ಶುಕ್ರವಾರ, ಡಿಸೆಂಬರ್ 6, 2019
21 °C
2020ರ ಮಾರ್ಚ್‌ 26ರಿಂದ ಜಪಾನ್‌ನಲ್ಲಿ ಒಲಿಂಪಿಕ್‌ ಜ್ಯೋತಿ ಸಂಚಾರ ಆರಂಭ

ದುರಂತಪೀಡಿತ ಪ್ರದೇಶಗಳಿಗೆ ಕ್ರೀಡಾ ಜ್ಯೋತಿ

Published:
Updated:
Prajavani

ಟೋಕಿಯೊ: ಟೋಕಿಯೊ ಒಲಿಂಪಿಕ್‌ ಕ್ರೀಡಾ ಜ್ಯೋತಿಯ ಓಟವು ಜಪಾನ್‌ನ ದುರಂತ ಪೀಡಿತ ಪ್ರದೇಶಗಳನ್ನು ಸುತ್ತಿ ಬರಲಿದೆ. 2020ರ ಮಾರ್ಚ್‌ 26ರಂದು ಫುಕುಶಿಮಾದಲ್ಲಿ ಆರಂಭವಾಗುವ ಓಟವು 2011ರಲ್ಲಿ ಸುನಾಮಿಯಿಂದ ಹಾನಿಗೊಳಗಾದ ಈಶಾನ್ಯ ಜಪಾನ್‌ನ ಪ್ರದೇಶಗಳಲ್ಲಿ ಸಂಚರಿಸಲಿದೆ ಎಂದು ಟೂರ್ನಿಯ ಸಂಘಟಕರು ತಿಳಿಸಿದ್ದಾರೆ.

ಒಲಿಂಪಿಕ್‌ ಕ್ರೀಡಾಜ್ಯೋತಿಯ ಪುಕುಶಿಮಾದ ಜೆ ಹಳ್ಳಿಯ ಕ್ರೀಡಾ ತರಬೇತಿ ಕೇಂದ್ರದಿಂದ ಆರಂಭವಾಗಲಿದೆ. ಮಾರಣಾಂತಿಕ ಸುನಾಮಿ ಅಪ್ಪಳಿಸಿದ ಸಂದರ್ಭದಲ್ಲಿ ವಿಕಿರಣ ದುರಂತ ಸಂಭವಿಸಿತ್ತು. ಈ ವೇಳೆ ಕಾರ್ಮಿಕರು ವಿಕಿರಣಶೀಲತೆಯಿಂದ ಉಂಟಾದ ತ್ಯಾಜ್ಯದಿಂದ ತಪ್ಪಿಸಿಕೊಳ್ಳಲು ಈ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು.

ಒಲಿಂಪಿಕ್‌ ಜ್ಯೋತಿಯು ಜಪಾನ್‌ನ 47 ಆಡಳಿತಾಧಿಕಾರ ಕೇಂದ್ರಸ್ಥಾನಗಳು, 857 ನಗರಪಾಲಿಕೆಗಳು ಹಾಗೂ ಹಲವು ಸಾಂಪ್ರದಾಯಿಕ ಸ್ಮಾರಕಗಳನ್ನು 121 ದಿನಗಳ ಅವಧಿಯಲ್ಲಿ ಹಾದು ಬರಲಿದೆ. ಒಟ್ಟಾರೆ 98 ಶೇ ಜಪಾನಿಗರು ವಾಸಿಸುವ ಪ್ರದೇಶವನ್ನು ಸಂಧಿಸಲಿದೆ ಎಂದು ಸಂಘಟಕರು ತಿಳಿಸಿದರು. ಮೌಂಟ್‌ ಫುಜಿ ಹಾಗೂ ಮಿಯಾಜಿಮಾ ದೇವಾಲಯದಂತಹ ಪ್ರಸಿದ್ಧ ಸ್ಮಾರಕಗಳು ಜ್ಯೋತಿ ಸಂಚರಿಸುವ ಮಾರ್ಗದಲ್ಲಿ ಸೇರಿವೆ.

1945ರಲ್ಲಿ ಪ್ರಥಮ ಅಣುಬಾಂಬ್‌ ಜಪಾನ್‌ನ ಹೀರೋಶಿಮಾದಲ್ಲಿ ಪ್ರಯೋಗಿಸಲ್ಪಟ್ಟಿತ್ತು.

ಇಲ್ಲಿ ಸಂತ್ರಸ್ತರಾದವರಿಗೆ ಅರ್ಪಿತವಾದ ಹೀರೋಶಿಮಾ ಸ್ಮಾರಕ ಪಾರ್ಕ್‌ಗೂ ಇದು ಒಲಿಂಪಿಕ್‌ ಜ್ಯೋತಿ ಮೆರವಣಿಗೆ ತೆರಳಲಿದೆ.

ಜುಲೈ 24ರಂದು ಒಲಿಂಪಿಕ್‌ ಟೂರ್ನಿ ಉದ್ಘಾಟನೆಗೊಳ್ಳಲಿರುವ ನೂತನ ಕ್ರೀಡಾಂಗಣದಲ್ಲಿ ಜ್ಯೋತಿಯ ಮೆರವಣಿಗೆಯು ಸಮಾರೋಪ
ಗೊಳ್ಳಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು