ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo olympics: ಪುರುಷರ ಬ್ಯಾಸ್ಕೆಟ್‌ಬಾಲ್‌‌ನಲ್ಲಿ ಅಮೆರಿಕ ಚಿನ್ನದ ಸಾಧನೆ

Last Updated 7 ಆಗಸ್ಟ್ 2021, 14:23 IST
ಅಕ್ಷರ ಗಾತ್ರ

ಟೋಕಿಯೊ: ಒಲಿಂಪಿಕ್ಸ್‌ನ ಬ್ಯಾಸ್ಕೆಟ್‌ಬಾಲ್‌ ಸ್ಪರ್ಧೆಯಲ್ಲಿ ಅಮೆರಿಕ ತಂಡವು ಪ್ರಾಬಲ್ಯ ಮುಂದುವರಿಸಿದೆ.

ಪುರುಷರ ವಿಭಾಗದ ಫೈನಲ್‌ನಲ್ಲಿ ಅಮೆರಿಕ 87–82 ಪಾಯಿಂಟ್ಸ್‌ನಿಂದ ಫ್ರಾನ್ಸ್‌ ತಂಡವನ್ನು ಪರಾಭವಗೊಳಿಸಿತು. ಆ ಮೂಲಕ ಒಲಿಂಪಿಕ್ಸ್‌ನಲ್ಲಿ ಸತತ ನಾಲ್ಕನೇ ಚಿನ್ನ ಗೆದ್ದ ಸಾಧನೆ ಮಾಡಿತು.

ರೋಚಕ ಘಟ್ಟದಲ್ಲಿ ಮೋಡಿ ಮಾಡಿದ ಕೆವಿನ್‌ ಡ್ಯುರಾಂಟ್‌, ಅಮೆರಿಕ ಪಾಳಯದಲ್ಲಿ ಸಂತಸ ಮೇಳೈಸಲು ಕಾರಣರಾದರು. ಅವರು ಒಟ್ಟು 29 ಪಾಯಿಂಟ್ಸ್‌ ಗಳಿಸಿದರು. ಜೇಸನ್‌ ಟಾಟಮ್‌ 19 ಪಾಯಿಂಟ್ಸ್‌ ಕಲೆಹಾಕಿದರು.

ಮೊದಲ ಕ್ವಾರ್ಟರ್‌ನಿಂದಲೇ ಪಾರಮ್ಯ ಮೆರೆದ ಅಮೆರಿಕ ಆಟಗಾರರು 22–18ರಿಂದ ಮುನ್ನಡೆ ಗಳಿಸಿದರು. ಎರಡನೇ ಕ್ವಾರ್ಟರ್‌ನಲ್ಲಿ ಫ್ರಾನ್ಸ್‌ ಪ್ರಬಲ ಪೈಪೋಟಿ ಒಡ್ಡಿತು. ಈ ತಂಡ 21 ಪಾಯಿಂಟ್ಸ್‌ ಕಲೆಹಾಕಿತು. ಹೀಗಿದ್ದರೂ ಅಮೆರಿಕ 44–39 ರಿಂದ ಮುನ್ನಡೆ ಕಾಪಾಡಿಕೊಂಡಿತು.

ಮೂರನೇ ಕ್ವಾರ್ಟರ್‌ನಲ್ಲೂ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಅಂತಿಮ ಕ್ವಾರ್ಟರ್‌ನಲ್ಲಿ ಫ್ರಾನ್ಸ್‌ ಅಮೆರಿಕಕ್ಕಿಂತ ಮೂರು ಪಾಯಿಂಟ್ಸ್‌ ಹೆಚ್ಚು ಕಲೆಹಾಕಿತ್ತು. ಹೀಗಿದ್ದರೂ ತಂಡದ ಚಿನ್ನದ ಕನಸು ಕೈಗೂಡಲಿಲ್ಲ.

ಆಸ್ಟ್ರೇಲಿಯಾಕ್ಕೆ ಕಂಚು: ಕಂಚಿನ ಪದಕದ ಪೈಪೋಟಿಯಲ್ಲಿ ಆಸ್ಟ್ರೇಲಿಯಾ 107–93 ಪಾಯಿಂಟ್ಸ್‌ನಿಂದ ಸ್ಲೊವೇನಿಯಾವನ್ನು ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT