೂಟದ ವಿರುದ್ಧ ಹೇಳಿಕೆ ನೀಡಿರುವುದು ಆಯೋಜಕರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

‘ಕೋವಿಡ್‌ ನಾಲ್ಕನೇ ಅಲೆ ಗಂಭೀರವಾಗಿದೆ. ಅದರ ವಿರುದ್ಧ ತೀವ್ರ ಹೋರಾಟ ನಡೆಯುತ್ತಿದೆ. ಒಲಿಂಪಿಕ್ಸ್ ನಡೆದರೆ ಇಲ್ಲಿ ರೋಗ ಇನ್ನಷ್ಟು ಪಸರಿಸಲಿದ್ದು ಸಾವಿನ ಸಂಖ್ಯೆಯೂ ಹೆಚ್ಚಾಗಲಿದೆ’ ಎಂದು ಟೋಕಿಯೊದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರು ಸಾವಿರಕ್ಕೂ ಅಧಿಕ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು