ಸೋಮವಾರ, ಸೆಪ್ಟೆಂಬರ್ 20, 2021
23 °C

Tokyo Olympics: ಬೀಚ್‌ ವಾಲಿಬಾಲ್‌ನಲ್ಲಿ ಚಿನ್ನ ಗೆದ್ದ ಅಮೆರಿಕ

ಎಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಆಸ್ಟ್ರೇಲಿಯಾ ಆಟಗಾರ್ತಿಯರ ಸವಾಲನ್ನು ಹಿಮ್ಮೆಟ್ಟಿಸಿದ ಅಮೆರಿಕದ ಅಪ್ರಿಲ್ ರಾಸ್‌ ಹಾಗೂ ಅಲಿಕ್ಸ್ ಅಲಿಕ್ಸ್ ಕ್ಲೈನ್‌ಮನ್‌ ಒಲಿಂಪಿಕ್ಸ್‌ನ ಮಹಿಳಾ ಬೀಚ್‌ ವಾಲಿಬಾಲ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡರು. ಲಂಡನ್‌ನಲ್ಲಿ ಬೆಳ್ಳಿ, ರಿಯೊದಲ್ಲಿ ಕಂಚಿನ ಪ‍ದಕ ವಿಜೇತರಾಗಿದ್ದ ರಾಸ್‌, ಇಲ್ಲಿ ಪದಕಕ್ಕೆ ಚಿನ್ನದ ಹೊಳಪು ತಂದುಕೊಂಡರು.

ಶುಕ್ರವಾರ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅಮೆರಿಕ ಜೋಡಿಯು 21–15, 21–16ರಿಂದ ಮರಿಯಾಫ್‌ ಅರ್ಟಾಚೊ ಡೆಲ್ ಸೊಲಾರ್‌ ಮತ್ತು ಟಾಲಿಕ್ ಕ್ಲ್ಯಾನ್ಸಿ ಅವರನ್ನು ಸೋಲಿಸಿದರು. ಟೋಕಿಯೊದ ಸುಡುಬಿಸಿಲಿನಲ್ಲಿ ನಡೆದ ಈ ಪಂದ್ಯವು 43 ನಿಮಿಷಗಳಲ್ಲಿ ಮುಕ್ತಾಯವಾಯಿತು. 33 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಆಟಗಾರ್ತಿಯರು ಬಳಲಿದರು.

ಕಂಚಿನ ಪದಕಕ್ಕಾಗಿ ನಡೆದ ಸೆಣಸಾಟದಲ್ಲಿ ಸ್ವಿಟ್ಜರ್ಲೆಂಡ್‌ನ ಜೋವಾನ ಹೆಡ್ರಿಚ್‌ ಮತ್ತು ಅನೌಕ್‌ ವರ್ಜ್ ಡೆಪ್ರೆ ಅವರು ಲಾಟ್ವಿಯಾದ ಅನಸ್ಟೇಸಿಯಾ ಕ್ರಾವ್ಸೆನೊಕಾ ಮತ್ತು ಟೀನಾ ಗ್ರಾವುಡಿನಾ ಅವರನ್ನು ಪರಾಭವಗೊಳಿಸಿದರು. ಸ್ವಿಸ್ ಜೋಡಿಗೆ 21–19, 21–15ರಿಂದ ಜಯ ಒಲಿಯಿತು.

21 ವರ್ಷಗಳ ನಂತರ ಬೀಚ್‌ ವಾಲಿಬಾಲ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಪದಕ ದಕ್ಕಿತು. 2000ರ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ನತಾಲಿ ಕುಕ್‌ ಮತ್ತು ಕೆರ್ರಿ ಪೊಟ್ಟಾಸ್ಟ್ ಚಿನ್ನದ ಪದಕ ಗೆದ್ದಿದ್ದರು.

ಫೈನಲ್ ಪಂದ್ಯದ ಸ್ಕೋರ್‌

 

ದೇಶಸೆಟ್‌ 1ಸೆಟ್ 2
ಅಮೆರಿಕ2121
ಆಸ್ಟ್ರೇಲಿಯಾ1516

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು