ಬುಧವಾರ, ನವೆಂಬರ್ 13, 2019
23 °C

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ತೇಜಸ್ವಿನಿ

Published:
Updated:
Prajavani

ದೋಹಾ: ಅನುಭವಿ ಶೂಟರ್‌ ತೇಜಸ್ವಿನಿ ಸಾವಂತ್‌, ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ 12ನೇ ಸ್ಪರ್ಧಿ ಎನಿಸಿದರು. 14ನೇ ಏಷ್ಯನ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 50 ಮೀ. ರೈಫಲ್‌ 3 ಪೊಸಿಷನ್ಸ್‌  ಸ್ಪರ್ಧೆಯಲ್ಲಿ ಅವರಿಗೆ ಸ್ವಲ್ಪದರಲ್ಲೇ ಪದಕ ಕೈತಪ್ಪಿತು.

ಸ್ಪರ್ಧೆಯ ಫೈನಲ್‌ ತಲುಪುವ ಮೂಲಕ ತೇಜಸ್ವಿನಿ ಒಲಿಂಪಿಕ್ಸ್‌ ಕೋಟಾ ಖಚಿತಪಡಿಸಿದರು. ಲುಸೇಯ್ಲ್‌ ಶೂಟಿಂಗ್‌ ರೇಂಜ್‌ನಲ್ಲಿ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಓಟ್ಟು 1,171 ಅಂಕ ಪಡೆಯುವ ಮೂಲಕ ಐದನೇ ಸ್ಥಾನ ಗಳಿಸಿದರು. 39 ವರ್ಷದ ತೇಜಸ್ವಿನಿ ಫೈನಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಸಮಾಧಾನ ಪಡಬೇಕಾಯಿತು. ಫೈನಲ್‌ನಲ್ಲಿ ಅವರು 435.8 ಅಂಕ ಗಳಿಸಿದರು.

ಪ್ರತಿಕ್ರಿಯಿಸಿ (+)