ಭಾನುವಾರ, ಸೆಪ್ಟೆಂಬರ್ 26, 2021
28 °C

Tokyo olympics: ಗುಂಡೇಟು ತಿಂದಿದ್ದ ಕ್ಯೂಬಾದ ಲಾ ಕ್ರೂಜ್‌ಗೆ ಬಾಕ್ಸಿಂಗ್‌ ಚಿನ್ನ

ರಾಯಿಟರ್ಸ್/ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ದರೋಡೆಕೋರರಿಂದ ಗುಂಡಿನ ದಾಳಿ ಒಳಗಾಗಿದ್ದ ಬಾಕ್ಸರ್‌ವೊಬ್ಬರು ಒಲಿಂಪಿಕ್ಸ್‌ನಲ್ಲಿ ಎರಡನೇ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಕ್ಯೂಬಾದ ಜೂಲಿಯೊ ಲಾ ಕ್ರೂಜ್‌ ಟೋಕಿಯೊ ಕ್ರೀಡಾಕೂಟದ ಹೆವಿವೇಟ್‌ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ.

31 ವರ್ಷದ ಲಾ ಕ್ರೂಜ್ ಶುಕ್ರವಾರ ನಡೆದ ಹೆವಿವೇಟ್ ವಿಭಾಗದ ಫೈನಲ್‌ನಲ್ಲಿ 5–0ಯಿಂದ ರಷ್ಯಾದ ಮುಸ್ಲಿಮ್‌ ಘಾಜಿಮಗೊನೆದೊವ್ ಅವರನ್ನು ಪರಾಭವಗೊಳಿಸಿದರು. ಈ ವಿಭಾಗದ ಕಂಚಿನ ಪದಕಗಳು ನ್ಯೂಜಿಲೆಂಡ್‌ನ ಡೇವಿಡ್‌ ನಿಕಾ ಮತ್ತು ಬ್ರೆಜಿಲ್‌ನ ಆ್ಯಬ್‌ನರ್‌ ಟೆಕ್ಸಿರಾ ಅವರ ಪಾಲಾದವು.

ಟೋಕಿಯೊ ಒಲಿಂಪಿಕ್ಸ್‌ನ ಬಾಕ್ಸಿಂಗ್‌ನಲ್ಲಿ ಕ್ಯೂಬಾಗೆ ಇದು ಮೂರನೇ ಚಿನ್ನದ ಪದಕ. ಪುರುಷರ ಲೈಟ್‌ವೇಟ್‌ ವಿಭಾಗದಲ್ಲಿ ಅರ್ಲೆನ್‌ ಲೊಪೆಜ್‌ ಮತ್ತು ವೆಲ್ಟರ್‌ವೇಟ್ ವಿಭಾಗದಲ್ಲಿ ರೇನಿಯಲ್‌ ಇಗ್ಲೆಶಿಯಸ್‌ ಅಗ್ರಸ್ಥಾನ ಗಳಿಸಿದ್ದರು.

2014ರಲ್ಲಿ ಸಶಸ್ತ್ರ ದರೋಡೆಕೋರರು ಲಾ ಕ್ರೂಜ್‌ ಅವರಿಗೆ ಗುಂಡು ಹಾರಿಸಿದ್ದರು. ಅವರ ಹಿಂಭಾಗಕ್ಕೆ ಗುಂಡು ತಾಗಿದರೂ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದರು. ಘಟನೆ ನಡೆದ ಎರಡು ವರ್ಷಗಳ ಬಳಿಕ 2016ರಲ್ಲಿ ರಿಯೊ ಕೂಟದಲ್ಲಿ ಅವರಿಗೆ ಚಿನ್ನ ಒಲಿದಿತ್ತು.

‘ಘಟನೆಯ ಆಘಾತದಿಂದ ಬೇಗ ಹೊರಬರಲಾಗಲಿಲ್ಲ. ಅದು ಕಷ್ಟದ ಪರಿಸ್ಥಿತಿಯಾಗಿತ್ತು. ಆದರೆ ನಾನು ವಿಶ್ವಾಸ ಕಳೆದುಕೊಳ್ಳಲಿಲ್ಲ‘ ಎಂದು ಹೆವಿವೇಟ್‌ನಲ್ಲಿ ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆಗಿರುವ ಲಾ ಕ್ರೂಜ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು