ಭಾನುವಾರ, ಸೆಪ್ಟೆಂಬರ್ 19, 2021
24 °C

Tokyo Olympics| ಟೆನಿಸ್‌ನಲ್ಲಿ ಪವಾಡದ ನಿರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತದ ಟೆನಿಸ್‌ ಸ್ಪರ್ಧಿ‌ಗಳ ಪದಕದ ಹಾದಿ ಕಠಿಣವೆನಿಸಿದೆ.

ಮಹಿಳಾ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಮತ್ತು ಅಂಕಿತಾ ರೈನಾ ಕಣಕ್ಕಿಳಿಯಲಿದ್ದಾರೆ. ಸಾನಿಯಾ ಪಾಲಿಗೆ ಇದು ನಾಲ್ಕನೇ ಒಲಿಂಪಿಕ್ಸ್‌. ಅಂಕಿತಾ, ಮೊದಲ ಬಾರಿ ಮಹಾಕೂಟಕ್ಕೆ ಅಡಿ ಇಡುತ್ತಿದ್ದಾರೆ.

2020ರ ಮಾರ್ಚ್‌ ಬಳಿಕ ಇವರು ಒಮ್ಮೆಯೂ ಜೊತೆಯಾಗಿ ಆಡಿಲ್ಲ. ಒಟ್ಟಾಗಿ ಅಭ್ಯಾಸವನ್ನೂ ನಡೆಸಿಲ್ಲ. ಹೀಗಾಗಿ ಮಹತ್ವದ ಕೂಟದಲ್ಲಿ ಈ ಜೋಡಿ ಹೇಗೆ ಆಡಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಸುಮಿತ್‌ ನಗಾಲ್‌ ಅಂಗಳಕ್ಕಿಳಿಯಲಿದ್ದಾರೆ. ಪ್ರಮುಖ ಕ್ರೀಡಾಪಟುಗಳು ಕೂಟದಿಂದ ಹಿಂದೆ ಸರಿದ ಕಾರಣ ವಿಶ್ವ ರ‍್ಯಾಂಕಿಂಗ್‌ನಲ್ಲಿ 144ನೇ ಸ್ಥಾನದಲ್ಲಿರುವ ನಗಾಲ್‌ಗೆ ಒಲಿಂಪಿಕ್ಸ್‌ ಅರ್ಹತೆ ಲಭಿಸಿದೆ. ಈ ಹಿಂದೆ ನಡೆದಿದ್ದ ಚಾಲೆಂಜರ್‌ ಟೂರ್ನಿಗಳಲ್ಲಿ ನಗಾಲ್‌ ನಿರೀಕ್ಷಿತ ಸಾಮರ್ಥ್ಯ ತೋರಿಲ್ಲ. ಹಿಂದಿನ ವೈಫಲ್ಯಗಳನ್ನು ಮರೆತು ವಿಶ್ವಾಸದಿಂದ ಹೋರಾಡಬೇಕಾದ ಸವಾಲು ಅವರ ಮುಂದಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು